RCB vs KKR: ಮೊದಲ ಪಂದ್ಯದಲ್ಲೇ ಮಹತ್ವದ ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ!
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಆರ್ ಸಿಬಿ ವಿರುದ್ಧ ಸೆಣೆಸಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು ಈಗಾಗಲೇ ಎರಡೂ ತಂಡಗಳು ಅಭ್ಯಾಸ ನಡೆಸಿದ್ದು ಮೊದಲ ಪಂದ್ಯಕ್ಕೆ ಸಜ್ಜಾಗಿವೆ. ಐಪಿಎಲ್ 18ನೇ ಆವೃತ್ತಿಯ ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಆರ್ ಸಿಬಿ ತಂಡದ ದಂತಕಥೆ, ಲೆಜೆಂಡ್ ಎಂದೇ ಕರೆಸಿಕೊಲ್ಳುವ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಕೊಹ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ ಮೈದಾನಕ್ಕೆ ಕಾಲಿಟ್ಟರೆ, 400 ಟಿ20 ಪಂದ್ಯಗಳಲ್ಲಿ ಆಡಿದ ಮೂರನೇ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ 399 ಟಿ20 ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಬಳಿಕ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಕ್ರಿಕೆಟಿಗೆ ಎನ್ನುವ ದಾಖಲೆ ಮಾಡಲಿದ್ದಾರೆ ವಿರಾಟ್ ಕೊಹ್ಲಿ. ರೋಹಿತ್ ಶರ್ಮಾ 448 ಟಿ20 ಪಂದ್ಯಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದಿನೇಶ್ ಕಾರ್ತಿಕ್ 412 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಹೆಚ್ಚು ಟಿ20 ಪಂದ್ಯ ಆಡಿದ ಭಾರತೀಯ ಆಟಗಾರರು
ರೋಹಿತ್ ಶರ್ಮಾ: 448 ಪಂದ್ಯಗಳು
ದಿನೇಶ್ ಕಾರ್ತಿಕ್: 412 ಪಂದ್ಯಗಳು
ವಿರಾಟ್ ಕೊಹ್ಲಿ: 399 ಪಂದ್ಯಗಳು*
ಎಂಎಸ್ ಧೋನಿ: 391 ಪಂದ್ಯಗಳು
ಸುರೇಶ್ ರೈನಾ: 336 ಪಂದ್ಯಗಳು
ವಿಶ್ವ ಮಟ್ಟದಲ್ಲಿ 400ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 23ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ 695 ಟಿ20 ಪಂದ್ಯಗಳನ್ನು ಆಡುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಟಿ20 ಪಂದ್ಯ ಆಡಿದ ಕ್ರಿಕೆಟಿಗರು
ಕೀರನ್ ಪೊಲಾರ್ಡ್: 695 ಪಂದ್ಯಗಳು
ಡ್ವೇನ್ ಬ್ರಾವೋ: 582 ಪಂದ್ಯಗಳು
ಶೋಯೆಬ್ ಮಲಿಕ್: 554 ಪಂದ್ಯಗಳು
ಆಂಡ್ರೆ ರಸೆಲ್: 538 ಪಂದ್ಯಗಳು
ಸುನಿಲ್ ನರೈನ್: 536 ಪಂದ್ಯಗಳು
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ 252 ಪಂದ್ಯಗಳನ್ನು ಆಡಿದ್ದು 8004 ರನ್ ಗಳಿಸಿದ್ದಾರೆ. ಶಿಖರ್ ಧವನ್ 6769 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.












Click it and Unblock the Notifications