ಹರ್ಮನ್ ಪ್ರೀತ್ ಕೌರ್ ಎರಡು ಪಂದ್ಯಗಳಿಂದ ಅಮಾನತು
ಬೆಂಗಳೂರು, ಜುಲೈ 25; ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ಗಳ ವಿರುದ್ಧ ಕಿಡಿಕಾರಿದ್ದ ಹರ್ಮನ್ ಪ್ರೀತ್ ಕೌರ್ ಎರಡು ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ. ಮೈದಾನದಲ್ಲಿ ಹರ್ಮನ್ ಪ್ರೀತ್ ಕೌರ್ ವರ್ತನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಂಗಳವಾರ ಐಸಿಸಿ ಈ ಕುರಿತು ಆದೇಶ ಹೊರಡಿಸಿದೆ. ಹರ್ಮನ್ ಪ್ರೀತ್ ಕೌರ್‌ರನ್ನು ಅಂತರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಐಸಿಸಿ ಮಾರ್ಗಸೂಚಿಗಳ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಶನಿವಾರ ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಅಂಪೈರ್‌ಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಭಾರತ ತಂಡದ ನಾಯಕಿ ತಾಳ್ಮೆ ಕಳೆದುಕೊಂಡು ಮೈದಾನದಲ್ಲಿ ವಿಕೆಟ್‌ಗೆ ಹೊಡೆದಿದ್ದರು.
ಎರಡು ಪಂದ್ಯಗಳಿಂದ ಅಮಾನತು; ಹರ್ಮನ್ ಪ್ರೀತ್ ಕೌರ್ ಅಂಪೈರ್‌ಗಳ ವಿರುದ್ಧ ಅಸಮಾಧಾನ ಹೊರಹಾಕಿ, ತಾಳ್ಮೆ ಕಳೆದುಕೊಂಡು ವಿಕೆಟ್‌ಗೆ ಹೊಡೆದಿದ್ದರು. ಇದರಿಂದಾಗಿ ವಿಕೆಟ್‌ಗಳು ಚದುರಿ ಹೋಗಿದ್ದವು. ಆದ್ದರಿಂದ ಭಾರತ ಮಹಿಳಾ ತಂಡದ ನಾಯಕಿ ವರ್ತನೆ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು.
34ನೇ ಓವರ್‌ನಲ್ಲಿ ಔಟ್ ಆದ ಹರ್ಮನ್ ಪ್ರೀತ್ ಕೌರ್ ಅಂಪೈರಿಂಗ್ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೇ ಮೈದಾನದಿಂದ ಹೊರ ಹೋಗುವಾಗ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಕಳಪೆ ಅಂಪೈರಿಂಗ್‌ನಿಂದಾಗಿ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದ್ದರು.
ಮೂರು ಪಂದ್ಯ ಟಿ20 ಸರಣಿಯನ್ನು ಗೆದ್ದಿದ್ದ ಭಾರತ ಮಹಿಳಾ ತಂಡ, ಏಕದಿನ ಸರಣಿಯಲ್ಲೂ ಗೆಲುವಿನ ಅಂಚಿಗೆ ಬಂದರು ಡ್ರಾನಲ್ಲಿ ಪಂದ್ಯ ಅಂತ್ಯಗೊಂಡಿತ್ತು. ಪಂದ್ಯದಲ್ಲಿ ಒಂದು ರನ್‌ನಿಂದ ಅಂತ್ಯಗೊಂಡಿತ್ತು. ಆದರೆ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ವರ್ತನೆ ಭಾರೀ ಸುದ್ದಿಯಾಗಿತ್ತು.
ಹರ್ಮನ್ ಪ್ರೀತ್ ಕೌರ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 21 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನೊಂದಿಗೆ 14 ರನ್‌ಗಳಿಸಿದ್ದರು. 34ನೇ ಓವರ್‌ನಲ್ಲಿ ಸ್ಪಿನ್ನರ್ ನಹೀದಾ ಅಖ್ತರ್ ಎದುರು ಸ್ವೀಪ್‌ಶಾಟ್ ಮಾಡಲು ಪ್ರಯತ್ನ ಮಾಡಿದಾಗ ಬಾಲ್ ಪ್ಯಾಡ್‌ಗೆ ಬಡಿದಿತ್ತು. ಆಗ ಅಂಪೈರ್ ಓಟ್ ಎಂದು ತೀರ್ಪು ನೀಡಿದ್ದರು. ಆದರೆ ಹರ್ಮನ್ ಬ್ಯಾಟ್‌ಗೆ ಚೆಂಡು ತಾಗಿದೆ ಎಂದು ತೋರಿಸಿದ್ದರು.
ಹರ್ಮನ್ ಪ್ರೀತ್ ಕೌರ್ ಪಂದ್ಯದಲ್ಲಿ ತೋರಿದ ವರ್ತನೆಗೆ ಈಗಾಗಲೇ ದಂಡ ಹಾಕಲಾಗಿದೆ. ಪಂದ್ಯ ಶುಲ್ಕದಲ್ಲಿ ಶೇ 75ರಷ್ಟು ಕಡಿತಗೊಳಿಸಲಾಗಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಅವರು, "ಈ ಪಂದ್ಯದಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಅಪೈರಿಂಗ್ ನಮಗೆ ಅಚ್ಚರಿ ಮೂಡಿಸಿದೆ. ನಾವು ಮುಂದಿನ ಬಾರಿ ಬಾಂಗ್ಲಾ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಇಂತಹ ಕಳಪೆ ಅಂಪೈರಿಂಗ್ ಎದುರು ಆಡಬೇಕು. ಉತ್ತಮ ತಯಾರಿ ನಡೆಸುತ್ತೇವೆ. ಕಳಪೆ ಅಪೈರಿಂಗ್ ಕಾರಣ ನಮಗೆ ಸಿಗಬೇಕಿದ್ದ ಗೆಲುವು ಸಿಗಲಿಲ್ಲ" ಎಂದು ಹೇಳಿದ್ದರು.












Click it and Unblock the Notifications