Virat Kohli: ಅವ್ರು ಮಾಡಿದ್ರೆ ಸರಿ, ನಮ್ಮವರು ಮಾಡಿದ್ರೆ ಉರಿನಾ? ವಿರಾಟ್ ಕೊಹ್ಲಿ ಫ್ಯಾನ್ಸ್ ಪ್ರಶ್ನೆ!

ನಮ್ಮ ಬೆಂಗಳೂರು ತಂಡದ ಮಾಜಿ ನಾಯಕ, ಕನ್ನಡ ನಾಡಿನ ಐಪಿಎಲ್ ತಂಡಕ್ಕೆ ಅಂತ ಕಳೆದ ಒಂದೂವರೆ ದರಶಕದಿಂದ ಆಡುತ್ತಾ ಬಂದಿರುವ ವಿರಾಟ್ ಕೊಹ್ಲಿಗೆ ನೂರಾರು ಕೋಟಿ ಅಭಿಮಾನಿಗಳ ಬೆಂಬಲ ಇದೆ. ಸಾವಿರಾರು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡು ದೊಡ್ಡ ಹೆಸರು ಮಾಡಿರುವ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅವಮಾನ ಮಾಡಿ ಸೇಡು ತೀರಿಸಿಕೊಳ್ಳಲು, ಕಾಂಗರೂ ನಾಡಿನ ಕೆಲವರು ಕಾಯುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ವಿರಾಟ್ ಕೊಹ್ಲಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ!

ಹೌದು, ವಿರಾಟ್ ಕೊಹ್ಲಿ ಅವರು ಒಂದು ರೀತಿ ನ್ಯೂಟನ್ 3ನೇ ನಿಯಮ ಇದ್ದಂತೆ. ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೆರಳಿಸಿ ಉದ್ಧಾರ ಆದವರು ಇಲ್ಲ ಎನ್ನಬಹುದು. ಯಾಕಂದ್ರೆ ವಿರಾಟ್ ಕೊಹ್ಲಿ ಮೈಂಡ್ ಗೇಮ್ ಆಡಲು ನಿಂತರೆ ಯಾರೂ ತಡೆಯಲು ಆಗಲ್ಲ ಅಂತಾರೆ ಅಭಿಮಾನಿಗಳು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಅವರನ್ನು ಕೆಣಕಿದ್ದ ಹಲವು ಆಟಗಾರರು ಆಡಲು ಚಾನ್ಸ್ ಸಿಗದೆ ಆಯ್ಕೊಂಡು ತಿಂತಾ ಇದ್ದಾರೆ ಅಂತಾ ಕೂಡ ಆರೋಪ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ.... ಬನ್ನಿ ಮುಂದೆ ಓದೋಣ.

Virat Kohli Fans Are Saying This About Australian Former Player Ricky Ponting

'ದಾರಿತಪ್ಪಿದ ಮಕ್ಕಳು' ಆಸಿಸ್ ಆಟಗಾರರು?

ಹೀಗಿದ್ದಾಗ, ವಿರಾಟ್ ಕೊಹ್ಲಿ ಅವರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅವಮಾನ ಮಾಡ್ತಾ & ಮೋಸ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಇಷ್ಟೆಲ್ಲದರ ನಡುವೆ ಕೊಹ್ಲಿ ಅವರ ಫ್ಯಾನ್ಸ್ ರಿಕ್ಕಿ ಪಾಂಟಿಂಗ್ ಮಾಡಿದ್ದ ತಪ್ಪಿನ ವಿಡಿಯೋ ಮುಂದಿಟ್ಟು, ಅವ್ರು ಮಾಡಿದ್ರೆ ಸರಿ, ನಮ್ಮವರು ಮಾಡಿದ್ರೆ ಉರಿನಾ? ಅಂತಾ ಕೇಳ್ತಿದ್ದಾರೆ!

ಹಾಗಾದ್ರೆ, ಆಸ್ಟ್ರೇಲಿಯಾ ತಂಡದ ಆಟಗಾರನಾಗಿದ್ದ ರಿಕ್ಕಿ ಪಾಂಟಿಂಗ್ ಮಾಡಿದ್ದ ಘನಂದಾರಿ ಕೆಲಸ ಏನು ಗೊತ್ತೆ? ಈಗ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡುತ್ತಿರುವ ಆಸ್ಟ್ರೇಲಿಯಾದ ಆಟಗಾರರು ಕೆಲವು ವರ್ಷಗಳ ಹಿಂದೆ ಏನೆಲ್ಲಾ 'ದಾರಿತಪ್ಪಿದ ಮಕ್ಕಳ' ಕೆಲಸ ಮಾಡ್ತಿದ್ದರು ಗೊತ್ತಾ?

ಕಿರಿಕ್ ಪಾಂಟಿಂಗ್ ವಿಡಿಯೋ ವೈರಲ್!

ಇದು ಕೇವಲ 20 ವರ್ಷಗಳ ಹಿಂದಿನ ಮಾತು, ಆಗ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಯಾವುದೇ ತಂಡದ ಕೈಯಲ್ಲೂ ಆಗುತ್ತಾ ಇರಲಿಲ್ಲ. ಯಾಕಂದ್ರೆ ಕ್ರಿಕೆಟ್ ಲೋಕದಲ್ಲಿ ಇದೇ ತಂಡ ತನ್ನ ಬಿಗಿಯಾದ ಹಿಡಿತ ಹೊಂದಿತ್ತು. ಹೀಗಿದ್ದಾಗ ಭಾರತದ ಆಟಗಾರರ ವಿರುದ್ಧವೂ ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಜಿಂಗ್ ಮಾಡುತ್ತಾ, ಕಾಟ ಕೊಡುತ್ತಿದ್ದರು. ಅದೇ ರೀತಿಯಾಗಿ ರಿಕ್ಕಿ ಪಾಂಟಿಂಗ್ ಕೂಡ ಹರ್ಭಜನ್ ಸಿಂಗ್ ಅವರ ಜೊತೆಗೆ ಕಿರಿಕ್ ಮಾಡಿದ್ದ ವಿಡಿಯೋನ ಈಗ ಮತ್ತೆ ವೈರಲ್ ಮಾಡಲಾಗುತ್ತಿದೆ. ಈ ಮೂಲಕ, ಭಾರತದ ವಿರಾಟ್ ಕೊಹ್ಲಿ ಮಾಡಿದ್ರೆ ತಪ್ಪು, ಆಸ್ಟ್ರೇಲಿಯಾ ಆಟಗಾರರು ಮಾಡಿದ್ರೆ ತಪ್ಪಲ್ವಾ? ಅಂತಾ ಪ್ರಶ್ನೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+