Virat Kohli: ಕೊಹ್ಲಿ ಬದಲಾದರೂ ರೋಹಿತ್ ಶರ್ಮಾ ಬದಲಾಗಲಿಲ್ಲ ಎಂದ ಮಾಜಿ ಆಟಗಾರ

ನಾಯಕತ್ವ ಮತ್ತು ಯಶಸ್ಸು ಸಿಕ್ಕ ಬಳಿಕ ವಿರಾಟ್ ಕೊಹ್ಲಿ ಸಾಕಷ್ಟು ಬದಲಾದರು, ಆದರೆ ರೋಹಿತ್ ಶರ್ಮಾ ಬದಲಾಗಲಿಲ್ಲ ಎಂದು ಭಾರತ ತಂಡದ ಮಾಜಿ ಆಟಗಾರ ಅಮಿತ್ ಮಿಶ್ರಾ ಅವರು ದೊಡ್ಡ ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಭಾರತ ತಂಡಕ್ಕಾಗಿ ಆಡಿದ್ದ ಮಿಶ್ರಾ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕೊಹ್ಲಿಗೆ ತಂಡದಲ್ಲಿ ಕಡಿಮೆ ಸ್ನೇಹಿತರಿದ್ದಾರೆ, ಅವರು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಾರೆ ಎಂದು ಹೇಳಿದ್ದಾರೆ.

virat kohli fame captaincy change rohit sharma comparison

ರೋಹಿತ್ ಶರ್ಮಾ ಅವರನ್ನು ಉದಾಹರಣೆಯಾಗಿ ನೀಡಿರುವ ಅಮಿತ್ ಮಿಶ್ರಾ, ಇಬ್ಬರ ನಡುವಿನ ವ್ಯತ್ಯಾಸ ಏನು ಎಂದು ಹೇಳಿದ್ದಾರೆ. ನಾಯಕತ್ವ ಸಿಕ್ಕ ಬಳಿಕ ವಿರಾಟ್ ಕೊಹ್ಲಿ ಬದಲಾದರೂ, ರೋಹಿತ್ ಶರ್ಮಾ ಬದಲಾಗದೇ ಮೊದಲಿನ ಹಾಗೆ ಇದ್ದರು ಎಂದು ಹೇಳಿದ್ದಾರೆ.

ಕೊಹ್ಲಿ ಬದಲಾಗಲು ಇದೇ ಕಾರಣ!

ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅಮಿತ್ ಮಿಶ್ರಾ, ಕೊಹ್ಲಿ ನಾಯಕರಾದ ನಂತರ ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದರು. ತಾನು 14 ವರ್ಷ ವಯಸ್ಸಿನಿಂದಲೂ ವಿರಾಟ್ ಅವರನ್ನು ನೋಡಿದ್ದೇನೆ, ಮೊದಲು ಅವರನ್ನು ಕಂಡರೆ ಗೌರವ ಇತ್ತು, ಆದರೆ ಈಗ ಇಲ್ಲ ಎಂದಿದ್ದಾರೆ.

ನಾನು ಸುಳ್ಳು ಹೇಳುವುದಿಲ್ಲ. ಒಬ್ಬ ಕ್ರಿಕೆಟಿಗನಾಗಿ, ನಾನು ಅವರನ್ನು ತುಂಬಾ ಗೌರವಿಸುತ್ತೇನೆ, ಆದರೆ ನಾನು ಅವರ ಜೊತೆ ಅದೇ ಸಮೀಕರಣವನ್ನು ಹಂಚಿಕೊಳ್ಳುವುದಿಲ್ಲ. ವಿರಾಟ್‌ಗೆ ಏಕೆ ಕಡಿಮೆ ಸ್ನೇಹಿತರಿದ್ದಾರೆ? ಕೊಹ್ಲಿ ಮತ್ತು ರೋಹಿತ್‌ ಸ್ವಭಾವಗಳು ವಿಭಿನ್ನವಾಗಿವೆ ಎಂದು ಹೇಳಿದರು.

ವಿರಾಟ್ ಸಾಕಷ್ಟು ಬದಲಾಗಿರುವುದನ್ನು ನೋಡಿದ್ದೇನೆ. ನಾವು ಮಾತನಾಡುವುದನ್ನು ಬಹುತೇಕ ನಿಲ್ಲಿಸಿದ್ದೇವೆ. ನೀವು ಖ್ಯಾತಿ ಮತ್ತು ಅಧಿಕಾರವನ್ನು ಪಡೆದಾಗ, ಜನರು ಒಂದು ಉದ್ದೇಶಕ್ಕಾಗಿ ತಮ್ಮನ್ನು ತಲುಪುತ್ತಿದ್ದಾರೆ ಎಂದು ಅವರು ಭಾವಿಸುತ್ತಾರೆ. ನಾನು ಎಂದಿಗೂ ಅಂತಹವರಲ್ಲಿ ಒಬ್ಬನಾಗಿರಲಿಲ್ಲ ಎಂದರು.

ಗಂಭೀರ್-ಕೊಹ್ಲಿ ಜಗಳದ ಬಗ್ಗೆ ಮಾತು

ಗಂಭೀರ್ ಮತ್ತು ಕೊಹ್ಲಿ ನಡುವಿನ ಜಗಳವನ್ನು ಕೊನೆಗೊಳಿಸಲು ಯಾರು ಮೊದಲ ಹೆಜ್ಜೆ ಇಟ್ಟರು ಎನ್ನುವ ಬಗ್ಗೆ ಕೂಡ ಮಿಶ್ರಾ ಮಾತನಾಡಿದರು. ಐಪಿಎಲ್ 2023 ರ ಸಮಯದಲ್ಲಿ ಇಬ್ಬರೂ ಮೈದಾನದಲ್ಲಿ ಜಗಳ ಆಡಿದ್ದರು. ಅದರಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮುಂದಾಗಿದ್ದು ಕೊಹ್ಲಿಯಲ್ಲ ಗಂಭೀರ್ ಎಂದು ಮಿಶ್ರಾ ಹೇಳಿದ್ದಾರೆ.

ಇಬ್ಬರ ನಡುವೆ ಜಗಳ ಕೊನೆಯಾಗಲು ಗೌತಮ್ ಗಂಭೀರ್ ಕಾರಣ. ಗಂಭೀರ್ ಮೊದಲು ಹೋಗಿ ಕೊಹ್ಲಿ ಬಳಿ, ಹೇಗಿದ್ದೀಯ, ಕುಟುಂಬ ಹೇಗಿದೆ ಎಂದು ಕೇಳಿದರು. ಇದರಿಂದ ಇಬ್ಬರ ನಡುವಿನ ಮುನಿಸಿಗೆ ತೆರೆ ಎಳೆದಿದ್ದು ಗಂಭೀರ್ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+