T20 World Cup: ಟೀಮ್ ಇಂಡಿಯಾಕ್ಕೆ ರಿಷಭ್‌ ಪಂತ್‌ ಎಂಟ್ರಿ ಸಾಧ್ಯತೆ

ಈ ವರ್ಷ ಜೂನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಇನ್ನೂ ಸ್ವಲ್ಪ ಕೆಲವೇ ದಿನಗಳು ಬಾಕಿ ಇವೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದ್ದು, ಟೀಮ್ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಕಳೆದ ಒಂದೂವರೆ ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭಾರತ ತಂಡಕ್ಕೆ ಮರಳಬಹುದು ಎಂಬ ಶುಭ ಸುದ್ದಿ ಬಂದಿದೆ. ಅವರು ಟಿ20 ವಿಶ್ವಕಪ್‌ನಲ್ಲಿ ಆಡುವುದನ್ನು ನೋಡಿದರೆ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ.

T20 World Cup Wicket-keeper batsman Rishabh Pant likely to enter Team India

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್ ಪಂತ್‌, ಡಿಸೆಂಬರ್‌ 2022ರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರಿಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಅವರು ಮೈದಾನಕ್ಕೆ ಎಂಟ್ರಿ ನೀಡಲು ಆಗಲಿಲ್ಲ. 16 ತಿಂಗಳುಗಳ ರೆಸ್ಟ್‌ ಹಾಗೂ ಕಠಿಣ ಪರಿಶ್ರಮದ ಸಹಾಯದಿಂದ ರಿಷಭ್‌ ಪಂಥ್‌, ಮತ್ತೆ ಐಪಿಎಲ್‌ನಲ್ಲಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕ್ರಿಕ್‌ಬಜ್‌ ವರದಿಯ ಪ್ರಕಾರ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರೂಪದಲ್ಲಿ ಕಾಣಿಸುಕೊಳ್ಳುವ ಸಾಧ್ಯತೆಯನ್ನು ವರದಿ ಮಾಡಿದೆ.

ಐಪಿಎಲ್‌ನಲ್ಲಿ ಅಬ್ಬರ

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ರಿಷಭ್ ಪಂತ್‌ ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಆಯ್ಕೆದಾರರ ಚಿತ್ತ ಕದ್ದಿದ್ದಾರೆ. ಅವರು ರನ್‌ಗಳನ್ನು ಗಳಿಸಿ ಅವಕಾಶಗಳನ್ನು ತಮ್ಮತ್ತ ಬರಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಪಂತ್‌ ಅವರ ಫಿಟ್ನೆಸ್‌ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಪಂತ್‌ ಮೈದಾನದಲ್ಲಿ ಉತ್ತರ ನೀಡಿದ್ದಾರೆ. ರಿಷಭ್‌ ತಮ್ಮ ಸಿಗ್ನೇಚರ್‌ ಶಾಟ್‌, ಸಿಂಗಲ್ ಹ್ಯಾಂಡ್‌ ಸಿಕ್ಸರ್‌ ಬಾರಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಐಪಿಎಲ್‌ನಲ್ಲಿ ಪಂತ್ ಇಂತಹದ್ದೇ ಶಾಟ್ ಪ್ರಯೋಗಿಸಿ, ತಾವು ಫಿಟ್ ಆಗಿರುವುದಾಗಿ ತಿಳಿಸಿದ್ದಾರೆ.

T20 World Cup Wicket-keeper batsman Rishabh Pant likely to enter Team India

ಈ ವರ್ಷದ ಐಪಿಎಲ್‌ನಲ್ಲಿ ರಿಷಬ್ ಪಂತ್ ನೀಡಿದ ಪ್ರದರ್ಶನದ ನಂತರ, ಅವರು ಇತರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಸಾಬೀತು ಪಡಿಸಿದ್ದಾರೆ. ಐಪಿಎಲ್‌ನಲ್ಲಿ ಇವರು ನೀಡಿದ ಪ್ರದರ್ಶನ ಇವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮರಳುವ ದಿನಗಳು ದೂರವಿಲ್ಲ ಎಂಬುದನ್ನು ಸಾಬೀತು ಪಡಿಸುವಂತಿವೆ. ಪಂತ್‌ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಂಡಲ್ಲಿ ನಿಶ್ಚಿತವಾಗಿಯೂ ಅವರು ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬಹುದು.

ಐಪಿಎಲ್‌ನಲ್ಲಿ ರನ್ ಮಹಲ್

ಡೆಲ್ಲಿ ಕ್ಯಾಪಿಟಲ್ಸ್ ಪರ ಪಂತ್‌ ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಇವರು ಆಡಿರುವ 5 ಪಂದ್ಯಗಳಲ್ಲಿ 18, 28, 51, 55 ಮತ್ತು 1 ರನ್ ಬಾರಿಸಿದ್ದಾರೆ. ಆಡಿರುವ ಐದೇ ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿ ಅಬ್ಬರಿಸಿದ್ದಾರೆ. ಅಲ್ಲದೆ 153 ರನ್‌ಗಳನ್ನು ಸಿಡಿಸಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಪಂತ್ ಹಳೆಯ ಧಾಟಿಯಲ್ಲಿ ಬೌಂಡರಿ ಹಾಗೂ ಸಿಕ್ಸರ್‌ ಬಾರಿಸುತ್ತಿದ್ದು ಆಯ್ಕೆ ದಾರರ ಗಮನ ಸೆಳೆಯುತ್ತಿದೆ. ಇವರ ಆಟವನ್ನು ನೋಡಲು ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕದ ಅಭಿಮಾನಿಗಳು ಕಾತುರಾಗಿದ್ದರೆ, ಎದುರಾಳಿಗಳಲ್ಲಿ ನಡುಕ ಹುಟ್ಟಿದೆ.

ರಿಷಭ್‌ ಪಂಥ್‌ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಚಾಂಪಿಯನ್‌ಪಟ್ಟ ತೊಡಿಸಲು ನೆರವಾಗಲಿ ಎಂಬುದೇ ಅಭಿಮಾನಿಗಳ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+