14 ವರ್ಷದ ಸುಳ್ಳು, ವೈಭವ್ ಸೂರ್ಯವಂಶಿ ಬಣ್ಣ ಬಯಲು... Vaibhav Suryavanshi

ವೈಭವ್ ಸೂರ್ಯವಂಶಿ 100 ರನ್ ಬಾರಿಸಿದ್ದೇ ತಡ ದೊಡ್ಡ ಸೌಂಡ್ ಶುರುವಾಗಿದ್ದು, ಈ ಬಗ್ಗೆ ದೊಡ್ಡ ಚರ್ಚೆ ಮಾಡಲಾಗುತ್ತಿದೆ. ಈ ಚಿಕ್ಕ ವಯಸ್ಸಲ್ಲೇ ಕೋಟಿ ಕೋಟಿ ರೂಪಾಯಿ ದುಡಿಯುತ್ತಿರುವ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದೇ ವೈಭವ್ ಸೂರ್ಯವಂಶಿ ಹಂಗೆ, ಹಿಂಗೆ ಅಂತೆಲ್ಲಾ ಮಾತು ಕಥೆಯೂ ಶುರುವಾಗಿದೆ. ಹೀಗಿದ್ದಾಗಲೇ, 14 ವರ್ಷದ ಸುಳ್ಳು, ವೈಭವ್ ಸೂರ್ಯವಂಶಿ ಬಣ್ಣ ಬಯಲು...

10 ಕೋಟಿ ರೂಪಾಯಿ... 20 ಕೋಟಿ ರೂಪಾಯಿ... ಹೀಗೆ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಹಣಕ್ಕೆ ಲೆಕ್ಕವೇ ಇಲ್ಲ ಎನ್ನಬಹುದು. ಅದರಲ್ಲೂ ವೈಭವ್ ಸೂರ್ಯವಂಶಿ ಕೇವಲ 14 ವರ್ಷ ವಯಸ್ಸಿಗೆ ಕೋಟಿ ಕೋಟಿ ರೂಪಾಯಿ ಹಣ ದುಡಿದಿರುವ ಬಗ್ಗೆ ದೊಡ್ಡ ಚರ್ಚೆಯು ಕೂಡ ಶುರುವಾಗಿದೆ. ವೈಭವ್ ಸೂರ್ಯವಂಶಿ ಮುಂದಿನ ಸಚಿನ್ ತೆಂಡೂಲ್ಕರ್ & ವಿರಾಟ್ ಕೊಹ್ಲಿ ಅಂತೆಲ್ಲಾ ಪುಂಗುವವರೂ ಇದ್ದಾರೆ. ಹೀಗಿದ್ದಾಗಲೇ ವೈಭವ್ ಸೂರ್ಯವಂಶಿ ವಿಚಾರದಲ್ಲಿ ಸ್ಫೋಟಕ ವಿಚಾರ ಒಂದು ಬಟಾ ಬಯಲಾಗಿದೆ...

Vaibhav Suryavanshi Age Is On Discussion For This Reason

ವೈಭವ್ ಸೂರ್ಯವಂಶಿ ಮೋಸ.. ಮೋಸ..?

ಹೌದು, ವೈಭವ್ ಸೂರ್ಯವಂಶಿ ತನಗೆ 14 ವರ್ಷ ವಯಸ್ಸು ಅಂತಾ ಹೇಳಿಕೊಂಡಿರುವುದು ಇದೀಗ ಇಡೀ ಜಗತ್ತಿನಲ್ಲೇ ವೈರಲ್ ಆಗುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಕೂಡ ಈ ಬಗ್ಗೆ ದೊಡ್ಡ ಮಟ್ಟಿಗೆ ಚರ್ಚೆಯನ್ನ ಮಾಡುತ್ತಿವೆ. ಕ್ರಿಕೆಟ್ ಆಟಗಾರನಾಗಿ ಬಂದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಇದೀಗ ಇಂಟರ್‌ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಗುಜರಾತ್ ತಂಡದ ವಿರುದ್ಧ 101 ರನ್ ಚಚ್ಚುವ ಮೂಲಕ ಅತಿಚಿಕ್ಕ ವಯಸ್ಸಿಗೆ ಐಪಿಎಲ್ ಶತಕವನ್ನ ಬಾರಿಸಿದ ವ್ಯಕ್ತಿ ಅಂತಾನೂ ಸಾಧನೆ ಮಾಡಿದ್ದಾರೆ. ಹೀಗಿದ್ದಾಗಲೇ, 14 ವರ್ಷದ ಸುಳ್ಳು, ವೈಭವ್ ಸೂರ್ಯವಂಶಿ ಬಣ್ಣ ಬಯಲು...

ಸುಳ್ಳೇ ಸುಳ್ಳು... ಈ ಭೂಮಿ ಮ್ಯಾಗೇ ಎಲ್ಲಾ ಸುಳ್ಳು?

14 ವರ್ಷ... 14 ವರ್ಷ... ಅಂತಾ ಬಡಾಯಿ ಕೊಚ್ಚಿಕೊಳ್ಳುವ ವೈಭವ್ ಸೂರ್ಯವಂಶಿಯ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಖಾಸಗಿ ವಾಹಿನಿಗೆ ಸಂದರ್ಶನವನ್ನ ನೀಡಿದ್ದ ವೈಭವ್ ಸೂರ್ಯವಂಶಿ, ತನಗೆ 14 ವರ್ಷ ಅಂತಾ ಹೇಳಿಕೊಂಡಿದ್ದನಂತೆ. ಆದರೆ ಇದರಲ್ಲೇನು ವಿಶೇಷತೆ? ಅಂದ್ರೆ ಈ ರೀತಿ ತನಗೆ 14 ವರ್ಷ ಅಂತಾ ವೈಭವ್ ಸೂರ್ಯವಂಶಿ ಬರೋಬ್ಬರಿ 2 ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದರಂತೆ. ಹೀಗಿದ್ದಾಗ 2 ವರ್ಷಗಳ ನಂತರ ಕೂಡ ವೈಭವ್ ಸೂರ್ಯವಂಶಿ ವಯಸ್ಸು 14 ವರ್ಷವೇ ಆಗಿ ಉಳಿಯಲು ಹೇಗೆ ಸಾಧ್ಯ ಗುರೂ? ಅಂತೆಲ್ಲಾ ಇದೀಗ ಕ್ರಿಕೆಟ್ ಅಭಿಮಾನಿಗಳು & ಜನರು ಪ್ರಶ್ನೆ ಕೇಳುತ್ತಿದ್ದಾರೆ.

ಅಲ್ಲದೆ ಇನ್ನೂ ಒಂದು ಆರೋಪ ಕೂಡ ಮಾಡಲಾಗುತ್ತಿದ್ದು, 14 ವರ್ಷದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ... ವೈಭವ್ ಸೂರ್ಯವಂಶಿ ಬಣ್ಣ ಬಯಲು... ಅಂತೆಲ್ಲಾ ಆರೋಪವನ್ನ ಮಾಡಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು, ಈ ಬಗ್ಗೆ ತನಿಖೆ ಆಗಬೇಕು. 14 ವರ್ಷ ಅಂತಾ ಹೇಳಿಕೊಳ್ಳುತ್ತಿರುವ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ ನಿಜವಾದ ವಯಸ್ಸು ಎಷ್ಟು? ಅನ್ನೋದು ಬಯಲಾಗಬೇಕು ಅಂತಾ ಸೋಷಿಯಲ್ ಮೀಡಿಯಾ ಮೂಲಕ ಜನ ಆಗ್ರಹಿಸುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+