ಐಸಿಸಿ ವಿಶ್ವಕಪ್: ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇಷ್ಟೇ ಇಷ್ಟು ರನ್ ಅಗತ್ಯವಿದೆ!
ವಿರಾಟ್ ಕೊಹ್ಲಿ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇರುವ, ಹಲವಾರು ದಾಖಲೆಗಳನ್ನ ಹಿಂದಿಕ್ಕಿದ್ದಾರೆ. ಆದರೆ ಕಳೆದ 20 ವರ್ಷದಿಂದ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ದಾಖಲಾಗಿದ್ದ ಈ ದಾಖಲೆ ಮಾತ್ರ ಯಾರಿಂದಲು ಮುಟ್ಟಲು ಆಗಿರಲಿಲ್ಲ. ಇದೀಗ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿ 20 ವರ್ಷದಿಂದಲೂ ಉಳಿದಿರುವ ದಾಖಲೆ ಹಿಂದಿಕ್ಕಲು ಮುನ್ನುಗ್ಗಿದ್ದಾರೆ. ಇಂದೇ ಸಚಿನ್ ದಾಖಲೆ ಮುರಿಯುವ ವಿಶ್ವಾಸವಿದೆ ಕೊಹ್ಲಿ ಅಭಿಮಾನಿಗಳಿಗೆ.
ಐಸಿಸಿ ಏಕದಿನ ವಿಶ್ವಕಪ್ ಅಂದ್ರೆ ಫೀಫಾ ಕಪ್ ಅಥವಾ ಫುಟ್‌ಬಾಲ್ ವರ್ಲ್ಡ್‌ಕಪ್ ರೇಂಜ್ ಹವಾ ಇರುತ್ತೆ. ಹೀಗಾಗಿ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ಸಿಡಿಸುವ, ಒಂದೊಂದು ರನ್ ಕೂಡ ದಾಖಲೆ ಸೃಷ್ಟಿಸುತ್ತದೆ. ಆದರೆ ಇಂತಹ ಮಹತ್ವದ ಟೂರ್ನಿಯಲ್ಲಿ ನಮ್ಮವರೇ ಆದ ಸಚಿನ್ ತೆಂಡೂಲ್ಕರ್ ಅವರು ಬಹುದೊಡ್ಡ ದಾಖಲೆ ನಿರ್ಮಿಸಿದ್ದರು. 2003ರಲ್ಲಿ ಈ ರೀತಿ ಸಚಿನ್ ತೆಂಡೂಲ್ಕರ್ ಅವರು 673 ರನ್ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ರು. ಆದರೆ ಇದೀಗ ಸಚಿನ್ ಅವರ ಈ ದಾಖಲೆ ಹಿಂದಿಕ್ಕಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇತಿಹಾಸ ನಿರ್ಮಾಣ?
ಈಗಿನ ಲೆಕ್ಕಾಚಾರದ ಪ್ರಕಾರ 2023ರ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ಕೊಹ್ಲಿ 650 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು 2003ರ ವಿಶ್ವಕಪ್‌ನ ಟೂರ್ನಿಯಲ್ಲಿ ಗಳಿಸಿದ್ದ 673 ರನ್‌ಗೆ ಹತ್ತಿರದಲ್ಲಿ ಇದ್ದು ಕೊಹ್ಲಿ ಇಂದಿನ ಪಂದ್ಯದಲ್ಲಿಯೇ ಸಚಿನ್ ದಾಖಲೆ ಹಿಂದಿಕ್ಕುವ ನಿರೀಕ್ಷೆ ಇದೆ. ಕೊಹ್ಲಿ ಬಿಟ್ಟರೆ ಭಾರತದ ರೋಹಿತ್ ಶರ್ಮಾ ಅವರಿಗೂ ಇಂದು ಅಂತಹ ಅಮೂಲ್ಯ ಅವಕಾಶ ಇತ್ತು. ಆದರೆ ರೋಹಿತ್ ಶರ್ಮಾ ಬೇಗ ಔಟಾಗಿ ಅರ್ಧ ಶತಕ ವಂಚಿತರಾಗಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆಗಳು
* ಅತಿಹೆಚ್ಚು ಶತಕ ಗಳಿಸಿದ 2ನೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದು, ಕೊಹ್ಲಿ ಒಟ್ಟು 79 ಸೆಂಚ್ಯುರಿ ಗಳಿಸಿ ಸಚಿನ್ ದಾಖಲೆಗೆ ಹತ್ತಿರವಿದ್ದಾರೆ
* ಟೆಸ್ಟ್ ನಾಯಕನಾಗಿ ವೇಗದ 4000 ರನ್ ಗಳಿಕೆ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲೇ ಇದೆ, ಹಿಂದೆ ಬ್ರಿಯಾನ್ ಲಾರಾ ಹೆಸರಲ್ಲಿ ಇತ್ತು
* ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಹೆಗ್ಗಳಿಕೆ ವಿರಾಟ್ ಕೊಹ್ಲಿಗೆ ಇದ್ದು, 115 ಪಂದ್ಯ ಆಡಿ 4,008 ರನ್ ಗಳಿಸಿದ್ದಾರೆ ಕೊಹ್ಲಿ
* ಸಚಿನ್ ದಾಖಲೆ ಮುರಿದಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 10,000 ರನ್ ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ
* ಒಂದೇ ದಶಕ ಅಂದ್ರೆ 10 ವರ್ಷದಲ್ಲಿ 20,000 ಅಂತಾರಾಷ್ಟ್ರೀಯ ರನ್ ಗಳಿಸಿದ ಏಕೈಕ ಕ್ರಿಕೆಟಿಗ ಅಂದರೆ ಅದು ಕಿಂಗ್ ಕೊಹ್ಲಿ ಮಾತ್ರ
* ವಿರಾಟ್ ಕೊಹ್ಲಿ ಭಾರತದ ಪರ ಒಟ್ಟು 514 ಪಂದ್ಯ ಆಡಿದ್ದು, ಈ ಪೈಕಿ ಭಾರತದ 308 ಗೆಲುವಿನಲ್ಲಿ ಸಾಕ್ಷಿಯಾಗಿದ್ದಾರೆ
* ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಗಳಿಸಿದ ಆಟಗಾರರಲ್ಲಿ ವಿರಾಟ್ ಕೊಹ್ಲಿ 5ನೇ ಸ್ಥಾನ ಪಡೆದಿದ್ದು, 7 ಡಬಲ್ ಸೆಂಚ್ಯುರಿ ಗಳಿಸಿದ್ದಾರೆ
* ಕೊಹ್ಲಿ 2018ರಲ್ಲಿ ಕ್ರಿಕೆಟ್‌ನ 3 ವಿಭಾಗದಲ್ಲೂ ಐಸಿಸಿ ನೀಡುವ 3 ಪ್ರಶಸ್ತಿ ಪಡೆದರು, ಈ ದಾಖಲೆ ಮಾಡಿದ ಏಕೈಕ ಕ್ರಿಕೆಟಿಗ ಕೊಹ್ಲಿ
* ಕೊಹ್ಲಿ ನಾಯಕನಾಗಿ ಭಾರತದ 71 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಕೊಟ್ಟರು
* ವಿರಾಟ್ ಕೊಹ್ಲಿ ಅಂದರೆ ಆಸ್ಟ್ರೇಲಿಯಾಗೆ ಭಯ, ಯಾಕಂದ್ರೆ ಇದೇ ಕೊಹ್ಲಿ ಆಸಿಸ್ ವಿರುದ್ಧ ಒಟ್ಟು 16 ಶತಕ ಸಿಡಿಸಿದ್ದಾರೆ












Click it and Unblock the Notifications