Get Updates
Get notified of breaking news, exclusive insights, and must-see stories!

IND Vs PAK: ಪಾಕಿಸ್ತಾನ ಬೌಲರ್‌ಗಳ ಚಳಿ ಬಿಡಿಸಿದ ಇಶಾನ್ ಕಿಶಾನ್: 176 ರನ್‌ಗಳ ಟಾರ್ಗೆಟ್‌ ನೀಡಿದ ಟೀಂ ಇಂಡಿಯಾ

India Vs Pakistan: ಕೊಲೊಂಬೊದಾ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ 2026ರ ಎ ಗುಂಪಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಭಾರತ ತಂಡವು ಪಾಕಿಸ್ತಾನಕ್ಕೆ 176 ರನ್‌ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟ್‌ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 175 ರನ್‌ಗಳನ್ನು ಕಲೆಹಾಕಿತು. ಇಶಾನ್ ಕಿಶನ್ ಅವರು ಸಿಡಿಸಿದ 77 ರನ್‌ಗಳೇ ತಂಡ ಇಷ್ಟೊಂದು ಮೊತ್ತ ಕಲೆಹಾಕಲು ಪ್ರಮುಖ ಕಾರಣವಾಯಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ನಾಲ್ಕು ಬಾಲ್ ಎದುರಿಸಿ ಯಾವುದೇ ರನ್‌ ಇಲ್ಲದೆ, ಶೂನ್ಯ ಸುತ್ತಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು.

Ishan Kishan s Blazing 77 Powers India to 175 7 Set 176-Run Target for Pakistan in T20 World Cup 2026

ಪಾಕಿಸ್ತಾನ ಬೌಲರ್‌ಗಳ ಬೆವರಳಿಸಿದ ಇಶಾನ್ ಕಿಶನ್

ಆದರೂ, ಬಳಿಕ ಧೈರ್ಯ ಕಳೆದುಕೊಳ್ಳದ ಇಶಾನ್‌ ಕಿಶನ್‌ ಪಾಕ್‌ ಬೌಲರ್‌ಗಳನ್ನು ಬೆಂಡೆತ್ತಿ ಬೃಹತ್ ರನ್‌ಗಳನ್ನು ಕಲೆಹಾಕಿದರು. ಕೇವಲ 40 ಎಸೆತಗಳಲ್ಲಿ ಮೂರು ಸಿಕ್ಸ್‌ ಹಾಗೂ ಹತ್ತು ಬೌಂಡರಿಗಳ ಸಹಿತ ಬರೋಬ್ಬರಿ 77 ರನ್‌ ಕಲೆಹಾಕಿ ವಿಕೆಟ್‌ ಒಪ್ಪಿಸಿದರು. ಇವರು 27 ಬಾಲ್‌ಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು.

ಭಾರತದ ಪರ ಯಾರು ಎಷ್ಟು ರನ್‌ ಸಿಡಿಸಿದರು?

ಉಳಿದಂತೆ ತಿಲಕ್ ವರ್ಮಾ 1 ಸಿಕ್ಸ್‌, ಎರಡು ಬೌಂಡರಿಗಳ ಸಹಿತ 25 ರನ್‌ ಕಲೆಹಾಕಿದರೆ, ನಾಯಕ ಸೂರ್ಯಕುಮಾರ್ ಯಾದವ್ 32(29), ಶಿವಂ ದುಬೆ 27(17), ರಿಂಕು ಸಿಂಗ್ ಅಜೇಯ 11(4) ರನ್‌ಗಳು ತಂಡದ ಮೊತ್ತವನ್ನು 170 ಗಡಿ ದಾಡಿಸಿದವು. ಈ ಮೂಲಕ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ ಗಳಿಸಿದೆ. ಇನ್ನೂ ಅಭಿಷೇಕ್ ಶರ್ಮಾ ಸೇರಿದಂತೆ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಾಟೆಲ್ ಶೂನ್ಯಕ್ಕೆ ಔಟ್‌ ಆಗಿ ಪೆವಿಲಿಯನ್‌ ಅತ್ತ ತೆರಳಿದರು.

ಇಶಾನ್ ಕಿಶನ್ ಹೊರತುಪಡಿಸಿ, ಪಾಕಿಸ್ತಾನದ ಸ್ಪಿನ್ನರ್‌ಗಳು ಆರ್.ಪ್ರೇಮದಾಸ ಕ್ರೀಡಾಂಗಣದ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಹೆಚ್ಚಿನ ರನ್‌ ಗಳಿಸಲು ಅವಕಾಶ ನೀಡಲಿಲ್ಲ. ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಕೇವಲ 27 ಬಾಲ್‌ಗಳಲ್ಲಿ ಅರ್ಧಶತಕ ಸಿಡಿಸಿದ್ದು, ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಹಾಗೂ ಮೂರು ಸಿಕ್ಸರ್‌ಗಳು ಸೇರಿವೆ. ಟಾಪ್‌ ಆರ್ಡ್‌ರ್‌ನಲ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ, ಪಾಕಿಸ್ತಾನ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದರೂ ಭಾರತ ಉತ್ತಮ ರನ್‌ರೇಟ್ ಕಾಯ್ದುಕೊಂಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+