Virat kohli: ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ವಿರಾಟ್ ಕೊಹ್ಲಿ ಮಗಳಿಗೆ ಅಡ್ಮಿಶನ್? ಯಾವ ಸ್ಕೂಲ್, ಅಲ್ಲಿನ ಫೀಜ್ ಎಷ್ಟು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ರಿ ಅನುಷ್ಕಾ ಶರ್ಮಾ ಅವರು ತಮ್ಮ ಹುಟ್ಟುಹಬ್ಬವನ್ನ ಮೇ 1 ರಂದು ಆಚರಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ತಮ್ಮ ಬಾಳ ಸಂಗಾತಿ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಶುಭಾಶಯ ಕೋರಿದ್ದಾರೆ. ತಮ್ಮ ಇನ್ ಸ್ಟಾಂಗ್ರಾಂ ನಲ್ಲಿ "ನನ್ನ ಆತ್ಮೀಯ ಗೆಳತಿ, ನನ್ನ ಜೀವನ ಸಂಗಾತಿ, ನನ್ನಿಷ್ಟದ ಒಡನಾಡಿ, ನನ್ನ ಪ್ರೀತಿಯ ಅರ್ಧಾಂಗಿ, ನನ್ನ ಸರ್ವಸ್ವವೂ ಆಗಿರುವ ಜೀವನದ ಮಾರ್ಗದರ್ಶಕ ಬೆಳಕೇ. ಪ್ರತಿದಿನ, ಪ್ರತಿಕ್ಷಣವೂ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.
ಇನ್ನೂ ಭಾರತ ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ತನ್ನ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಪುತ್ರಿ ವಾಮಿಕಾ ಹಾಗೂ ಪುತ್ರ ಅಕಾಯ್ ಅವರ ಫೋಟೋವನ್ನ ಇದುವರೆಗೂ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ರಿವೀಲ್ ಮಾಡಿಲ್ಲ. ಇದೀಗ ಮಗಳ ವಿಧ್ಯಾಭ್ಯಾಸದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ಇದೀಗ ಪುತ್ರಿ ವಾಮಿಕಾ ಸ್ಕೂಲ್ ವಿಚಾರ ಮುನ್ನೆಲೆಗೆ ಬಂದಿದ್ದು ಎರಡು ಆಯ್ಕೆಗಳನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೊದಲಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇನ್ನೂ ಇಬ್ಬರ ಮಕ್ಕಳ ಜೀವನಶೈಲಿ ಜನಸಾಮಾನ್ಯರಂತೆ ಇರಬೇಕು ಎಂಬ ದೃಷ್ಟಿಯಿಂದ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ವಾಮಿಕಾ ಮತ್ತು ಅಕಾಯ್ ಕೊಹ್ಲಿ ಖಾಸಗಿ ಜೀವನಕ್ಕೆ ಯಾವುದೇ ಧಕ್ಕೆಯಾಗಬಾರದೆಂದು ಹಲವು ನಿರ್ಧಾರಗಳನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿಗೆ ಪುತ್ರಿ ವಾಮಿಕಾ ಎಂದರೆ ತುಂಬಾ ಪ್ರೀತಿ. ಆಕೆಯ ಶಿಕ್ಷಣ ಉತ್ತಮವಾಗಿರಬೇಕು ಎಂದು ಉತ್ತಮ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ. ವಾಮಿಕಾ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಒಲವು ತೋರಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಆಕೆಯನ್ನು ಮುಂಬೈನ ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಅಡ್ಮಿಶನ್ ಮಾಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಇದು ಮುಂಗಡ ದಾಖಲಾತಿ ಆಗಿದ್ದು ನಿಖರ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ, ಲಂಡನ್‌ನಲ್ಲಿನ ಮನೆಯಲ್ಲೇ ಪುತ್ರಿ ವಾಮಿಕಾ ಕೊಹ್ಲಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಕ್ಕೆ ಸಮೀಪ ಎಂಬುದು ಇನ್ನೂ ತಿಳಿದುಬಂದಿಲ್ಲ.
ಇನ್ನೂ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಕೂಡ ಬೆಂಗಳೂರಿನಲ್ಲೇ ತಮ್ಮ ಬಾಲ್ಯ ಕಳೆದಿದ್ದು, ಈ ಕಾರಣದಿಂದ ಮಗಳಿಗೂ ಇಲ್ಲೇ ಶಿಕ್ಷಣ ಕೊಡುಸುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇದಲ್ಲದೆ, ಬೆಂಗಳೂರಿಗೆ ವಿಶೇಷ ನಂಟು ಹೊಂದಿರುವ ವಿರುಷ್ಕಾ ಜೋಡಿ ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮುಂಗಡ ಅಡ್ಮಿಶನ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಪುತ್ರಿ ವಾಮಿಕಾಗೆ ಸದ್ಯ 4 ವರ್ಷ. ಹೀಗಾಗಿ ನರ್ಸರಿ ಬಳಿಕ ಕಿಂಡರ್ ಗಾರ್ಡನ್‌ಗೆ ಅಡ್ಮಿಶನ್ ಪಡೆಯಬಹುದಾಗಿದೆ. ಸದ್ಯದ ಮಾಹಿತಿ ಪ್ರಕಾರ ವಿರುಷ್ಕಾ ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಾಮಿಕಾಗೆ ಮುಂಗಡ ಅಡ್ಮಿಶನ್ ಮಾಡಿಸಿದ್ದಾರೆ. ಇಲ್ಲಿನ ಸ್ಕೂಲ್ ಫೀಜ್ ಎಲ್‌ಕೆಜಿಗೆ ರೂ.1.7 ಲಕ್ಷ ರೂಪಾಯಿ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications