ರೋಹಿತ್ ಶರ್ಮಾ ಸೆಂಚ್ಯುರಿ ಜಸ್ಟ್ ಮಿಸ್: ಕಾರಣ ಏನು ಗೊತ್ತಾ?

ರೋಹಿತ್ ಶರ್ಮಾ ಇಂದು ಆಸ್ಟ್ರೇಲಿಯಾ ವಿರುದ್ಧ ಅಕ್ಷರಶಃ ರನ್ ಮಳೆ ಸುರಿಸಿದ್ದರು. ಆರಂಭದಿಂದ ಹಿಡಿದು, ಪಂದ್ಯ 10 ಓವರ್ ದಾಟುವ ತನಕ ರೋಹಿತ್ ಶರ್ಮಾ ಭಾರಿ ಅಬ್ಬರ ತೋರಿಸಿದ್ದರು. ಸಿಕ್ಸ್, ಫೋರ್ ಅಂತಾ ಬೌಂಡರಿ ಗೆರೆ ದಾಟಿಸುತ್ತಾ ಆಸ್ಟ್ರೇಲಿಯಾ ಬೌಲಿಂಗ್ ಪಡೆಗೆ ನರಕ ತೋರಿಸಿದರು. ಹೀಗಿದ್ದಾಗಲೇ ಇನ್ನೇನು ಸೆಂಚ್ಯುರಿ ಮಾಡಬೇಕು ಎನ್ನುವಾಗ ಎಡವಿ ಬಿದ್ದರು ರೋಹಿತ್ ಶರ್ಮಾ.

ಆಸ್ಟ್ರೇಲಿಯಾ ವಿರುದ್ಧ ಇಂದು ಭಾರತ ತಂಡ ಸೇಡಿನ ಮ್ಯಾಚ್ ಆಡುತ್ತಿದೆ. ಹೀಗಿದ್ದಾಗ ವಿರಾಟ್ ಕೊಹ್ಲಿ ಇಂದು ಕೂಡ ಬೇಗ ಔಟಾಗಿ ಹೋದರು. ಇದು ಭಾರತ ತಂಡವನ್ನು ಸಂಕಷ್ಟಕ್ಕೆ ನೂಕಿತು. ಆದರೆ ಅದೇ ಸಮಯಕ್ಕೆ ಭಾರತ ಕ್ರಿಕೆಟ್ ತಂಡಕ್ಕೆ ನೆರವಾದರು ರೋಹಿತ್ ಶರ್ಮಾ. 19 ಬಾಲ್ ಆಡಿ ಅರ್ಧ ಶತಕ ಚಚ್ಚಿದ ರೋಹಿತ್ ಶರ್ಮಾ, ಬಳಿಕ ಮತ್ತಷ್ಟು ವೇಗವಾಗಿ ಬ್ಯಾಟ್ ಬೀಸಿದರು. ಈ ಮೂಲಕ 40ಕ್ಕೂ ಕಡಿಮೆ ಬಾಲ್ ಬಳಸಿ 90ರ ಗಡಿ ದಾಟಿದರು ರೋಹಿತ್ ಶರ್ಮಾ. ಹೀಗಾಗಿ ರೋಹಿತ್ ಶರ್ಮಾ ಇಂದು ಭರ್ಜರಿ 100 ರನ್ ಗಳಿಸಿ ಸೆಂಚ್ಯುರಿ ಸಿಡಿಸುವುದು ಪಕ್ಕಾ ಅಂತಿದ್ದರು ಅಭಿಮಾನಿಗಳು. ಆದರೆ, ಆಗಲೇ ನೋಡಿ ನಡೆದಿದ್ದು ದುರಂತ!

This Is The Reason Why Rohit Sharma Missed To Get A Century Against Australia In T20 World Cup

ಸ್ಟಾರ್ಕ್ ಬೌಲಿಂಗ್‌ಗೆ ರೋಹಿತ್ ಔಟ್!

ರೋಹಿತ್ ಶರ್ಮಾ 91 ರನ್ ಗಳಿಸಿ, 7 ಬೌಂಡರಿ & 8 ಸಿಕ್ಸರ್ ಸಿಡಿಸಿ 240ರ ಸರಾಸರಿಗೆ ರನ್ ಗಳಿಸುವಾಗ ದುರಂತ ಒಂದು ನಡೆದೇ ಹೋಗಿತ್ತು. ರೋಹಿತ್ ಶರ್ಮಾಗೆ ಅವಕಾಶ ಇನ್ನೂ ಇತ್ತು, ಆದರೂ ಅವಸರ ಮಾಡಿಕೊಂಡ ರೋಹಿತ್ ಶರ್ಮಾ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ್ದರು. ಆದರೆ ಸ್ಟಾರ್ಕ್ ಹಾಕಿದ ಬಾಲ್ ನೇರ ವಿಕೆಟ್‌ಗೆ ಹೋಗಿ ಬಡಿಯಿತು. ಹೀಗಾಗಿ ರೋಹಿತ್ ಶರ್ಮಾ 92 ರನ್ ಗಳಿಸಿ ಔಟಾದರು. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡ 14.3 ಓವರ್‌ಗೆ 159 ರನ್ ಗಳಿಸಿದ್ದು, ಒಟ್ಟು 4 ವಿಕೆಟ್ ಕಳೆದುಕೊಂಡಿದೆ. ಹಾಗಾದ್ರೆ ಇಂದು ಆಸ್ಟ್ರೇಲಿಯಾ ಸೋತರೆ ಏನಾಗಲಿದೆ? ಮುಂದೆ ಓದಿ.

ಸೋತರೆ ಆಸ್ಟ್ರೇಲಿಯಾ ಮನೆ ಕಡೆಗೆ!

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗ ಸೂಪರ್-8 ಹಂತದ ಪಂದ್ಯಗಳು ನಡೀತಾ ಇವೆ. ಈಗಾಗಲೇ ಆಸ್ಟ್ರೇಲಿಯಾ 2 ಮ್ಯಾಚ್ ಆಡಿ 1 ಮ್ಯಾಚ್ ಸೋತಿದೆ. ಹಾಗೇ ಕೇವಲ ಒಂದೇ ಒಂದು ಪಂದ್ಯ ಗೆದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ಇಂದು ಭಾರತದ ವಿರುದ್ಧವೂ ಪಂದ್ಯ ಸೋತರೆ ಒಟ್ಟು 3 ಪಂದ್ಯದಲ್ಲಿ 2 ಪಂದ್ಯ ಸೋತಂತೆ ಆಗುತ್ತದೆ. ಆದರೆ ಭಾರತ ತಂಡ ಗಾಗಲೇ 2 ಮ್ಯಾಚ್ ಗೆದ್ದು, ಈಗ 3ನೇ ಪಂದ್ಯ ಗೆಲ್ಲಲು ಸಜ್ಜಾಗಿದೆ.

ಸೇಡಿಗೆ ಸೇಡು ಗ್ಯಾರಂಟಿ?

ಆಸ್ಟ್ರೇಲಿಯಾ ತಂಡವು ಇಂದು ಸೋತರೆ, ಅಫ್ಘಾನಿಸ್ತಾನ ತಂಡಕ್ಕೆ ಇದು ವರವಾಗಲಿದೆ. ಯಾಕಂದ್ರೆ ಅಫ್ಘಾನ್ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಪಕ್ಕಾ ಆಗಲಿದೆ. ಹೀಗಾಗಿ ಇಂದು ಭಾರತ ಗೆಲ್ಲಬೇಕು ಅಂತಾ, ಅಫ್ಘಾನ್ ತಂಡ ಕೂಡ ಬೇಡಿಕೊಳ್ಳುತ್ತಿದೆ. ಈಗಿನ ಸ್ಥಿತಿ ನೋಡಿದರೆ ಭಾರತ ತಂಡ ಈ ಪಂದ್ಯ ಗೆದ್ದು, ಆಸ್ಟ್ರೇಲಿಯಾ ಆಟಗಾರರಿಗೆ ಮನೆಯ ದಾರಿ ತೋರಿಸುವುದು ಬಹುತೇಕ ಪಕ್ಕಾ ಆಗಿದೆ. ಹಾಗೇ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪಂದ್ಯ ಸೋತಿದ್ದಕ್ಕೆ ಸೇಡು ತೀರಿಸಿಕೊಂಡಂತೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+