World Record: ಅಬ್ಬಾ.. 4, 4 , 4, 6.. ಕೇವಲ ಒಂದೇ ಓವರ್‌ವೊಳಗೆ ಟಿ20 ಪಂದ್ಯ ಮುಕ್ತಾಯ, ಐತಿಹಾಸಿಕ ದಾಖಲೆ

ACC Women T20 Premier Cup 2026: ಕ್ರಿಕೆಟ್‌ನಲ್ಲಿ ಹೊಸ ಹೊಸ ದಾಖಲೆಗಳು ಆಗುತ್ತಿರುತ್ತಿವೆ. ಇದೀಗ ಎಸಿಸಿ ಮಹಿಳಾ ಟಿ20 ಪ್ರೀಮಿಯರ್ ಕಪ್ 2026ರ ಟೂರ್ನಿಯಲ್ಲಿ ಐತಿಹಾಸಿಕ ರೆಕಾರ್ಡ್‌ ಆಗಿದೆ. ಯುಎಇ ತಂಡವು ಸೌದಿ ಅರೇಬಿಯಾ ವಿರುದ್ಧ ಕೇವಲ 5 ಎಸೆತಗಳಲ್ಲಿ ಗೆಲುವು ದಾಖಲಿಸಿ ಪಂದ್ಯ ಮುಗಿಸಿದೆ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲ್ಲೆಯಲ್ಲಿರುತ್ತದೆ ಇದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ಎಸಿಸಿ ಮಹಿಳಾ ಟಿ20 ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಆಶ್ಚರ್ಯಕರ ದಾಖಲೆಯಾಗಿದೆ. ಯುಎಇ ಮತ್ತು ಸೌದಿ ಅರೇಬಿಯಾ ಮಹಿಳಾ ತಂಡಗಳ ನಡುವೆ ನಡೆದ ಗುಂಪು ಹಂತದ ಪಂದ್ಯ ನಡೆದಿದ್ದು, ಈ ವೇಳೆ ಯುಎಇ ಕೇವಲ 5 ಎಸೆತಗಳಲ್ಲಿ 28 ರನ್ ಟಾರ್ಗೆಟ್‌ ಮುಟ್ಟಿ ಪಂದ್ಯವನ್ನು ಮುಗಿಸುವ ಮೂಲಕ ದಾಖಲೆ ಬರೆದಿದೆ.

UAE Women Create History Chase 28 Runs in 5 balls Against Saudi Arabia in ACC T20 Premier Cup 2026

ಕೇವಲ 5 ಎಸೆತದಲ್ಲಿ ಪಂದ್ಯ ಮುಗಿಸಿದ ಯುಎಇ

ಎಸಿಸಿ ಮಹಿಳಾ ಟಿ20 ಪ್ರೀಮಿಯರ್ ಟೂರ್ನಿಯ ಗ್ರೂಪ್ ಬಿ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ಮಹಿಳಾ ತಂಡವು ಯುಎಇ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಸೌದಿ ಅರೇಬಿಯಾ 15.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 27 ರನ್‌ಗಳನ್ನ ಮಾತ್ರ ಕಲೆಹಾಕಿ 28 ರನ್‌ಗಳ ಟಾರ್ಗೆಟ್‌ ನೀಡಿದರು. ಆದರೆ ಈ ಗುರಿಯನ್ನು ಯುಎಇ ಒಂದು ಓವರ್‌ಗೆ ಒಂದು ಎಸೆತ ಬಾಕಿ ಇರುವಂತೆ ತಲುಪಿ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಯಿತು.

ಯುಎಇ ಮಾರಕ ಬೌಲಿಂಗ್ ದಾಳಿ

ಯುಎಇ ಪರ ಬೌಲಿಂಗ್ ಮಾಡಿದ ಸುರಕ್ಷಾ ಕೊಟ್ಟೆ 4 ಓವರ್‌ ಎಸೆದು ಕೇವಲ 5 ರನ್‌ ನೀಡಿ 3 ವಿಕೆಟ್‌ ಕೊತ್ತರೆ, ಹೀನಾ ಹೋಟ್‌ಚಂದಾನಿ 2.3 ಓವರ್‌ ಬೌಲಿಂಗ್ ಮಾಡಿ ಕೇವಲ 4 ರನ್‌ ನೀಡಿ 3 ವಿಕೆಟ್ ಕಬಳಿಸಿದರು. ನಾಯಕಿ ಇಶಾ ಓಜಾ 4 ಓವರ್‌ ಎಸೆದು 9 ರನ್‌ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಹೀಗೆ ಈ ಮೂವರು ತಲಾ ಮೂರು ವಿಕೆಟ್ ಹಾಗೂ ಕಾಟಿ ತೊಂಪ್ಸನ್ ಒಂದು ವಿಕೆಟ್‌ ಕಿತ್ತು ಸೌದಿ ಅರೆಬಿಯಾವನ್ನು 27 ರನ್‌ಗಳಿಗೆ ಕಟ್ಟಿಹಾಕಿದರು.

ಹೆಚ್ಚುವರಿ 11 ರನ್‌ಗಳ ಉಡುಗೊರೆ

28 ರನ್‌ಗಳ ಅತ್ಯಲ್ಪ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡಕ್ಕೆ ಸೌದಿ ಅರೇಬಿಯಾದ ಬೌಲರ್ ಮಾಹ್ ನೂರ್ ಅಮೀರ್ ಎಸೆದ ಮೊದಲ ಓವರ್ ವರದಾನವಾಗಿ ಪರಿಣಮಿಸಿತು. ಇವರು 10 ವೈಡ್‌ ಹಾಗೂ ಒಂದು ನೋ-ಬಾಲ್ ಸೇರಿದಂತೆ ಒಟ್ಟು 11 ರನ್‌ಗಳನ್ನು ಉಡುಗೊರೆಯಾಗಿ ನೀಡಿದರು. ಇದರ ಲಾಭ ಪಡೆದ ಯುಎಇ ನಾಯಕಿ ಇಶಾ ಓಜಾ ಕೇವಲ 5 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 15 ರನ್ ಚಚ್ಚಿದರು.

ಮತ್ತೊಬ್ಬ ಆರಂಭಿಕ ಬ್ಯಾಟರ್ ತೀರ್ಥ ಸತೀಶ್ ತಾವು ಎದುರಿಸಿದ ಒಂದು ಎಸೆತದಲ್ಲಿ ಬೌಂಡರಿ ಬಾರಿಸಿದರು. ಇದರಿಂದ ಮೊದಲ ಓವರ್‌ನ 5ನೇ ಎಸೆತದಲ್ಲೇ (0.5 ಓವರ್) ಯುಎಇ ಯಾವುದೇ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿತು. ಈ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿತು.

ಯುಎಇ ತಂಡ ಇನ್ನು 115 ಎಸೆತಗಳು (19.1 ಓವರ್) ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿರು. ಮಹಿಳಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗವಾಗಿ ಗುರಿ ತಲುಪಿದ ಜಂಟಿ ಎರಡನೇ ಪಂದ್ಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಒಟ್ಟಿನಲ್ಲಿ ಈ ಪಂದ್ಯವು ಹೊಸ ಇತಿಹಾಸ ಪುಟಕ್ಕೆ ಸೇರ್ಪಡೆಯಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+