RCB VS CSK: ವಿರಾಟ್ ಕೊಹ್ಲಿ ಕೈಗೆ ಬಾಲ್ ಸಿಕ್ಕರೆ ಆಟಗಾರರಿಗೆ ಎಷ್ಟು ಭಯ ನೋಡಿ!
ವಿರಾಟ್ ಕೊಹ್ಲಿ ಎಷ್ಟು ಫಿಟ್ & ಫೈನ್ ಆಗಿದ್ದಾರೆ ಅಂದ್ರೆ ಬ್ಯಾಟಿಂಗ್ ಮಾತ್ರವಲ್ಲ, ವಿರಾಟ್‌ಗೆ ಫೀಲ್ಡಿಂಗ್ ಕೂಡ ಸಖತ್ ಆಗಿ ಬರುತ್ತೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡ್ತಾರೆ ಅಂದ್ರೆ ಬ್ಯಾಟಿಂಗ್ ಮಾಡುವವರಿಗೆ ಭಯ. ಅದರಲ್ಲೂ ಬ್ಯಾಟ್ಸ್‌ಮನ್ ಆಡುವಾಗ ಆ ಬಾಲ್ ನೇರ ವಿರಾಟ್ ಕೊಹ್ಲಿ ಕೈಗೆ ಹೋಯ್ತು ಅಂದ್ರೆ ರನೌಟ್ ಆಗುವ ಭಯದಲ್ಲೇ ನರಳುತ್ತಾರೆ. ಹೀಗೆಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮ್ಯಾಚ್‌ನಲ್ಲೂ, ಸಿಎಸ್‌ಕೆ ಆಟಗಾರ ಭಯಪಟ್ಟ ವಿಡಿಯೋ ವೈರಲ್ ಆಗುತ್ತಿದೆ.
ಚೆನ್ನೈ ತಂಡವನ್ನು ಸೋಲಿಸಿ ಇದೀಗ ಆರ್‌ಸಿಬಿ ತಂಡ ಪ್ಲೇಆಫ್ ಪ್ರವೇಶ ಮಾಡಿದೆ. ಆರ್‌ಸಿಬಿಗೆ ಕಪ್ ಗೆಲ್ಲಲು ಇನ್ನು 2 ಹೆಜ್ಜೆ ಮಾತ್ರ ಬಾಕಿ ಇದೆ. ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳು CSK ವಿರುದ್ಧ ಆರ್‌ಸಿಬಿ ಗೆಲುವನ್ನ ಇಂದಿಗೂ ಸಂಭ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕಿಂಗ್ ಕೊಹ್ಲಿ ಅವರ ಒಂದು ವಿಡಿಯೋ ವೈರಲ್ ಆಗ್ತಿದೆ. ವಿರಾಟ್ ಕೊಹ್ಲಿ ತಮ್ಮ ಕೈಗೆ ಬಾಲ್ ಸಿಕ್ಕರೆ, ಎದುರಾಳಿ ತಂಡಕ್ಕೆ ಹೆಂಗೆಲ್ಲಾ ಭಯಪಡಿಸುತ್ತಾರೆ ಅಂತಾ ಅಭಿಮಾನಿಗಳು ಚರ್ಚೆ ಮಾಡುವಂತಾಗಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

ಕೊಹ್ಲಿ ಕೈಗೆ ಬಾಲ್ ಸಿಕ್ಕರೆ...
ಅಂದಹಾಗೆ ಕಳೆದ ಶನಿವಾರ ಅಂದ್ರೆ ಮೇ 18ರಂದು ಚೆನ್ನೈ ತಂಡದ ಎದುರು ಆರ್‌ಸಿಬಿ ಪಂದ್ಯ ಆಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡ ಬರೋಬ್ಬರಿ 219 ರನ್‌ಗಳ ಗುರಿಯ ನೀಡಿ ಮಂದಹಾಸ ಬೀರಿತ್ತು. ಹೀಗಿದ್ದಾಗ 219 ರನ್ ಗುರಿ ಬೆನ್ನತ್ತಿದ್ದ ಚೆನ್ನೈ ತಂಡ ರನ್ ಗಳಿಸಲು ಪರದಾಡಿತ್ತು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಕೈಗೆ ಚೆನ್ನೈ ಆಟಗಾರ ಹೊಡೆದಿದ್ದ ಬಾಲ್ ನೇರವಾಗಿ ಬಂದು ಬಿತ್ತು. ವಿರಾಟ್ ಕೊಹ್ಲಿ ಅವರು ಆಗ ಬಾಲ್ ಕೈಯಲ್ಲಿ ಹಿಡಿದು ನೇರ ವಿಕೆಟ್ ಕಡೆಗೆ ಎಸೆಯುವ ರೀತಿ ನಾಟಕ ಮಾಡಿದ್ದಾರೆ. ಆಗ, ಚೆನ್ನೈ ಆಟಗಾರ ತಾನು ರನೌಟ್ ಆಗ್ತೀನಿ ಅಂತಾ ಭಯದಲ್ಲಿ ಡೈವ್ ಹೊಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಆರ್‌ಸಿಬಿ VS ರಾಜಸ್ಥಾನ ಮ್ಯಾಚ್!
ಮತ್ತೊಂದು ಕಡೆ ಚೆನ್ನೈ ತಂಡವನ್ನು ಸೋಲಿಸಿ ಪ್ಲೇಆಫ್ ಪ್ರವೇಶ ಮಾಡಿರುವ ಆರ್‌ಸಿಬಿ ಟೀಂ ಇದೀಗ ಮತ್ತೊಂದು ಸಮರಕ್ಕೆ ಸಜ್ಜಾಗಿದೆ. ಆರ್‌ಸಿಬಿ ತಂಡವು ಪ್ಲೇಆಫ್‌ನಲ್ಲಿ ರಾಜಸ್ಥಾನ ತಂಡದ ಎದುರು ಮೊದಲ ಮ್ಯಾಚ್ ಆಡಲಿದೆ. ಈ ಕುರಿತು ಸಿದ್ಧತೆಗಳು ಈಗ ಸಾಗಿದ್ದು, ರಾಜಸ್ಥಾನ ತಂಡಕ್ಕೆ ಸೋಲಿನ ರುಚಿ ತೋರಿಸಲು ಕಾಯ್ತಾ ಇದ್ದಾರೆ ಆರ್‌ಸಿಬಿ ಆಟಗಾರರು. ಹಾಗೇ ಈ ಮೂಲಕ ಫೈನಲ್ ತಲುಪಲು ಬೆಂಗಳೂರು ಟೀಂ ಹುಡುಗರು ಸಿದ್ಧತೆ ಆರಂಭಿಸಿದ್ದಾರೆ.












Click it and Unblock the Notifications