Shardul Thakur: ಹರಾಜಿನಲ್ಲಿ ಕಡೆಗಣಿಸಲ್ಪಟ್ಟಿದ್ದ ಶಾರ್ದೂಲ್ ಠಾಕೂರ್ ಬದುಕು ಬದಲಿಸಿದ ಆ ಒಂದು ಫೋನ್ ಕರೆ!
ಆತ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ, ದೇಶೀಯ ಕ್ರಿಕೆಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಸ್ಟಾರ್ ಬೌಲರ್. ಆದರೆ ಅದ್ಯಾಕೋ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವ ಫ್ರಾಂಚೈಸಿ ಕೂಡ ಈ ಬೌಲರ್ ನತ್ತ ಗಮನ ಹರಿಸಲೇ ಇಲ್ಲ, ಪರಿಣಾಮ 2025ರ ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿಕೊಂಡ.
ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದರೆ ಏನಂತೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಾದರೂ ಆಡುವ ಎಂದು ಅವಕಾಶ ಹುಡುಕುತ್ತಿದ್ದ ಆಟಗಾರನಿಗೆ ಅದೊಂದು ದಿನ ಬರುವ ಫೋನ್ ಕರೆ ಮತ್ತೆ ಐಪಿಎಲ್‌ನಲ್ಲಿ ಆಡುವ ಕನಸು ಚಿಗುರಿಸುತ್ತದೆ, ಆತ ಗಾಯಗೊಂಡ ಆಟಗಾರನ ಬದಲಿ ಆಟಗಾರನಾಗಿ ತಂಡಕ್ಕೆ ಬರುತ್ತಾನೆ, ಮೊದಲ ಪಂದ್ಯದಲ್ಲಿ 2 ಓವರ್ ಅಷ್ಟೇ ಬೌಲಿಂಗ್ ಮಾಡಿದರು 2 ವಿಕೆಟ್ ಪಡೆಯುತ್ತಾನೆ, ಆದರೆ ಎರಡನೇ ಪಂದ್ಯದಲ್ಲಿ ಬರೋಬ್ಬರಿ 4 ವಿಕೆಟ್ ಕಿತ್ತು, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ.

ಹೌದು, ಇದು ಶಾರ್ದೂಲ್ ಠಾಕೂರ್ ಎನ್ನುವ ಬೌಲರ್ ನ ಕಥೆ. ಜೀವನದಲ್ಲಿ ಅವಕಾಶಗಳು ಅನಿರೀಕ್ಷಿತವಾಗಿ ಕದ ಬಡಿಯುತ್ತವೆ. ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಲು ಸದಾ ಸಿದ್ಧವಾಗಿರಬೇಕು ಎಂದು ಶಾರ್ದೂಲ್ ಠಾಕೂರ್ ಅವರನ್ನು ನೋಡಿ ಕಲಿಯಬಹುದು.
ಜಹೀರ್ ಖಾನ್ ನೀಡಿದ್ದ ಭರವಸೆ
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಬಳಿಕ ಶಾರ್ದೂಲ್ ಠಾಕೂರ್ ಸಹಜವಾಗಿಯೇ ಬೇಸರಗೊಂಡಿದ್ದರು. ಭಾರತ ತಂಡಕ್ಕಾಗಿ ಆಡಿರುವ, ದೇಶೀಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ನನ್ನನ್ನು ಯಾವ ತಂಡವೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲವಲ್ಲಾ ಎನ್ನುವ ನೋವು ಸಹಜವಾಗಿಯೇ ಇತ್ತು. ಆದರೆ ಆಗಿದ್ದು ಆಗಿದೆ ಮುಂದೆ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಎಂದು ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದು, ಕೌಂಟಿ ತಂಡದ ಜೊತೆ ಮಾತುಕತೆ ನಡೆಸಿದ್ದ ಅವರು, ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆಗಲೇ ಅದೊಂದು ಕರೆ ಬಂದಿತ್ತು.
ಎಲ್‌ಎಸ್‌ಜಿ ತಂಡದ ಬೌಲಿಂಗ್ ಕೋಚ್ ಆಗಿರುವ ಜಹೀರ್ ಖಾನ್ ಶಾರ್ದೂಲ್ ಠಾಕೂರ್ ಅವರಿಗೆ ಕರೆ ಮಾಡುತ್ತಾರೆ. ತಂಡದಲ್ಲಿ ಹಲವು ಆಟಗಾರರು ಗಾಯಗೊಂಡಿದ್ದು, ಬದಲೀ ಆಟಗಾರನಾಗಿ ನಿಮ್ಮನ್ನು ತಂಡಕ್ಕೆ ಕರೆದುಕೊಳ್ಳಬಹುದು ಸಿದ್ದವಾಗಿರಿ ಎನ್ನುತ್ತಾರೆ. ಎಲ್‌ಎಸ್‌ಜಿ ತಂಡದ ನೆಟ್ ಬೌಲರ್ ಆಗುವಂತೆ ಕೇಳಿಕೊಳ್ಳುತ್ತಾರೆ.
ತಾನು ಹಿರಿಯ ಕ್ರಿಕೆಟಿಗ, ನೆಟ್ ಬೌಲರ್ ಆಗಬೇಕಾ ಎನ್ನುವ ಅಹಂ ಇಲ್ಲದೆ ಶಾರ್ದೂಲ್ ಠಾಕೂರ್ ತಂಡದ ನೆಟ್ ಬೌಲರ್ ಆಗಿ ಅಭ್ಯಾಸ ಆರಂಭಿಸುತ್ತಾರೆ. ತಂಡದ ವೇಗಿ ಮೋಹ್ಸಿನ್ ಖಾನ್ ಗಾಯಗೊಂಡ ಬಳಿಕ ಬದಲೀ ಆಟಗಾರನಾಗಿ ಶಾರ್ದೂಲ್ ಠಾಕೂರ್ ತಂಡವನ್ನು ಸೇರಿಕೊಳ್ಳುತ್ತಾರೆ.
ಸನ್‌ರೈಸರ್ಸ್ ವಿರುದ್ಧ ಮಾರಕ ಬೌಲಿಂಗ್
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಓವರ್ ನಲ್ಲೇ 2 ವಿಕೆಟ್ ಪಡೆದರೂ ಅವರ ಬಳಿ ಕೇವಲ 2 ಓವರ್ ಮಾತ್ರ ಬೌಲಿಂಗ್ ಮಾಡಿಸಲಾಗುತ್ತದೆ. ಆ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುತ್ತದೆ. ಬಳಿಕ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುತ್ತದೆ.
ಎರಡನೇ ಪಂದ್ಯದಲ್ಲೂ ಶಾರ್ದೂಲ್ ಠಾಕೂರ್ ತಮ್ಮ ಅದ್ಭುತ ಪ್ರದರ್ಶನ ಮುಂದುವರೆಸುತ್ತಾರೆ. 4 ಓವರ್ ನಲ್ಲಿ 34 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆಯುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುತ್ತಾರೆ. ಪರಿಣಾಮ ಸನ್‌ರೈಸರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಮಾತ್ರ ಗಳಿಸುತ್ತದೆ. ಲಕ್ನೋ 16.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುತ್ತದೆ. ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುತ್ತಾರೆ. ಸದ್ಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಆಟಗಾರರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications