Vinesh Phogat: ಕೋರ್ಟ್‌ನಲ್ಲಿ ವಿನೇಶ್ ಫೋಗಟ್ ಅರ್ಜಿ ವಜಾ- ಕೈ ತಪ್ಪಿದ ಬೆಳ್ಳಿ ಪದಕ
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟದ ಮಹಿಳೆಯರ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ವಿನೇಶ್ ಫೋಗಟ್‌ರನ್ನು ಹೆಚ್ಚು ತೂಕ ಹಿನ್ನೆಲೆ ಅನರ್ಹಗೊಳಿಸಿದ್ದರು. ಬಳಿಕ ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇದೀಗ ಅರ್ಜಿ ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ಅರ್ಜಿ ವಜಾಗೊಳಿಸಿದ್ದು, ಭಾರತಕ್ಕೆ ಬೆಳ್ಳಿ ಪದಕ ಕೈತಪ್ಪಿದಂತಾಗಿದೆ.
ಮಹಿಳೆಯರ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್ ಲಗ್ಗೆ ಇಡಬೇಕು ಇನ್ನೇನು, ಅದೇ ವೇಳೆ 100 ಗ್ರಾಂ ಅಧಿಕ ತೂಕ ಹೆಚ್ಚಿದ ಹಿನ್ನೆಲೆ ವಿನೇಶ್ ಪೊಗಟ್ ಅನರ್ಹಗೊಳಿಸಲಾಗಿದ್ದು, ತನಗೆ ಬೆಳ್ಳಿ ಪದಕ ನೀಡಬೇಕು ಎಂದು ಅವರು ಒತ್ತಾಯಿಸಿ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಆದರೆ ಇದೀಗ ಕೋರ್ಟ್ ಅರ್ಜಿ ವಜಾ ಮಾಡಿದ ಹಿನ್ನೆಲೆ ಬೆಳ್ಳಿ ಪದಕದ ಕನಸು ಭಗ್ನವಾದಂತಾಗಿದೆ.

ಇನ್ನು ಭಾರತಕ್ಕೆ ಎರಡನೇ ಬೆಳ್ಳಿ ಪದಕ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳ ಭರವಸೆಯೂ ಹುಸಿಯಾದಂತಾಗಿದೆ. ಕಳೆದ ಕೆಲವು ದಿನಗಳಿಂದ ಭಾರೀ ಕುತೂಹಲ ಕೆರಳಿಸಿದ್ದ ಈ ಪ್ರಕರಣದ ತೀರ್ಪು ಇದೀಗ ಬಂದಿದ್ದು, ಕೋರ್ಟ್ ಅಥ್ಲೀಟ್ ವಿನೇಶ್ ಪೋಗಟ್ ಅವರ ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಕೈ ತಪ್ಪಿದಂತಾಗಿದೆ.
#BREAKING CAS dismisses wrestler Vinesh Phogat’s application for silver medal in Olympics wrestling.#ParisOlympics2024 #VineshPhogat pic.twitter.com/t7LK7UMwPH
— Live Law (@LiveLawIndia) August 14, 2024
ಫೈನಲ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರವನ್ನು ಆಗಸ್ಟ್ 16ಕ್ಕೆ ಮುಂದೂಡಿತ್ತು. ಆದರೆ ಇಂದು (ಆಗಸ್ಟ್ 14) ಏಕಾಏಕಿ ನಿರ್ಧಾರ ಪ್ರಕಟಿಸಿದ ಸಿಎಎಸ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದು, ಈ ವಿಚಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ವಿನೇಶ್ ಫೋಗಟ್ ಅವರ ತಂಡ ಮಾರ್ಚ್ 7ರ ಸಂಜೆ ಸಿಎಎಸ್ ಅನ್ನು ಸಂಪರ್ಕ ಮಾಡಿತ್ತು. ವಿನೇಶ್ ಅವರ ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಸ್ವೀಕರಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದೆ. ಆದರೆ ಭಾರತೀಯ ವಕೀಲರನ್ನು ನೇಮಕ ಮಾಡಲು ಸಾಧ್ಯ ಆಗದ ಹಿನ್ನೆಲೆ ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಆದರೆ ಸಿಎಎಸ್ ವಿನೇಶ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ವಕೀಲರ ನೇಮಕಕ್ಕೆ ಕಾಲಾವಕಾಶ ನೀಡಿತ್ತು. ಆದ್ದರಿಂದ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಇಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ವಿನೇಶ್ ಫೋಗಟ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಷ್ಟೇ ಅಲ್ಲದೆ, ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು.
2016ರ ರಿಯೋ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದು, ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯದಿಂದಾಗಿ ಅವರ ಪದಕದ ಕನಸು ಭಗ್ನವಾಗಿತ್ತು. ಬಳಿಕ 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿಯೂ 53 ಕೆ.ಜಿ.ವಿಭಾಗದಲ್ಲಿ ಸೋಲನುಭವಿಸಿದ್ದರು. ಆದರೆ ಇದೀಗ 2024ರಲ್ಲಿ ಫೈನಲ್‌ವರೆಗೂ ಪ್ರವೇಶಿಸಿ ಅಧಿಕ ತೂಕ ಹಿನ್ನೆಲೆ ಅನರ್ಹಗೊಂಡಿದ್ದರು.












Click it and Unblock the Notifications