ದುಬೈನಲ್ಲಿ ಸಂಭ್ರಮಿಸಿದ ವಿರಾಟ್ ಅನುಷ್ಕಾ ಶರ್ಮಾ- ವಿಡಿಯೋ ವೈರಲ್

ನವದೆಹಲಿ ಏಪ್ರಿಲ್ 20: ಬಾಲಿವುಡ್‌ನಲ್ಲಿ ಹಲವಾರು ಟಾಪ್ ಸಿನಿಮಾಗಳನ್ನು ನೀಡಿದ ನಟಿ ಅನುಷ್ಕಾ ಶರ್ಮಾ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನೂ ಕ್ರಿಕೆಟ್ ಪ್ರಿಯರ ನೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿಗೂ ಕೂಡ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಹೀಗಾಗಿ ಕ್ರಿಕೆಟ್ ಲೋಕದ ಜೊತೆಗೆ ಸಿನಿ ರಂಗ ಸೇರಿದ್ದರಿಂದ ವಿರಾಟ್ ಹಾಗೂ ಅನುಷ್ಕಾ ಅವರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ವಿರುಷ್ಕಾ ಅಂತಲೇ ಕರೆಯುತ್ತಾರೆ. ಈ ಜೋಡಿ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದಲ್ಲಿರುವ ಟಾಪ್ ಕ್ಯೂಟ್ ಜೋಡಿಗಳಲ್ಲಿ ಒಂದು. ಹೀಗಾಗಿ ಈ ಜೋಡಿ ಏನೇ ಮಾಡಿದರೂ ಸಾಕಷ್ಟು ವೈರಲ್ ಆಗೋದು ಗ್ಯಾರಂಟಿ. ಇದೀಗ ಈ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಒಟ್ಟಿಗೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಜೋಡಿ ಒಟ್ಟಿಗೆ ನೃತ್ಯ ಮಾಡಿದ್ದು ಯಾಕೆ ಗೊತ್ತಾ ಯಶಸ್ಸನ್ನು ಆಚರಿಸಲು. ಹೌದು ದುಬೈನಲ್ಲಿ ನಡೆದ ಚಲನಚಿತ್ರ ಸೆಟ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ಒಟ್ಟಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.

Virat Kohli and Anushka Sharma celebrate in Dubai Dance Video Viral

ಅಂದಹಾಗೆ ಅನುಷ್ಕಾ ಹಾಗೂ ವಿರಾಟ್ ಪರಸ್ಪರ ಕ್ರಿಕೆಟ್ ಆಟದಲ್ಲಿನ ಯಶಸ್ಸನ್ನು ನಿರಂತರವಾಗಿ ಆಚರಿಸುತ್ತಾ ಬಂದಿದ್ದಾರೆ. ಮಾರ್ಚ್‌ನಲ್ಲಿ ಭಾರತದ ತಂಡ ಚಾಂಪಿಯನ್ಸ್ ಟ್ರೋಫಿ 2025 ಗೆದ್ದು ಬೀಗಿತು. ಹೀಗಾಗಿ ಭಾರತದ ತಂಡಕ್ಕೆ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿತ್ತು. 58 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಲಾಯಿತು. ಈ ಸಂದರ್ಭವನ್ನು ವಿರಾಟ್ ಹಾಗೂ ಅನುಷ್ಕಾ ದಂಪತಿ ನೃತ್ಯ ಮಾಡುವ ಮೂಲಕ ಆಚರಿಸಿದ್ದಾರೆ.

ಈ ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ತಕ್ಷಣವೇ ಅನುಷ್ಕಾ ಶರ್ಮಾ ಅವರನ್ನು ಸ್ವಾಗತಿಸಿದರು. ತನ್ನ ಸಂಗಾತಿಯೊಂದಿಗೆ ಈ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಾ ವಿರಾಟ್ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ತಮಾಷೆಯಾಗಿ ನೃತ್ಯ ಮಾಡುವುದನ್ನು ಮತ್ತು ತನ್ನ ಸಂಗಾತಿಯೊಂದಿಗೆ ಕೂಲ್ ಡ್ರಿಂಕ್ಸ್ ಹಂಚಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಸಂತೋಷದಿಂದ ನೃತ್ಯ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು. ಜನವರಿ 2021 ರಲ್ಲಿ ಈ ದಂಪತಿಗೆ ಮಗಳು ವಾಮಿಕಾ ಜನನವಾದಳು. ಫೆಬ್ರವರಿ 2024 ರಲ್ಲಿ ಅವರ ಮಗ ಅಕಾಯ್ ಜನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+