Virat Kohli: ವಿರಾಟ್ ಕೊಹ್ಲಿ ಆಕಸ್ಮಿಕ ಲೈಕ್‌ನಿಂದ ಕೋಟಿ ಕೋಟಿ ದುಡಿದ ಅವನೀತ್ ಕೌರ್
2025ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 63.13 ಸರಾಸರಿ ಮತ್ತು 143.47 ಸ್ಟ್ರೈಕ್‌ರೇಟ್‌ನಲ್ಲಿ ಬರೋಬ್ಬರಿ 505 ರನ್ ಗಳಿಸಿದ್ದು ಸದ್ಯ ಆರೆಂಜ್ ಕ್ಯಾಪ್ ಮಾಲೀಕರಾಗಿದ್ದಾರೆ. 7 ಅರ್ಧಶತಕಗಳನ್ನು ಸಿಡಿಸಿದ್ದು 7 ಪಂದ್ಯಗಳಲ್ಲೂ ಆರ್ ಸಿಬಿ ಗೆದ್ದಿದೆ. ಕೊಹ್ಲಿ ಏನೇ ಮಾಡಿದ್ರೂ ಅದು ಸುದ್ದಿಯೇ, ಇನ್‌ಸ್ಟಾಗ್ರಾಂನಲ್ಲಿ ಆಕಸ್ಮಿಕವಾಗಿ ಮಾಡಿದ ಎಡವಟ್ಟೂ ಕೂಡ ಮತ್ತೊಬ್ಬರ ಬದುಕನ್ನೇ ಬದಲಾಯಿಸಿದೆ.
ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಆಕಸ್ಮಿಕ ಲೈಕ್ ಮಾಡಿದ್ದರೋ ಅಥವಾ ಅವರೇ ಹೇಳುವಂತೆ ತಾಂತ್ರಿಕ ದೋಷದಿಂದ ಲೈಕ್ ಆಗಿದೆಯೋ ಆದರೆ ಇದರಿಂದ ಭರ್ಜರಿ ಲಾಭ ಮಾಡಿದ್ದು ಮಾತ್ರ ಅವನೀತ್ ಕೌರ್. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮಾಡಿದ ಆಕಸ್ಮಿಕ ಲೈಕ್ ವೈರಲ್ ಬಿರುಗಾಳಿಗೆ ಕಾರಣವಾಯಿತು, ಇದು ಕೇವಲ 48 ಗಂಟೆಗಳಲ್ಲಿ ಅವನೀತ್ ಕೌರ್ ಅವರ ಫಾಲೋವರ್ಸ್ ಸಂಖ್ಯೆಯನ್ನು ಸುಮಾರು 2 ಮಿಲಿಯನ್ ಹೆಚ್ಚಾಗಲು ಕಾರಣವಾಗಿದೆ.

ಈ ಘಟನೆಯು ಮೀಮ್ಸ್, ಊಹಾಪೋಹಗಳು ಮತ್ತು ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕಿದೆ. ಕೊಹ್ಲಿ ಅಭಿಮಾನಿಗಳು, ವಿರೋಧಿಗಳು ಕೂಡ ಈ ಬಗ್ಗೆ ವ್ಯಾಪಕವಾಗಿ ಮಾತನಾಡಿದ್ದರು. ಆದರೆ ಅವನೀತ್ ಕೌರ್ ಅವರ ಪೋಸ್ಟ್ ಮೌಲ್ಯ 30% ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಅವನೀತ್ ಕೌರ್ ಅವರ ನಿವ್ವಳ ಮೌಲ್ಯ 41 ಕೋಟಿ ರೂಪಾಯಿ ದಾಟಿದೆ.
ಸಾಕಷ್ಟು ಹೊಸ ಬ್ರಾಂಡ್‌ಗಳು ಇದೀಗ ಜಾಹೀರಾತಿಗಾಗಿ ಅವನೀತ್ ಕೌರ್ ಅವರ ಹಿಂದೆ ಬಿದ್ದಿವೆ. ಕೊಹ್ಲಿಯ ಇನ್‌ಸ್ಟಾಗ್ರಾಮ್ ಖಾತೆಯು ಅವನೀತ್ ಕೌರ್ ಅವರ ದಿಟ್ಟ ಫೋಟೋವನ್ನು ಲೈಕ್ ಮಾಡಿದಾಗ, ಅದು ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್ ಆಗಿತ್ತು.
#ViratLikedAvneet ಎಂಬ ಟ್ರೆಂಡಿಂಗ್ ಟ್ಯಾಗ್‌ನಿಂದಾಗಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 30 ಮಿಲಿಯನ್‌ನಿಂದ 31.8 ಮಿಲಿಯನ್‌ಗೆ ಏರಿಕೆಯಾಗಿದೆ. ಇದು ವಿರಾಟ್ ಕೊಹ್ಲಿಗೆ ಇರುವ ತಾಕತ್ತು. ಡಿಜಿಟಲ್ ಸಂಸ್ಥೆ ಬಜ್‌ಕ್ರಾಫ್ಟ್ ವರದಿಯ ಪ್ರಕಾರ ಇದೀಗ ಅವನೀತ್ ಕೌರ್, ಒಂದು ಪ್ರಾಯೋಜಿತ ಪೋಸ್ಟ್ ದರವನ್ನು ₹2 ಲಕ್ಷದಿಂದ ₹2.6 ಲಕ್ಷಕ್ಕೆ ಏರಿಸಿದ್ದಾರೆ ಎಂದು ತಿಳಿಸಿದೆ.
ಸದ್ಯ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದ್ದಾರೆ. ಕೊಹ್ಲಿಯ ಒಂದು ಲೈಕ್ ಕೂಡ ಒಬ್ಬರನ್ನು ರಾತ್ರೋ ರಾತ್ರಿ ಸ್ಟಾರ್ ಮಾಡುವ ತಾಕತ್ತು ಹೊಂದಿದೆ ಎಂದು ಅವರ ಏರಿರುವ ಎತ್ತರ ಎಂತಹದ್ದು ಎನ್ನುವುಕ್ಕೆ ಸಾಕ್ಷಿ.












Click it and Unblock the Notifications