State level Rifle shooting: ಪತಿಗೆ ಚಿನ್ನ, ಪತ್ನಿಗೆ ಬೆಳ್ಳಿ ಪದಕ- ರಾಜ್ಯಕ್ಕೇ ಮಾದರಿಯಾದ ಈ ದಂಪತಿ
ಚಾಮರಾಜನಗರ, ಜುಲೈ, 08: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ 22 ಚಾಂಪಿಯನ್‌ಶಿಷ್ 2024 ಪ್ರೋನ್ ಅನ್ನು ಆಯೋಜನೆ ಮಾಡಲಾಗಿತ್ತು. ಪುರುಷ ವಿಭಾಗದ ಪ್ರತ್ಯೇಕ ವಿಭಾಗದಲ್ಲಿ ನಗರದ ಜೋಡಿರಸ್ತೆಯಲ್ಲಿರುವ ಪ್ರಿಯಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ ರಮೇಶ್ ಬಾಬು ಭಾಗವಹಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದಪದಕ ಪಡೆದಿದ್ದಾರೆ. ಪತ್ನಿ ಸತ್ಯಭಾಮ ಕೂಡ ಮಹಿಳಾ ವಿಭಾಗದ ಪ್ರತ್ಯೇಕ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ದಂಪತಿಗಳು ಭಾಗವಹಿಸಿ ಈ ಸಾಧನೆ ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ರಮೇಶ್‌ಬಾಬು ಈ ಹಿಂದೆಯೂ ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಾಷ್ಟ್ರ, ರಾಜ್ಯದ ಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು ಒಟ್ಟು 107 ಪದಕಗಳನ್ನು ಪಡೆದಿದ್ದಾರೆ. ಅದರಲ್ಲಿ 73 ಚಿನ್ನದ ಪದಕ, 24 ಬೆಳ್ಳಿ ಪದಕ ಪಡೆದಿದ್ದಾರೆ.
ಇನ್ನು ಈತನ ಪತ್ನಿ ಸತ್ಯಭಾಮ ಎರಡು ವರ್ಷಗಳಿಂದ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ದ್ವಿತೀಯ ಸ್ಥಾನ ಪಡೆದು 2 ಬೆಳ್ಳಿ ಪದಕ ಪಡೆದಿದ್ದಾರೆ. ಇಬ್ಬರು ಕೂಡ ರೈಫಲ್ ಅಭ್ಯಾಸದಲ್ಲಿ ನಿರಂತರವಾಗಿ ತೊಡಗಿದ್ದು, ಅಂತಾರಾಷ್ಟ್ರೀಯ ಮಟ್ಟದ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಗುರಿಯಿಟ್ಟುಕೊಂಡಿದ್ದಾರೆ.
ಇನ್ನು ಸಾಧನೆ ಮಾಡಿದ ದಂಪತಿಯನ್ನು ಸ್ನೇಹಿತರು ಅಭಿನಂದಿಸಿ ಮುಂದಿನ ದಿನಗಳಲ್ಲಿ ಹೆಚ್ಚು ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವಂತೆ ಆಶಿಸಿ ಶುಭ ಕೋರಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ಅಸೋಸಿಯೇಷನ್ ಸ್ಥಾಪಿಸಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ 10 ಮಕ್ಕಳನ್ನು ಪ್ರತಿ ವರ್ಷದ ದತ್ತುಪಡೆದು ಅವರ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿ ಪ್ರೋತ್ಸಾಹಿಸಲು ಚಿಂತಿಸಲಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಉತ್ತಮ ಸಾಧನೆ: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿದಿರುತ್ತಾರೆ. ಹಾಗಂತ ಇವರೇನು ದಡ್ಡರಂತಲ್ಲ, ಇಂತಹವರೇ ಉತ್ತಮ ಸಾಧನೆ ಮಾಡಿದ ಉದಾಹರಣೆಗಳುವೆ. ಇನ್ನು ಕೆಲವು ಶ್ರೀಮಂತರ ಮಕ್ಕಳು ಮಾತ್ರ ಸಂಪೂರ್ಣವಾಗಿ ಪೋಷಕರ ಮೇಲೆಯೇ ಡಿಪೆಂಡ್ ಆಗಿ ಬೇಕಾಬಿಟ್ಟು ಹಣ ಹಾಳು ಮಾಡುತ್ತಾ, ಕೊನೆಗೆ ಜೀವನವನ್ನು ಹಾಳು ಮಾಡಿಕೊಂಡ ಘಟನೆಗಳು ಕೂಡ ನಡೆದಿವೆ. ಇವೆಲ್ಲದರ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಯಾವುದೇ ಕೋಚಿಂಗ್, ಟ್ಯೂಷನ್‌ಯಿಲ್ಲದೆ, ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಮಾದರಿಯಾಗಿದ್ದಾಳೆ.
ಯಾವುದೇ ಕೋಚಿಂಗ್, ಟ್ಯೂಶನ್ ಇಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು 700ಕ್ಕೆ 691 ಅಂಕ ಪಡೆಯುವ ಮೂಲಕ ಪಶ್ಚಿಮ ಬಂಗಾಳ ರಾಜ್ಯಕ್ಕೆ 3ನೇ ರ್‍ಯಾಂಕ್ ಬಂದಿದ್ದಾಳೆ. ಹಾಗಾದರೆ ಇದು ಹೇಗೆ ಸಾಧ್ಯ ಹಾಗೂ ಈ ವಿದ್ಯರ್ಥಿನಿಯ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಕೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಎಲ್ಲಾ ಪಠ್ಯಪುಸ್ತಕ ಇಂಗೀಷ್‌ನಲ್ಲಿ ಇರಲಿಲ್ಲ. ಬಂಗಾಳಿ ಭಾಷೆಯಲ್ಲಿರುವ ಕೆಲ ಪಠ್ಯಪುಸ್ತಕವನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಿ ಓದಬೇಕಾದ ಅನಿವಾರ್ಯತೆ ಇತ್ತು. ಖಾಸಗಿಯಾಗಿ ಯಾವುದೇ ಟ್ಯೂಶನ್ ಪಡೆದಿಲ್ಲ. ಬದಲಾಗಿ ಸ್ವಂತ ಪರಿಶ್ರಮದಿಂದ ಛಲದಿಂದ ಪಶ್ಚಿಮ ಬಂಗಾಳದ 10ನೇ ತರಗತಿ ವಿದ್ಯಾರ್ಥಿನಿ ಪುಷ್ಪಿತಾ ಬಸುರಿ 700ಕ್ಕೆ 691 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದು ಮಾದರಿಯಾಗಿರೆ.
ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ನಡೆಸುವ ಮೊದಲ ಇಂಗ್ಲೀಷ್ ಮಾಧ್ಯಮ ಶಾಲೆಯ ಮೊದಲ ಬ್ಯಾಚ್ ವಿದ್ಯಾರ್ಥಿನಿ ಪುಷ್ಪಿತ ಹೊಸ ಇತಿಹಾಸ ಸೃಷ್ಟಿಸಿ ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾಳೆ. ಬಂಗಾಳಿ ವಿಷಯದಲ್ಲಿ 97, ಇಂಗ್ಲೀಷ್ 99, ಗಣಿತ 98, ಭೌತಶಾಸ್ತ್ರ ವಿಜ್ಞಾನದಲ್ಲಿ 99, ಲೈಫ್ ಸೈನ್ಸ್ 100, ಇತಿಹಾಸ 100, ಭೂಗೋಳಶಾಸ್ತದಲ್ಲಿ 100 ಅಂಕ ಪಡೆದುಕೊಂಡಿದ್ದಾಳೆ.
ವಿದ್ಯಾರ್ಥಿನಿ ಪುಷ್ಪಿತ ಮಾತನಾಡಿ, "ನನಗೆ ಓದಿನಲ್ಲಿ ಆಸಕ್ತಿ ಹೆಚ್ಚು. ಯಾವುದೇ ಟ್ಯೂಶನ್‌ಗೆ ಹೋಗಿಲ್ಲ, ನನ್ನ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನೆರವು ನೀಡಿದ್ದಾರೆ. ತಾಯಿಯ ಸಹೋದ್ಯೋಗಿಗಳು ಕೂಡ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಬೇರೆ ಬೇರೆ ಪುಸ್ತಕಗಳಿಂದ ನೋಟ್ಸ್ ಬರೆದುಕೊಂಡು ಅಭ್ಯಾಸ ಮಾಡಿದ್ದೇನೆ. ಟ್ಯೂಶನ್ ಪಡೆಯಬೇಕೆಂಬ ಆಸಕ್ತಿ ಇರಲಿಲ್ಲ. ಕಾರಣ ನಾನು ಒಂದು ತರಗತಿ ತಪ್ಪಿಸದೇ ಶಾಲೆಗೆ ಹೋಗಿದ್ದು, ಶಿಕ್ಷಕರು ಹೇಳುವ ಪಾಠಗಳನ್ನು ಸರಿಯಾಗಿ ಆಲಿಸಿ ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಇದು ಹೆಚ್ಚು ನನಗರ ಸಹಾಯ ಆಗಿದೆ," ಎಂದರು.












Click it and Unblock the Notifications