T20 World Cup IND vs PAK: ಮೈದಾನಕ್ಕೆ ಇಳಿಯುವ ಮುನ್ನವೇ ಪಾಕಿಸ್ತಾನಕ್ಕೆ ಶುರುವಾಯಿತು ನಡುಕ
ಮುಂದಿನ ಭಾನುವಾರ (ಜುನ್ 9) ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಫೈಟ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಸಕಲ ರಿತಿಯಲ್ಲೂ ಸಿದ್ಧವಾಗಿದೆ. ಅಲ್ಲದೆ ಹೈವೋಲ್ಟೇಜ್ ಪಂದ್ಯದ ಮೇಲೆ ರೋಹಿತ್ ಪಡೆ ಚಿತ್ತವನ್ನು ನೆಟ್ಟಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಅಂಗಳಕ್ಕೆ ಇಳಿಯುವ ಮುನ್ನವೇ ಭಯ ಆರಂಭವಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್ ಭಯ ಹುಟ್ಟಿಸಿದ್ದಾರೆ. ಈ ಪ್ಲೇಯರ್ ಆಟವನ್ನು ಕಂಡು ಬಾಬರ್ ಅಜಮ್ ಪಡೆ ತಬ್ಬಿಬ್ಬಾಗಿದೆ. ಇವರನ್ನು ಹೇಗೆ ಕಟ್ಟಿ ಹಾಕುವುದು ಎಂಬ ಚಿಂತೆ ಬಾಬರ್ ಪಡೆಯನ್ನು ಕಾಡುತ್ತಿದೆ. ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವ ಈ ಬ್ಯಾಟರ್‌ಗಳ ಧಮಾಕೆದಾರ್ ಬ್ಯಾಟಿಂಗ್‌ನ ಟೀಸರ್ ನೋಡಿರುವ ಪಾಕ್‌ಗೆ ಭಯ ಶುರುವಾಗಿದೆ. ಹೀಗೆ ನಮ್ಮ ವಿರುದ್ಧ ಆಡಿದರೆ ಹೇಗಪ್ಪಾ ಎಂಬ ಆತಂಕವೂ ಕಾಣಿಸುತ್ತಿದೆ.

ಅಂದಾಹಗೆ ಪಾಕಿಸ್ತಾನ ತಂಡಕ್ಕೆ ಹೀಗೆ ಭಯವನ್ನು ಹುಟ್ಟಿಸಿದ್ದು, ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅಲ್ಲ. ಖ್ಯಾತ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಲ್ಲವೇ ಅಲ್ಲ. ಇನ್ನು ಸೂರ್ಯಕುಮಾರ್ ಅವರನ್ನು ಈ ಲೀಸ್ಟ್ ಸೇರಿಲ್ಲ. ಹಾಗಿದ್ದರೆ ಪಾಕ್ ತಂಡದ ನಿದ್ದೆ ಗೆಡಿಸಿರುವ ಟೀಮ್ ಇಂಡಿಯಾದ ಆ ಇಬ್ಬರು ಯಾರು ಬ್ಯಾಟರ್‌ಗಳು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಪಾಕ್ ಕಾಡುವ ಆ ಪ್ಲೇಯರ್ಸ್ ಯಾರು?
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಬ್ಬರು ಗಾಯದಿಂದ ಚೇತರಿಸಿಕೊಂಡು ಟಿ20 ವಿಶ್ವಕಪ್‌ನಲ್ಲಿ ಆಡಿದ ಧಾಟಿಯನ್ನು ಕಂಡು ನಿಜಕ್ಕೂ ಪಾಕಿಸ್ತಾನಕ್ಕೆ ಭಯ ಆರಂಭವಾಗಿದೆ. ಈ ಆಟಗಾರರೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ.
ಗಾಯದಿಂದ ಚೇತರಿಸಿಕೊಂಡ ಬಳಿಕ ಈ ಇಬ್ಬರೂ ಆಟಗಾರರು ಆಡಿದ ಧಾಟಿಯನ್ನು ಕಂಡು ಪಾಕ್ ಆಟಗಾರರು ಕಂಗಾಲಾಗಿದ್ದಾರೆ. ಒಬ್ಬ ಪ್ಲೇಯರ್ ಕಾರ್ ಅಪಘಾತದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದರೆ, ಇನ್ನೊಬ್ಬ ಆಟಗಾರ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯದ ಬಳಿಕ ರಾಷ್ಟ್ರೀಯ ತಂಡದ ಪರ ಮೈದಾನಕ್ಕೆ ಇಳಿದಿರಲಿಲ್ಲ. ಆದರೆ ಶನಿವಾರ ಇವರಿಬ್ಬರ ಆಟ ಪಾಕ್‌ಗೆ ನಡುಕು ಹುಟ್ಟಿಸಿದೆ.

ಅಭ್ಯಾಸ ಪಂದ್ಯದಲ್ಲಿ ಹೇಗಿತ್ತು ಇವರ ಆಟ
ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ ರಿಷಭ್ ಪಂತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಿಷಭ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿದರು. ಇವರ ಬ್ಯಾಟಿಂಗ್ ಧಮಾಕಾ ಆಗುತ್ತಿದ್ದಂತೆ ಹಾರ್ದಿಕ್ ಶೋ ಆರಂಭವಾಯಿತು. ಇವರು ಸಹ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಇವರಿಬ್ಬರು ಪಾಕಿಸ್ತಾನ ತಂಡಕ್ಕೆ ಕಾಡಬಲ್ಲ ಆಟಗಾರರು. ಇವರಿಬ್ಬರ ಆಟಕ್ಕೆ ಹೇಗೆ ಬ್ರೇಕ್ ಹಾಕುವುದು ಎಂಬುದೇ ಪಾಕಿಸ್ತಾನ ತಂಡಕ್ಕೆ ದೊಡ್ಡ ಪ್ರಶ್ನೆಯಾಗಿದೆ.












Click it and Unblock the Notifications