Virat Kohli & Gautam Gambhir: ಯಾರು ಅಂದ್ಕೊಂಡಿದ್ದೀರ..ನಮ್ ಬಾಮೈದ ಕಣ್ರಲಾ ಅವ್ನು- ಕಿರಾತಕ ವಿಡಿಯೋ ಭಾರೀ ವೈರಲ್
ಬೆಂಗಳೂರು, ಮಾರ್ಚ್, 30: ಆರ್‌ಸಿಬಿ ವಿರುದ್ಧ ಯಾವುದೇ ಟೀಂ ಕಣಕ್ಕಿಳಿದಿರಲಿ, ಪಂದ್ಯ ಆರಂಭ ಹಾಗೂ ಕೊನೆಯಲ್ಲಿ ಒಂದಲ್ಲ ಒಂದು ರೀತಿಯ ಪೋಸ್ಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಚೆನ್ನೈ, ಮುಂಬೈ, ಕೆಕೆಆರ್ ವಿರುದ್ಧ ಪಂದ್ಯ ಇರುವಾಗ ಮಾತ್ರ ಅಭಿಮಾನಿಗಳು ಕ್ರೇಜ್ ತುಸು ಹೆಚ್ಚಾಗಿಯೇ ಇರುತ್ತದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಪರವಾಗಿ ವಿವಿಧ ರೀತಿಯ ಪೋಸ್ಟ್‌ಗಳನ್ನು ಸೃಷ್ಟಿಸಿರುತ್ತಾರೆ. ಇನ್ನು ನಿನ್ನೆ ಬೆಂಗಳೂರಿನಲ್ಲಿ ನಡೆದ ಪಂದ್ಯಕ್ಕೆ ಹೋಲಿಸಿ ಮಾಡಿರುವ ಪೋಸ್ಟ್‌ವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಕನ್ನಡದಲ್ಲಿ ಯಶ್ ಅಭಿನಯದ ಕಿರಾತಕ ಸಿನಿಮಾ ತುಂಬಾ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಲವ್ ಸ್ಟೋರಿಗಿಂತ ಕಾಮಿಡಿಯೇ ಹೆಚ್ಚಾಗಿದೆ. ಇನ್ನು ಈ ಸಿನಿಮಾದ ಪ್ರತಿ ಸೀನ್‌ಗಳು ಅಭಿಮಾನಿಗಳ ಮನಸಸ್ಸನ್ನು ಗೆದ್ದಿದ್ದವು. ಅದರಲ್ಲೂ ಪಡ್ಡೆ ಹೈಕ್ಳಿಗಂತೂ ಹೇಳಿ ಮಾಡಿಸಿದ ಸಿನಿಮಾನ ಇದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ರೀಲ್ಸ್‌ಗಳನ್ನು ಮಾಡುವವರು ಹೆಚ್ಚಾಗಿದ್ದು, ಹಿಂದಿನ ಸಿನಿಮಾಗಳ ಡೈಲಾಗ್, ಹಾಡುಗಳು ಈಗ ಟ್ರೆಂಡ್ ಆಗುತ್ತಿದೆ.

ಕಿರಾಟಕ ಸಿನಿಮಾದ ಅಣ್ತಮ್ಮ ಅನ್ನೋ ಡೈಲಾಗ್ ಮಾತ್ರ ಹಳ್ಳಿ ಹೈದರ ಹೃದಯ ಗೆದ್ದಿದೆ. ಈ ಸಿನಿಮಾದಲ್ಲಿ ತನ್ನ ಮಾವನಿಗೆ ಸ್ನೇಹಿತರು ಹೊಡೆಯಲು ಬಂದಾಗ ಆಗ ಯಶ್ "ಹೆಗಲ ಮೇಲಿನ ಮಚ್ಚು ತೆಗಿಲಾ.. ಮನೆ ಬಾಗಿಲಿಗೆ ಬಂದ ನಮ್ಮ ಬಾಮೈದನಿಗೆ ಯಾರೂ ಇಲ್ಲ ಅಂದ್ಕೊಂಡಿದ್ದೀರಾ, ಬನ್ರಲಾ" ಎಂದು ಹೇಳಿದಾಗ ಕಾಮಿಡಿ ನಟ ಚಿಕ್ಕಣ್ಣ ಹಿಂದೆ ಸರಿಯುತ್ತಾರೆ. ಈ ಕಾಮಿಡಿ ಸೀನ್ ಅಂತೂ ಭಾರೀ ವೈರಲ್ ಆಗಿತ್ತು. ಇದೀಗ ಮತ್ತೆ ಸದ್ದು ಮಾಡುತ್ತಿದೆ.
ಮೊದಲೇ ವಿರಾಟ್ ಕೊಹ್ಲಿ, ಗೌತಮ್ ಹಾಗೂ ಗಂಭೀರ್ ಹಾವು, ಮುಂಗಸಿಯಂತೆ ಮುಂಗೋಪಿತನವನ್ನು ಪ್ರದರ್ಶಿಸಿರುವ ಪ್ರಸಂಗಗಳು ಈಗಾಗಲೇ ಸುಮಾರು ಬಾರಿ ನಡೆದಿವೆ. ಇನ್ನು ನಿನ್ನೆ (ಮಾರ್ಚ್ 29) ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಪಂದ್ಯ ನಡೆದಿದ್ದು, ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 182 ರನ್ ಕಲೆಹಾಕಿತ್ತು. ಬಳಿಕ ಈ ರನ್‌ಗಳನ್ನು ಬೆನ್ನತ್ತಿದ ಕೆಕೆಆರ್ ಕೊನೆಗೂ ಜಯ ಸಾಧಿಸೇ ಬಿಟ್ಟಿತ್ತು. ಈ ವೇಳೆ ಕೆಕೆಆರ್ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ಎಲ್ಲಿ ಗಲಾಟೆ ನಡೆಯುತ್ತದೆಯೋ ಎನ್ನುವ ಆತಂಕ ಎರಡೂ ತಂಡಗಳ ಅಭಿಮಾನಿಗಳದ್ದಾಗಿತ್ತು.
ಆದರೆ ನಿನ್ನೆಯ ಪಂದ್ಯದಲ್ಲಿ ಕೆಕೆಆರ್ ಗೆಲ್ಲುತ್ತಿದ್ದಂತೆ ಮೈದಾನಕ್ಕೆ ಬಂದ ಗೌತಮ್ ಗಂಭೀರ್ ಕೊಹ್ಲಿ ಜೊತೆ ನಗುತ್ತಲೇ ಮಾತನಾಡಿದ್ದು ಕಂಡುಬಂದಿತು. ಈ ವೇಳೆ ಇಬ್ಬರು ನಗುತ್ತಾ ಪರಸ್ಪರ ಮಾತನಾಡಿದ್ದನ್ನು ಕಂಡ ಅಭಿಮಾನಿಗಳು ಸಂತಸಪಟ್ಟರು. ಇನ್ನು ಇದನ್ನೇ ರೀಲ್ಸ್ ಆಗಿ ಪರಿವರ್ತಿಸಿ, ಕಿರಾತಕ ಸಿನಿಮಾದ ಬಾಮೈದ ಹಾಗೂ ಅಳಿಯ ಎಂಬ ಕಾಮಿಡಿ ಸೀನ್‌ಗೆ ಹೋಲಿಸಿದ್ದಾರೆ. ಈ ವಿಡಿಯೋ ಅಂತೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications