ಚಾಂಪಿಯನ್ನರಿಗೆ ಮುಂಬೈನಲ್ಲಿ ನಡೆಯಲಿದೆ ಅಭಿಮಾನದ ಆರತಿ
ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಟೀಮ್ ಇಂಡಿಯಾ ತವರಿಗೆ ಮರಳಿದೆ. ಚಾಂಪಿಯನ್ ತಂಡವನ್ನು ಕಣ್ಣು ತುಂಬಿಕೊಳ್ಳಲು ಜನ ಸಹ ಕಾತುರದಿಂದ ಕಾಯುತ್ತಿದ್ದಾರೆ. ಬಾರ್ಬಡೋಸ್ ವಿಮಾನ ನಿಲ್ದಾಣದಿಂದ ಟೀಮ್ ಇಂಡಿಯಾ ನೇರವಾಗಿ ನವದೆಹಲಿಗೆ ಆಗಮಿಸಿತು. ನವದೆಹಲಿ ಏರ್ ಪೋರ್ಟ್‌ನಲ್ಲೂ ಟೀಮ್ ಇಂಡಿಯಾ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಯಿತು.
ಟೀಮ್ ಇಂಡಿಯಾ ಬಳಿಕ ದೆಹಲಿಯ ಮೌರ್ಯ ಹೊಟೇಲ್‌ನಲ್ಲಿ ತಂಗಿತು. ಇದೇ ವೇಳೆ ಮೌರ್ಯ ಹೊಟೇಲ್ ಸಿಬ್ಬಂದಿ ಟೀಮ್ ಇಂಡಿಯಾ ಆಟಗಾರರ ನೆಚ್ಚಿನ ತಿಂಡಿಗಳನ್ನು ಮಾಡಿಟ್ಟಿದ್ದರು. ಅಲ್ಲದೆ ಚಾಂಪಿಯನ್ ತಂಡಕ್ಕೆ ವಿಶೇಷ ಕೇಕ್ ಸಹ ಸಿದ್ಧವಾಗಿತ್ತು.

ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದ ಟೀಮ್ ಇಂಡಿಯಾ, ದೆಹಲಿಯಿಂದ ನಿರ್ಗಮಿಸಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂಬೈಗೆ ಲ್ಯಾಂಡ್ ಆಗಲಿರುವ ಭಾರತ ತಂಡದ ಭರ್ಜರಿ ರೋಡ್ ಶೋನಲ್ಲಿ ಭಾಗವಹಿಸಲಿದೆ.
#WATCH | Cricket fever grips Mumbai as fans cheer on for Team India. The team will have a victory parade here in the city to celebrate their #T20WorldCup2024 victory. pic.twitter.com/4XHiEdoXZW
— ANI (@ANI) July 4, 2024
ಮಧುವಣಗಿತ್ತಿಯಂತೆ ಸಿಂಗಾರ ಗೊಂಡ ವಾಂಖೇಡೆ
ಚಾಂಪಿಯನ್ ತಂಡಕ್ಕೆ ಭರ್ಜರಿ ಸ್ವಾಗತ ನೀಡಲು ಈಗಾಗಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೀಮ್ ಇಂಡಿಯಾ ಆಟಗಾರರ ರೋಡ್ ಶೋಗೆ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದ, ಡಬಲ್ ಡೆಕ್ಕರ್ ಬಸ್ ಸಿದ್ಧವಾಗಿದೆ. ನಾರಿಮನ್ ಪಾಯಿಂಟ್‌ನಿಂದ ಬಸ್ ವಾಂಖೆಡೆ ಸ್ಟೇಡಿಯಂವರೆಗೂ ರೋಡ್ ಶೋ ನಡೆಲಿದೆ.
#WATCH | Cricket fans dance and celebrate outside Wankhede Stadium in Mumbai as they await the arrival of Team India.
— ANI (@ANI) July 4, 2024
The #T20WorldCup2024 champion's victory parade will be held from Marine Drive to Wankhede Stadium later this evening. pic.twitter.com/VMINqhcgId
ಈ ರೋಡ್ ಶೋವನ್ನು ಕಣ್ಣು ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದಾರೆ. ರಸ್ತೆಯ ಪಕ್ಕದಲ್ಲಿನ ಜನರ ಜೋಶ್ ಟೀಮ್ ಇಂಡಿಯಾ ಸಂಭ್ರಮಾಚರಣೆಯನ್ನು ಹೆಚ್ಚಿಸಲಿದೆ. ಕಣ್ಣು ಹಾಯಿಸಿದಷ್ಟು ದೂರದಲ್ಲಿ ಬರೀ ಟೀಮ್ ಇಂಡಿಯಾ ಜೆರ್ಸಿ ತೊಟ್ಟ ಅಭಿಮಾನಿಗಳ ದಂಡೇ ಕಾಣಿಸಿಕೊಳ್ಳುತ್ತಿದೆ. ಬರೀ ವಾಹನ ದಟ್ಟಣೆಯಿಂದ ತುಂಬಿ ಕೊಂಡಿದ್ದ ನಾರಿನ್ ಪಾಯಿಂಟ್ ಸಹ ಈಗ ಖಾಲಿ ಖಾಲಿ ಆಗಿದೆ.
#WATCH | Maharashtra: Enthusiastic cricket fans arrive at Wankhede Stadium in Mumbai.
— ANI (@ANI) July 4, 2024
The #T20WorldCup2024 champions Team India's victory parade will be held from Marine Drive to Wankhede Stadium later this evening. pic.twitter.com/6kku4lIiGN
ಟೀಮ್ ಇಂಡಿಯಾ ಅಭಿಮಾನಿಗಳು ಗಂಟೆ ಗಂಟ್ಟಲೆ ನಿಂತು ತಮ್ಮ ನೆಚ್ಚಿನ ಆಟಗಾರರ ಒಂದು ಝಲಕ್ ಪಡೆಯಲು ಕಾತುರರಾಗಿದ್ದಾರೆ. ಈ ಅಭಿಮಾನಿಗಳು ಟೀಮ್ ಇಂಡಿಯಾದ ಆಟಗಾರರಿಗೆ ಅಭಿಮಾನದ ಆರತಿ ಎತ್ತಲು ಸಿದ್ಧರಾಗಿದ್ದಾರೆ.












Click it and Unblock the Notifications