Vaibhav Sooryavanshi: ವೈಭವ್ ಪ್ಲೀಸ್.. ಬಿಸಿ ನೀರು ಕುಡಿ, ತಣ್ಣೀರು ಬೇಡ: ಸೂರ್ಯವಂಶಿಗೆ ಮಹಿಳೆ ಅಭಿಮಾನಿ ಸಲಹೆ

Vaibhav Sooryavnshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಅವರ ಮೈದಾನದಿಂದಾಚೆಗಿನ ಮುಗ್ಧತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ಮೈದಾನದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಬೌಲರ್‌ಗಳನ್ನು ನಿರ್ಭಯವಾಗಿ ಎದುರಿಸಿ ಸಿಕ್ಸರ್‌ಗಳ ಸುರಿಮಳೆಗೈಯುತ್ತಿರುವ ಟೀಮ್ ಇಂಡಿಯಾದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ತಮ್ಮ ಮುಗ್ಧತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ನಡೆದ 3ನೇ ಟಿ20 ಪಂದ್ಯದ ನಂತರ ಮಹಿಳಾ ಅಭಿಮಾನಿಯೊಬ್ಬರು ನೀಡಿದ ಸಲಹೆಗೆ ವೈಭವ್ ನೀಡಿರುವ ಪ್ರತಿಕ್ರಿಯೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

Vaibhav Sooryavanshi Viral Video Fan s Advice to Drink Warm Water Wins Hearts Know complete detail

ಅಭಿಮಾನಿಯಿಂದ ವೈಭವ್ ಸೂರ್ಯವಂಶಿಗೆ ಮಹತ್ವದ ಸಲಹೆ

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ಮುಗಿದ ಬಳಿಕ, ವೈಭವ್ ಸೂರ್ಯವಂಶಿ ಅವರು ಬೌಂಡರಿ ಗೆರೆಯ ಬಳಿ ನಿಂತು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಮಹಿಳೆಯೊಬ್ಬರು, 'ವೈಭವ್.. ವೈಭವ್‌.. ನಾವು ಉತ್ತರ ಪ್ರದೇಶದ ಮೂಲದವರು. ಹೇಗಿದ್ದೀಯಾ, ಆರಾಮಾಗಿದ್ದೀಯಾ? ಬಿಸಿ ನೀರು ಕುಡಿ, ತಣ್ಣೀರು ಕುಡಿಯಬೇಡ,' ಎಂದು ಪ್ರೀತಿಯಿಂದ ಕಾಳಜಿ ವ್ಯಕ್ತಪಡಿಸಿದರು. ಇದನ್ನು ಕೇಳಿ ಮುಗುಳ್ನಕ್ಕ ಸೂರ್ಯವಂಶಿ, ಧನ್ಯವಾದ ತಿಳಿಸುತ್ತಾ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುವುದನ್ನು ಮುಂದುವರೆಸಿದರು. ಈ ಸರಳ ಹಾಗೂ ಮುಗ್ಧ ಸಂಭಾಷಣೆ ಕ್ರೀಡಾಭಿಮಾನಿಗಳ ಮನ ಗೆದ್ದಿದೆ.

ನ್ಯೂಜಿಲೆಂಡ್ ವಿರುದ್ಧ ಅಬ್ಬರದ ಆಟ

15 ವರ್ಷದ ಈ ಯುವ ಬ್ಯಾಟರ್ ವೆಲ್ಲಿಂಗ್ಟನ್‌ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿ ಭಾರತಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಮತ್ತೊಂದೆಡೆ ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 113 ರನ್ ಸಿಡಿಸಿದರು. ಈ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ ಕೇವಲ 7.1 ಓವರ್‌ಗಳಲ್ಲಿ 133 ರನ್ ಕಲೆಹಾಕಿ, ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿದೆ.

ಅಷ್ಟೇ ಅಲ್ಲದೆ, ಟೀಮ್ ಇಂಡಿಯಾವು ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ ವಿಕೆಟ್ ನಷ್ಟ ಇಲ್ಲದೆ 118 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್‌ಪ್ಲೇನಲ್ಲಿ ಗರಿಷ್ಠ ರನ್ ಕಲೆಹಾಕಿದ ಹೊಸ ದಾಖಲೆ ನಿರ್ಮಿಸಿತು.

ವೈಭವ್ ಸೂರ್ಯವಂಶಿಗೆ ಅಭಿಷೇಕ್ ಮೆಚ್ಚುಗೆ

ಪಂದ್ಯದ ನಂತರ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಅಭಿಷೇಕ್ ಶರ್ಮಾ, ವೈಭವ್ ನೀಡಿದ ಧೈರ್ಯ ತುಂಬಿದ ಮಾತನ್ನು ನೆನಪಿಸಿಕೊಂಡಿದ್ದಾರೆ. 'ನೆಟ್ಸ್ ಅಭ್ಯಾಸದ ವೇಳೆ ವೈಭವ್ ನನ್ನ ಬಳಿ ಬಂದು 'ಭಾಗ್ ಮಿಲ್ಖಾ ಭಾಗ್' ಸಿನಿಮಾದ ಸಾಲಿನಂತೆ, 'ಅಣ್ಣಾ, ನಾನು ಅದೇ ಶೈಲಿಯಲ್ಲಿ ಅಟ್ಯಾಕಿಂಗ್ ಆಡುತ್ತೇನೆ' ಎಂದು ಹೇಳಿದ್ದ. ಆಡಿದ ಮೊದಲ ಎಸೆತದಿಂದಲೇ ಆತನಲ್ಲಿದ್ದ ಆಕ್ರಮಣಕಾರಿ ಆಟ ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿತು ಮತ್ತು ನಾನ್-ಸ್ಟ್ರೈಕರ್‌ನಲ್ಲಿದ್ದ ನನಗೂ ಹೆಚ್ಚಿನ ಆತ್ಮವಿಶ್ವಾಸ ನೀಡಿತು. ಭಾರತದ ಈ ಗೆಲುವಿನಲ್ಲಿ ವೈಭವ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು,' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಅಭಿಮಾನಿಗಳು ವೈಭವ್‌ಗೆ ತೋರಿದ ಕಾಳಜಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+