ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲಿಸಿದ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ಸೆಹ್ವಾಗ್ ಪುತ್ರರು

U19 India vs Australia: ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 18) ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ದಿನದ ಅಂಡರ್ 19 ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಅಂದ್ರೆ ಭಾರತದ ಪರ ದಿಗ್ಗಜರಾದ ಕನ್ನಡಿಗ ರಾಹುಲ್‌ ದ್ರಾವಿಡ್‌ ಹಾಗೂ ವೀರೇಂದ್ರ ಸೆಹ್ವಾಗ್ ಪುತ್ರರು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದರು.

ಟಾಸ್‌ ಗೆದ್ದ ಆಸ್ಟ್ರೇಲಿಯಾ ಅಂಡರ್ 19 ತಂಡವು ಬೌಲಿಂಗ್ ಮಾಡಲು ನಿರ್ಧರಿಸಿತು. ಅದಂತಯೇ ಮೊದಲು ಬ್ಯಾಟ್‌ ಬೀಸಿದ ಭಾರತದ ಅಂಡರ್ 19 ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಬಳಿಕ ಬ್ಯಾಟ್‌ ಬೀಸಿದ ಆಸಿಸ್ 7 ವಿಕೆಟ್‌ ಕಳೆದುಕೊಂಡು 175 ರನ್‌ಗಳನ್ನಷ್ಟೇ ಕಲೆಹಾಕಿ ಸೋಲನುಭವಿಸಿತು.

U19 India vs Australia Kannadiga Rahul Dravid and Sehwag s Sons Shine as India Win by 7 Wickets

ಮಿಂಚಿದ ದ್ರಾವಿಡ್, ಸೆಹ್ವಾಗ್ ಪುತ್ರರು

ಮಳೆ ಬಂದ ಕಾರಣ ಓವರ್‌ಗಳಿಗೆ 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಯಶ್ವರ್ಧನ್ ಸಿಂಗ್ ಚೌಹಾಣ್, ಆರ್ಯವೀರ್ ಸೆಹ್ವಾಗ್ ಹಾಗೂ ಅನ್ವಯ್ ದ್ರಾವಿಡ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ಟೀಮ್ ಇಂಡಿಯಾ ಪರ ಯಶ್ವರ್ಧನ್ ಸಿಂಗ್ ಚೌಹಾಣ್ 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳ ಸಹಿತ 54 ರನ್‌ ಸಿಡಿಸಿ ಮಿಂಚಿದರೆ, ಆರ್ಯವೀರ್ ಸೆಹ್ವಾಗ್ 28(26), ಅನ್ವಯ್ ದ್ರಾವಿಡ್‌ 18 ಎಸೆತಗಖಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 38 ರನ್‌ ಸಿಡಿಸಿ ತಂಡ ಬೃಹತ್ ಮೊತ್ತ ಕಲೆಹಾಕಲು ಹಾಗೂ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು ಅಂತಲೇ ಹೇಳಬಹುದು.

ಆಸ್ಟ್ರೇಲಿಯಾ ವಿರುದ್ಧ ಭಾರತ ಅತ್ಯುತ್ತಮ ಪ್ರದರ್ಶನ

ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರರು ಅಂತಾರಾಷ್ಟ್ರೀಯ ಮಟ್ಟದ ಯೂತ್ ಕ್ರಿಕೆಟ್‌ನಲ್ಲಿ ಒಟ್ಟಿಗೆ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ 'ಎ' 19 ವರ್ಷದೊಳಗಿನ ತಂಡದ ವಿರುದ್ಧ ನಡೆದ ಚೊಚ್ಚಲ ಏಕದಿನ ಪಂದ್ಯದಲ್ಲಿ ಭಾರತ 'ಎ' ಅಂಡರ್ 19 ಪಡೆ ಭರ್ಜರಿ ಪ್ರದರ್ಶನ ನೀಡಿದೆ.

ಸೆಹ್ವಾಗ್ ಪುತ್ರನ ಅಬ್ಬರದ ಬ್ಯಾಟಿಂಗ್

ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಭಾರತ ಅಂಡರ್-19 ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದರು. ವಿಶೇಷ ಅಂದ್ರೆ ಮಗನ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ವೀರೇಂದ್ರ ಸೆಹ್ವಾಗ್ ಖುದ್ದಾಗಿ ಸ್ಟೇಡಿಯಂ ಗ್ಯಾಲರಿಯಲ್ಲಿ ಕುಳಿತಿದ್ದರು.

ಆರ್ಯವೀರ್ ತಮ್ಮ ಇನಿಂಗ್ಸ್‌ನ 5ನೇ ಎಸೆತದಲ್ಲೇ ಭರ್ಜರಿ ಬೌಂಡರಿ ಬಾರಿಸುವ ಮೂಲಕ ತಂದೆಯಂತೆಯೇ ಆಕ್ರಮಣಕಾರಿ ರನ್ ಖಾತೆ ತೆರೆದರು. ನಂತರದ ಓವರ್‌ಗಳಲ್ಲೂ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಅವರು ಲೆಗ್-ಸ್ಪಿನ್ನರ್ ಸ್ಪೆನ್ಸರ್ ಗ್ರೀನ್ ಅವರ ಐದನೇ ಓವರ್‌ನಲ್ಲಿ ಬಿಗ್ ಶಾಟ್‌ ಮಾಡಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಆರ್ಯವೀರ್ 26 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 28 ರನ್‌ಗಳ ಕೊಡುಗೆ ನೀಡಿದರು.

ಅಬ್ಬರಿಸಿದ ಅನ್ವಯ್ ದ್ರಾವಿಡ್

ಮಧ್ಯಮ ಕ್ರಮಾಂಕದಲ್ಲಿ ಲಕ್ಷ್ಯ ರಾಯಚಂದಾನಿ 15(15), ಕುಶಾಗ್ರ ಓಜಾ 16(14) ಮತ್ತು ಅರ್ಜುನ್ ರಜಪೂತ್ 15(8) ರನ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಹಾಗೂ ಯಶವರ್ಧನ್ ಚೌಹಾಣ್ ತಂಡದ ರಕ್ಷಣೆಗೆ ನಿಂತರು.

'ಗ್ರೇಟ್ ವಾಲ್' ಅಂತಲೇ ಹೆಸರುವಾಸಿಯಾಗಿರುವ ರಾಹುಲ್ ದ್ರಾವಿಡ್‌ಗೆ ತದ್ವಿರುದ್ಧವಾಗಿ ಬ್ಯಾಟ್ ಬೀಸಿದ ಅನ್ವಯ್, ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಎದುರಿಸಿದ ಕೇವಲ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 38 ರನ್ ಚಚ್ಚಿದ ಅನ್ವಯ್ ದ್ರಾವಿಡ್, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸವಾಲಿನ ಮೊತ್ತ ಪೇರಿಸಲು ಪ್ರಮುಖ ಕಾರಣರಾದರು. ಒಟ್ಟಿನಲ್ಲಿ ಇಬ್ಬರು ದಿಗ್ಗಜರ ಪುತ್ರರು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+