ಕಾಂಗರೂ ಬೇಟೆ ಮುಗಿತು, ಈಗ ಇಂಗ್ಲೆಂಡ್ ಬೇಟೆಗೆ ಚಕ್ರವ್ಯೂಹ
ಈಗಾಗಲೇ ಏಕದಿನ ವಿಶ್ವಕಪ್ ಸೋಲಿನ ಆಸ್ಟ್ರೇಲಿಯಾ ಲೆಕ್ಕವನ್ನು ಚುಕ್ತಾ ಮಾಡಿರುವ ಭಾರತಕ್ಕೆ, ಮತ್ತೊಂದು ಹಳೆಯ ಬಾಕಿ ತೀರಿಸುವ ಅವಕಾಶ. ಜೊತೆ ಐಸಿಸಿ ಟ್ರೋಫಿಯ ದಶಕಗಳ ಬರಕ್ಕೂ ಅಂತ್ಯ ಹಾಡುವ ಮತ್ತೊಂದು ಸುವರ್ಣಾವಕಾಶ.
ನವಂಬರ್ 10, 2022 ಈ ದಿನವನ್ನು ಟೀಮ್ ಇಂಡಿಯಾ ಕ್ರಿಕೆಟ್ ಫ್ಯಾನ್ಸ್ ಮರೆಯಲು ಸಾಧ್ಯವೇ ಇಲ್ಲ. ಆಸ್ಟ್ರೇಲಿಯಾದ ಆಡಿಲೇಡ್‌ನ ಓವೆಲ್ ಮೈದಾನದಲ್ಲಿ ಇಂಗ್ಲೆಂಡ್, ಬ್ಲ್ಯೂ ಬಾಯ್ಸ್ ಫೈನಲ್ ಏರುವ ಆಸೆಗೆ ಕೊಳ್ಳಿ ಇಟ್ಟಿತ್ತು. ಅಂದು ಅಕ್ಷರಶಃ ಟೀಮ್ ಇಂಡಿಯಾ ಅಭಿಮಾನಿಗಳ ಕಣ್ಣಂಚಲ್ಲಿ ನೀರು ಬಂದಿತ್ತು. ಈಗ ಆ ಸೋಲಿನ ಕಹಿಯನ್ನು ಮರೆತು, ಸಾಗಲು ಬೆಸ್ಟ್ ಟೈಮ್..

ಎರಡನೇ ಸೆಮಿಫೈನಲ್
ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಹಳೆಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಹಾಟ್ ಫೆವರೀಟ್..
ಸೋಲಿನ ಸೇಡು
ಈಗಾಗಲೇ ಟೀಮ್ ಇಂಡಿಯಾ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಪೈನಲ್ ಪಂದ್ಯದ ಸೋಲಿಗೆ, ಸೂಪರ್ 8 ಹಂತದಲ್ಲಿ ಆಸೀಸ್ ವಿರುದ್ಧ ಲೆಕ್ಕಾಚಾರ ಚುಕ್ತಾ ಮಾಡಿದೆ. ಈಗ ಇಂಗ್ಲೆಂಡ್ ತಂಡದ ಲೆಕ್ಕಾ ಬಾಕಿ ಇದ್ದು, ಗಯಾನಾದಲ್ಲಿ ಈ ಲೆಕ್ಕಾವನ್ನು ಸರಿ ಮಾಡಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ.

ಓವೆಲ್‌ನ ಸೋಲಿಗೆ ಪ್ರತಿಯಾಗಿ ಗಯಾನದಲ್ಲಿ ಎದುರಾಳಿಗೆ ಸೋಲಿನ ಬರೆಯನ್ನು ಹಾಕಲು ಭಾರತ ಸನ್ನದ್ಧವಾಗಿದೆ. ಓವಲ್‌ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 10 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಈ ಸೋಲಿನ ನೋವು ಇನ್ನು ಟೀಮ್ ಇಂಡಿಯಾ ಆಟಗಾರರನ್ನು ಕಾಡುತ್ತಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ, ಎರಡನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್ ತಂಡದ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದಲ್ಲಿ ಗೆಲುವು ಫಿಕ್ಸ್.. ಇಂಗ್ಲೆಂಡ್ ತಂಡಕ್ಕೆ ಕಾಟ ನೀಡಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಿದ್ಧರಾಗಿದ್ದಾರೆ.

ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯಗೂ ಇಂಗ್ಲೆಂಡ್ ಅಂದರೆ ಇಷ್ಟ. ಈ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ ಅಬ್ಬರಿಸುತ್ತಾರೆ. ಈ ತಂಡದ ವಿರುದ್ಧ ಸೂರ್ಯಕುಮಾರ್ ಶತಕ ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಈ ಆಟಗಾರರು ಜವಾಬ್ದಾರಿಯಿಂದ ಆಟವಾಡಿದರೆ, ಗೆಲುವಿನ ಆಸೆ ಚಿಗುರುತ್ತದೆ.
ಭಾರತ, ಇಂಗ್ಲೆಂಡ್ ಹೆಡ್ ಟು ಹೆಡ್ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ದಾಖಲೆ ನೋಡಿದರೆ, ಎರಡು ತಂಡಗಳ ನಡುವೆ ಇದುವರೆಗೆ 23 ಪಂದ್ಯಗಳು ನಡೆದಿವೆ, ಇದರಲ್ಲಿ ಟೀಮ್ ಇಂಡಿಯಾ 12 ಬಾರಿ ಗೆದ್ದರೆ, ಇಂಗ್ಲೆಂಡ್ ತಂಡ 11 ಬಾರಿ ಗೆದ್ದಿದೆ . ಟಿ20 ವಿಶ್ವಕಪ್‌ನಲ್ಲಿ ಎರಡು ತಂಡಗಳ ನಡುವಿನ ದಾಖಲೆಯ ಸಮನಾಗಿದೆ. ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಇಬ್ಬರೂ ತಲಾ 2 ಪಂದ್ಯಗಳನ್ನು ಗೆದ್ದಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications