Suryakumar Yadav: ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಾಗಿ ಬಂತು ಅಭಿಮಾನಿಗಳ ಸುನಾಮಿ!

ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು, ಟ್ರೋಫಿ ಹೊತ್ತುಕೊಂಡು ಭಾರತಕ್ಕೆ ಬಂದ ಟೀಂ ಇಂಡಿಯಾ ಆಟಗಾರರಿಗೆ ಅಭಿಮಾನಿಗಳ ಸುನಾಮಿಯಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಸಮಯದಲ್ಲಿ ಮುಂಬೈ ವಾಂಖೇಡೆ ಕ್ರೀಡಾಂಗಣ ಹೊಸ ಇತಿಹಾಸಕ್ಕೆ ಕೂಡ ಸಾಕ್ಷಿ ಆಗಿತ್ತು. ಅದರಲ್ಲೂ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಜೋಡಿ ದೇಶ ಭಕ್ತಿ ಹಾಡಿಗೆ ಧ್ವನಿಗೂಡಿಸಿ ಇಡೀ ಜಗತ್ತಿನ ಗಮನ ಸೆಳೆದಿದೆ. ಆ ವಿಡಿಯೋ ಇಲ್ಲಿದೆ ನೋಡಲು ಮುಂದೆ ಓದಿ.

ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಭಾರತಕ್ಕೆ ಬರಲು ತಡವಾಗಿತ್ತು. ಭಾರತದ ಆಟಗಾರರು ನಿನ್ನೆ ದೆಹಲಿಗೆ ಬಂದು ಇಳಿದರು, ಹೀಗೆ ಭಾರತಕ್ಕೆ ಬಂದ ಆಟಗಾರರಿಗೆ ಭಾರಿ ದೊಡ್ಡ ಸ್ವಾಗತ ಸಿಕ್ಕಿತ್ತು. ಪ್ರಧಾನಿ ಮೋದಿ ಅವರ ಬಳಿಯೂ ಕಪ್ ತೆಗೆದುಕೊಂಡು ಹೋಗಿ ಸಂಭ್ರಮ ಹಂಚಿಕೊಂಡ ಟೀಂ ಇಂಡಿಯಾ ಆಟಗಾರರು, ಆ ನಂತರ ನೇರವಾಗಿ ಮಹಾನಗರಿ ಮುಂಬೈಗೆ ಬಂದರು.

Suryakumar Yadav With Virat Kohli And Rohit Sharma Welcomed Very Grandly In Mumbai By Fans

ಮುಂಬೈಗೆ ಬಂದಾಗಲೇ ನೋಡಿ ಅಸಲಿ ಸಂಭ್ರಮಾಚರಣೆ ಶುರುವಾಗಿದ್ದು. ಸೂರ್ಯಕುಮಾರ್ ಯಾದವ್ & ರೋಹಿತ್ ಶರ್ಮಾ ಅವರ ತವರೂರು ಮುಂಬೈನಲ್ಲಿ ಭಾರತದ ಆಟಗಾರರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು, ಅದರಲ್ಲೂ ವಾಂಖೇಡೆ ಮೈದಾನದಲ್ಲಿ ಆಗಿದ್ದು ಏನು ಗೊತ್ತೆ? ಅಭಿಮಾನಿಗಳ ಜೊತೆಗೆ ವಿರಾಟ್ ಕೊಹ್ಲಿ ಹಾಡಿದ ದೇಶಭಕ್ತಿ ಗೀತೆ ಯಾವುದು? ವಿಡಿಯೋ ನೋಡಲು ಮುಂದೆ ಓದಿ.

ದೇಶಭಕ್ತಿ ಗೀತೆ ಹಾಡಿದ ವಿರಾಟ್ ಕೊಹ್ಲಿ!

ಮುಂಬೈನ ವಾಂಖೇಡೆ ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳ ಸುನಾಮಿಯೇ ಅಪ್ಪಳಿಸಿತ್ತು. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ವಾಂಖೇಡೆ ಕ್ರಿಕೆಟ್ ಮೈದಾನಕ್ಕೆ ಬಂದು, ಭಾರತೀಯ ಆಟಗಾರರಿಗೆ ಶುಭ ಕೋರಿದರು. ಈ ವೇಳೆ 'ಮಾ ತುಜೆ ಸಲಾಂ' ಹಾಡಿಗೆ ಧ್ವನಿಗೂಡಿಸಿದರು ಭಾರತ ಕ್ರಿಕೆಟ್ ತಂಡದ ಆಟಗಾರರು. ಅದ್ರಲ್ಲೂ ವಿರಾಟ್ ಕೊಹ್ಲಿ ಅವರು ಈ ಸಮಯದಲ್ಲಿ ಭಾವುಕರಾಗಿ ದೇಶಭಕ್ತಿ ಗೀತೆಗೆ ಧ್ವನಿಯಾದರು. ಅತ್ತ ಲಕ್ಷ ಲಕ್ಷ ಪ್ರೇಕ್ಷಕರು ಕೂಡ ಭಾರತದ ಆಟಗಾರರ ದೇಶಭಕ್ತಿಗೆ ಸಾಥ್ ನೀಡಿದರು.

ಭರ್ಜರಿ ಮೆರೆವಣಿಗೆ ಮೂಲಕ ಎಂಟ್ರಿ!

ಮುಂಬೈನ ವಾಂಖೇಡೆ ಕ್ರಿಕೆಟ್ ಮೈದಾನಕ್ಕೆ ಬರುವ ಮಾರ್ಗದಲ್ಲಿ ತೆರೆದ ವಾಹನ ಏರಿದ್ದ, ಭಾರತ ಕ್ರಿಕೆಟ್ ತಂಡದ ಆಟಗಾರರು ಲಕ್ಷ ಲಕ್ಷ ಅಭಿಮಾನಿಗಳಿಂದ ಶುಭಾಶಯ ಪಡೆದರು. ಅದರಲ್ಲೂ ಮುಂಬೈ ಮಹಾನಗರದ ಬೀಚ್ ರೋಡ್ ಉದ್ದಕ್ಕೂ ಅಭಿಮಾನಿಗಳ ಸುನಾಮಿ ನಿಂತು ಭಾರತ ತಂಡಕ್ಕೆ ಸ್ವಾಗತ ಕೋರಿತು. ಹೀಗೆ ಬೃಹತ್ ಮೆರವಣಿಗೆ ಮೂಲಕ ಮುಂಬೈ ಕ್ರಿಕೆಟ್ ಮೈದಾನಕ್ಕೆ ಬಂದ ಭಾರತ ಕ್ರಿಕೆಟ್ ಆಟಗಾರರು ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+