RCB IPL 2026: ವಿರಾಟ್‌ ಕೊಹ್ಲಿ ಸಿಡಿಸಿದ್ದು ಕೇವಲ ಒಂದು ಶತಕ.. ಹಲವು ದಾಖಲೆಗಳು ಉಡೀಸ್‌

Virat Kohli Records: ರಾಯ್‌ಪುರದಲ್ಲಿ ಬುಧವಾರ (ಮೇ 13) ನಡೆದ ಪಂದ್ಯದಲ್ಲಿ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ಚೇಸ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿದರು. ಅವರ ಭರ್ಜರಿ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಕೆಆರ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ 16 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿತು. ಇನ್ನೂ ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಹಲವು ದಾಖಲೆಗಳನ್ನ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನೀಡಿದ್ದ 193 ರನ್‌ಗಳ ಬೃಹತ್ ಗುರಿಯನ್ನು ಆರ್‌ಸಿಬಿ 19.1 ಓವರ್‌ಗಳಲ್ಲಿ ಮುಟ್ಟುವಲ್ಲಿ ಯಶಸ್ವಿಯಾಯಿತು. ವಿರಾಟ್‌ ಕೊಹ್ಲಿ ಸಿಡಿಸಿದ ಅಜೇಯ 105 ರನ್‌ಗಳ ನೆರವಿನಿಂದ ಆರ್‌ಸಿಬಿ ಗೆಲುವು ಸಾಧಿಸಿತು. ಕೊಹ್ಲಿ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿವೆ.

Virat Kohli Creates Multiple Records With Stunning Century Against KKR in IPL 2026 In raipur

10ನೇ ಓವರ್‌ನಲ್ಲಿ ಆರ್‌ಸಿಬಿ 100 ರನ್‌ಗಳ ಗಡಿ ದಾಟಿದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 14ನೇ ಓವರ್‌ನ ಮೊದಲ ಎಸೆತದಲ್ಲಿ 39 ರನ್ ಗಳಿಸಿದ್ದ ಪಡಿಕ್ಕಲ್ ಅವರು ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ರಹಾನೆ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಕೆಕೆಆರ್ ಬೌಲರ್‌ಗಳ ಬೆವರಿಳಿಸಿದ ಕೊಹ್ಲಿ

ನಾಯಕ ರಜತ್ ಪಾಟಿದಾರ್ ನರೈನ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು ಔಟಾದರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಕೋಲ್ಕತ್ತಾ ಬೌಲರ್‌ಗಳು ಒತ್ತಡ ಹೇರಲು ಪ್ರಯತ್ನಿಸಿದರೂ ಕೊಹ್ಲಿ ಅದಕ್ಕೆ ಅವಕಾಶ ನೀಡಲಿಲ್ಲ. ಅನುಕೂಲ್ ರಾಯ್ ಎಸೆದ 17ನೇ ಓವರ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 90ರ ಗಡಿ ತಲುಪಿದ ಕೊಹ್ಲಿ 58 ಎಸೆತಗಳಲ್ಲಿ ಐಪಿಎಲ್ ವೃತ್ತಿಜೀವನದ 9ನೇ ಶತಕ ಪೂರೈಸಿದರು.

ತಂಡ ಗೆಲುವಿನ ಸಮೀಪವಿದ್ದಾಗ ಟಿಮ್ ಡೇವಿಡ್ ಕೂಡ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು. ಬಳಿಕ ಜಿತೇಶ್ ಶರ್ಮಾ (8*) ಜೊತೆಗೂಡಿ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನು ಗೆಲುವಿನ ದಡ ಸೇರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡವು ಅಂಗ್ರಿಷ್ ರಘುವಂಶಿ ಅವರ ಅರ್ಧಶತಕ ಮತ್ತು ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.

ಅಂಗ್ರಿಷ್ ರಘುವಂಶಿ 46 ಎಸೆತಗಳಲ್ಲಿ 71 ರನ್ ಸಿಡಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರಿಂಕು ಸಿಂಗ್ ಕೇವಲ 29 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 32 (24), ನಾಯಕ ಅಜಿಂಕ್ಯ ರಹಾನೆ 19(13) ಮತ್ತು ಫಿನ್ ಅಲೆನ್ 18(8) ಕೊಡುಗೆ ನೀಡಿದರು. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 9 ಶತಕ ಪೂರೈಸಿ ಅತೀ ಹೆಚ್ಚು ಶತಕ ಪೂರೈಸಿದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದರು.

ಐಪಿಎಲ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದವರು

* ವಿರಾಟ್ ಕೊಹ್ಲಿ - 9

* ಜೋಸ್ ಬಟ್ಲರ್ - 7

* ಕ್ರಿಸ್ ಗೇಲ್ - 6

* ಕೆ.ಎಲ್. ರಾಹುಲ್ - 5

* ಶುಭಮನ್ ಗಿಲ್ - 4

ಬುಧವಾರ ರಾಯ್‌ಪುರದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2026 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದು, ಈ ಪಂದ್ಯದ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು ಈ ಮೈಲಿಗಲ್ಲನ್ನು ಕೇವಲ 409 ಇನ್ನಿಂಗ್ಸ್‌ಗಳಲ್ಲಿ ತಲುಪುವ ಮೂಲಕ ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್ (423 ಇನ್ನಿಂಗ್ಸ್) ಅವರ ದಾಖಲೆಯನ್ನು ಮುರಿದಿದ್ದಾರೆ.

14,000 ಟಿ20 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇವರ ನಂತರ ರೋಹಿತ್ ಶರ್ಮಾ (12,400+ ರನ್) ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ, ಈ ಪಂದ್ಯದ ಮೂಲಕ ಎಂ.ಎಸ್. ಧೋನಿ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (279 ಪಂದ್ಯಗಳು) ಆಡಿದ ಆಟಗಾರ ಎಂಬ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ.

ಟಿ20ಯಲ್ಲಿ 14,000 ರನ್ ಗಳಿಸಿದವರು (ಇನ್ನಿಂಗ್ಸ್‌ಗಳ ಆಧಾರದಲ್ಲಿ)

* ವಿರಾಟ್ ಕೊಹ್ಲಿ - 409 ಇನ್ನಿಂಗ್ಸ್

* ಕ್ರಿಸ್ ಗೇಲ್ - 423 ಇನ್ನಿಂಗ್ಸ್

* ಡೇವಿಡ್ ವಾರ್ನರ್ - 431 ಇನ್ನಿಂಗ್ಸ್

* ಜೋಸ್ ಬಟ್ಲರ್ - 468 ಇನ್ನಿಂಗ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+