Virat Kohli: ಆರ್‌ಸಿಬಿ ಬಿಡುವ ಬಗ್ಗೆ ಯೋಚಿಸಿದ್ದ ವಿರಾಟ್ ಕೊಹ್ಲಿ; ಆಮೇಲೆ ಆಗಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜೊತೆ ವಿರಾಟ್ ಕೊಹ್ಲಿ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಸತತ 18 ವರ್ಷ ಒಂದೇ ತಂಡಕ್ಕಾಗಿ ಆಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು. ಯುವ ಆಟಗಾರನಾಗಿ ತಂಡಕ್ಕೆ ಎಂಟ್ರಿ ಕೊಟ್ಟ ಅವರು ಇಂದು ಲೆಜೆಂಡ್ ಆಟಗಾರ. 17 ವರ್ಷಗಳಲ್ಲಿ ಆರ್ ಸಿಬಿ ಕಪ್ ಗೆಲ್ಲದೇ ಇದ್ದರೂ, ಅಭಿಮಾನಿಗಳು ಮಾತ್ರ ಆರ್ ಸಿಬಿ, ಕೊಹ್ಲಿಯನ್ನು ಅಷ್ಟೇ ಅಭಿಮಾನದಿಂದ ಕಾಣುತ್ತಾರೆ.

9 ವರ್ಷಗಳ ಕಾಲ ಆರ್ ಸಿಬಿ ತಂಡದ ನಾಯಕರಾಗಿದ್ದ ಅವರು ಆರ್ ಸಿಬಿಯನ್ನು ಜನಪ್ರಿಯ ಪ್ರಾಂಚೈಸಿಯಾಗಿ ಬೆಳೆಸಿದ್ದಾರೆ. ವೈಯಕ್ತಿಕವಾಗಿ ಯಾರಿಗೂ ಮಾಡಲಾಗದ ಹಲವು ದಾಖಲೆಗಳನ್ನು ಮಾಡಿದ್ದರೂ ಕಪ್ ಇಲ್ಲದ ಕೊರತೆಯೊಂದೇ ತಂಡವನ್ನೂ, ಅಭಿಮಾನಿಗಳನ್ನು ಕಾಡುತ್ತಿದೆ. ಕೊಹ್ಲಿ ಇಲ್ಲದ ಆರ್ ಸಿಬಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಕೂಡ ಒಂದು ಹಂತದಲ್ಲಿ ಆರ್ ಸಿಬಿ ಬಿಡುವ ಬಗ್ಗೆ ಯೋಚಿಸಿದ್ದರಂತೆ, ಇದನ್ನು ಅವರೇ ಹೇಳಿದ್ದಾರೆ.

virat kohli moment leaving rcb ipl 2025

ವೈಯಕ್ತಿಕ ಮಟ್ಟದಲ್ಲಿ, ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆಗಳು ಯಾರಿಗೂ ಕಡಿಮೆಯಿಲ್ಲ. ಐಪಿಎಲ್‌ನಲ್ಲಿ ಯಾವುದೇ ಆಟಗಾರ ಹೆಚ್ಚು ರನ್ ಗಳಿಸಿಲ್ಲ ಅಥವಾ ಹೆಚ್ಚು ಶತಕಗಳನ್ನು ಬಾರಿಸಿಲ್ಲ. ಪಂದ್ಯಾವಳಿಯಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ 7000 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗದಿದ್ದರೂ, ಕೊಹ್ಲಿ ಈಗಾಗಲೇ 8000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರ 8 ಶತಕಗಳು ಸಹ ಐಪಿಎಲ್ ದಾಖಲೆಯಾಗಿದೆ.

ಬ್ಯಾಟಿಂಗ್‌ನಲ್ಲಿ ಇಷ್ಟೊಂದು ಸಾಧನೆ ಮಾಡಿದ ನಂತರವೂ, ವಿರಾಟ್ ಕೊಹ್ಲಿ ಇನ್ನೂ ಐಪಿಎಲ್ ಗೆಲ್ಲಲು ಸಾಧ್ಯವಾಗಿಲ್ಲ. ಅವರು 2016 ರಲ್ಲಿ ಫೈನಲ್‌ಗೆ ಬಂದರೂ ಕೊನೆಯ ಹಂತದಲ್ಲಿ ಸೋಲೊಪ್ಪಿಕೊಂಡರು. 2016ರ ಆವೃತ್ತಿಯಲ್ಲಿ 973 ರನ್ ಗಳಿಸಿದ್ದೂ ಈವರೆಗೂ ದಾಖಲೆಯಾಗಿದೆ. ಒಂದೇ ಆವೃತ್ತಿಯಲ್ಲಿ 4 ಶತಕ ಗಳಿಸಿರುವುದು ಕೂಡ ದಾಖಲೆಯಾಘಿದೆ.

ಆರ್ ಸಿಬಿ ಬಿಡುವ ಬಗ್ಗೆ ಯೋಚನೆ

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ 2016-19ರ ಹಂತದಲ್ಲಿ ಆರ್‌ಸಿಬಿ ತೊರೆಯುವ ಬಗ್ಗೆ ಯೋಚಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಕೊಹ್ಲಿ ತಮಗೆ ಬೇರೆ ತಂಡವನ್ನು ಸೇರುವ ಅವಕಾಶ ಸಿಕ್ಕಿತ್ತು ಎಂದು ಹೇಳಿದರು.

ನಾನು ಈ ಮೊದಲೇ ಹಲವು ಬಾರಿ ಹೇಳಿದ್ದೇಬೆ. ನನ್ನ ವೃತ್ತಿಜೀವನದ ಉತ್ತುಂಗದಲ್ಲಿ 2016-19ರಲ್ಲಿ ತಂಡವನ್ನು ಬದಲಾಯಿಸಲು ಹಲವು ಸಲಹೆಗಳು ಬಂದಿದ್ದವು. ಒಂದು ಹಂತದಲ್ಲಿ, ನನ್ನ ವೃತ್ತಿಜೀವನದಲ್ಲಿ ತುಂಬಾ ನಡೆಯುತ್ತಿದ್ದರಿಂದ ಅದು ನನಗೆ ನಿಜವಾಗಿಯೂ ಕಷ್ಟವಾಗಿತ್ತು. ನಾನು 7-8 ವರ್ಷಗಳ ಕಾಲ ಭಾರತದ ನಾಯಕನಾಗಿದ್ದೆ. 9 ವರ್ಷಗಳ ಕಾಲ ಆರ್‌ಸಿಬಿಯನ್ನು ಮುನ್ನಡೆಸಿದ್ದೆ. ಬ್ಯಾಟಿಂಗ್ ದೃಷ್ಟಿಕೋನದಿಂದ ನಾನು ಆಡಿದ ಪ್ರತಿಯೊಂದು ಪಂದ್ಯದಲ್ಲೂ ನನ್ನಿಂದ ನಿರೀಕ್ಷೆಗಳಿದ್ದವು ಎಂದಿದ್ದಾರೆ.

ಆರ್ ಸಿಬಿ ಜೊತೆ ತನ್ನ ಪ್ರಯಾಣವನ್ನು ಮುಂದುವರಿಸಲು ಅಂತಿಮವಾಗಿ ಮನವೊಲಿಸಿದ ಅಂಶದ ಬಗ್ಗೆ ಮಾತನಾಡಿದರು. ಕೊಹ್ಲಿ ಬೇರೆ ತಂಡವನ್ನು ಸೇರಲು ಆಮಿಷವೊಡ್ಡದಿದ್ದರೂ, ಅದರ ಬಗ್ಗೆ ಯೋಚಿಸಿದೆ ಎಂದು ಹೇಳಿದರು. ಆದರೂ ಕೊನೆಗೆ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದರು.

ಗೆದ್ದರೂ, ಸೋತರೂ ಇದೇ ನನ್ನ ಮನೆ

ನಾನು ತುಂಬಾ ಯೋಚಿಸಿದೆ. ಹೊಸ ತಂಡಕ್ಕೆ ಹೋಗಿ ಜೀವನ ಕಂಡುಕೊಳ್ಳಬೇಕಾ ಎಂದು. ಆದರೆ ನನಗೆ ಸಂಬಂಧವು ಹೆಚ್ಚು ಮೌಲ್ಯಯುತವಾಗಿದೆ. ಹಲವು ವರ್ಷಗಳಿಂದ ತಂಡದ ಜೊತೆ ಇರುವ ಗೌರವವನ್ನು ನಾನು ಅರ್ಥ ಮಾಡಿಕೊಂಡೆ. ಈಗ ನಾನು ಅದನ್ನು ನಿಭಾಯಿಸುತ್ತೇನೆ. ನಾವು ಗೆದ್ದರೂ ಅಥವಾ ಗೆಲ್ಲದಿದ್ದರೂ, ಅದು ಸರಿ. ಇದು ನನ್ನ ಮನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+