SRH vs RCB: ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದ ಸ್ವಪ್ನಿಲ್ ಸಿಂಗ್ ಯಾರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ (ಏ.25) ರಂದು ನಡೆದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದು ತಿಂಗಳ ಬಳಿಕ ಇನ್ನೊಂದು ಜಯ ದಾಖಲಿಸಿ, ಗೆಲುವಿಗೆ ಟ್ರ್ಯಾಕ್‌ಗೆ ಮರಳಿದೆ.
ಆರ್‌ಸಿಬಿ ಈ ಗೆಲುವು ಹಲವು ಕಾರಣಗಳಿಗೆ ಮಹತ್ವದಾಗಿದೆ. ಮುಂದಿನ ಪಂದ್ಯಗಳಿಗೆ ಈ ಪಂದ್ಯ ದಿಕ್ಸೂಚಿಯಂತೆ ಕಾಣುತ್ತಿತ್ತು. ಅಲ್ಲದೆ ತಾವು ಎಲ್ಲಿ ಎಡವುತ್ತಿದ್ದೇವು ಎಂಬುದನ್ನು ಆರ್‌ಸಿಬಿ ಆಟಗಾರರಿಗೆ ತೋರಿಸುವ ಪಂದ್ಯ ಇದಾಗಿತ್ತು. ಟಾಸ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ, ಎಸ್‌ಆರ್‌ಎಚ್ ತಂಡಕ್ಕೆ ಖೆಡ್ಡಾ ತೋಡಲು ಪ್ಲ್ಯಾನ್ ಮಾಡಿಕೊಂಡಿತ್ತು. ಇದರಂತೆ ಮೊದಲು ಬ್ಯಾಟ್ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 206 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 171 ರನ್ ಸೇರಿಸಿ ಸೋಲನ್ನು ಕಂಡಿತು.

ಆರ್‌ಸಿಬಿ ಗೆಲುವಿನಲ್ಲಿ ಹಲವು ಅಂಶಗಳು ಬೆಳಕಿಗೆ ಬರುತ್ತಿವೆ. ಈ ಎಲ್ಲದರ ಮಧ್ಯೆಯೂ ಯುವ ಆಟಗಾರ, ಆರ್‌ಸಿಬಿ ಪರ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾದರು. ಆರ್‌ಸಿಬಿ ಪರ ಆಡುವ ಅವಕಾಶವನ್ನು ಪಡೆದ ಆಲ್‌ರೌಂಡರ್ ಅಬ್ಬರಿಸಿದರು. ಮೊದಲು ಬ್ಯಾಟ್‌ನಿಂದ ಸದ್ದು ಮಾಡಿದ್ದ ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್, ನಂತರ ಬೌಲಿಂಗ್‌ನಲ್ಲೂ ತಮ್ಮ ಮೋಡಿ ಮಾಡಿದರು.
RCB ಪರ ನಡೆದ ಈ ಪಂದ್ಯದಲ್ಲಿ ಆಲ್ ರೌಂಡರ್ ಆಟಗಾರ ಸ್ವಪ್ನಿಲ್ ಸಿಂಗ್ ಬ್ಯಾಟ್ ಮತ್ತು ಬ್ಯಾಟ್ ಎರಡರಲ್ಲೂ ಪ್ರಮುಖ ಕೊಡುಗೆ ನೀಡುವ ಮೂಲಕ ಗೆಲುವಿನಲ್ಲಿ ಮಿಂಚಿದ್ದಾರೆ. ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಿದ ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ಸ್ವಪ್ನಿಲ್ ಒಂದೇ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಇಬ್ಬರು ಪ್ರಮುಖ ಆಟಗಾರರಾದ ಐಡೆನ್ ಮಾರ್ಕ್‌ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಅಬ್ಬರಿಸಿದರು. ಈ ಮೂಲಕ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸುವಂತೆ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಸ್ವಪ್ನಿಲ್ 3 ಓವರ್ ಬೌಲ್ ಮಾಡಿ 40 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸ್ವಪ್ನಿಲ್ ಸಿಂಗ್ ಯಾರು?
ಉತ್ತರಖಂಡ ಮೂಲದ ಸ್ವಪ್ನಿಲ್ ಸಿಂಗ್ ಉತ್ತಮ ಆಟಗಾರ. ಇವರು 2008ರಲ್ಲಿ ಭಾರತದ ಅಂಡರ್ 19 ವಿಶ್ವಕಪ್ ತಂಡದ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ತಂಡದಲ್ಲಿ ಸ್ಥಾನ ಪಡೆಯುಲ್ಲಿ ವಿಫಲರಾದರು. ಇವರು 14 ವರ್ಷ 355 ದಿನಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರಿಗೆ ಬರೋಡಾ ತಂಡದ ಪರ ಆಡುವ ಅವಕಾಶ ಲಭಿಸಿತು. 56 ಪ್ರಥಮ ದರ್ಜೆ ಪಂದ್ಯಗಳನ್ನು ಜರೋಡಾ ಪರ ಆಡಿದ್ದ ಸ್ವಪ್ನಿಲ್ ನಂತರ ಉತ್ತರಾಖಂಡ್ ಪರ ಆಡಲು ತೀರ್ಮಾನಿಸಿದರು.
ಐಪಿಎಲ್ ತಂಡ ಸೇರಿದ್ದು ಹೇಗೆ?
2014-15ರಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸ್ವಪ್ನಿಲ್ ಸಿಂಗ್ ಕೇವಲ 19 ರನ್ ನೀಡಿ 6 ವಿಕೆಟ್ ಕಬಳಿಸಿ ಸುದ್ದಿಯಾದರು. ಇದಕ್ಕೂ ಮೊದಲು ಸ್ವಪ್ನಿಲ್ ಸಿಂಗ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಈ ಪ್ರದರ್ಶನದ ನಂತರ, ಅವರು ರೂ 10 ಲಕ್ಷದ ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಸೇರಿಕೊಂಡರು. ಸ್ವಪ್ನಿಲ್ ಸಿಂಗ್ ಐಪಿಎಲ್ 17 ನೇ ಋತುವಿನಲ್ಲಿ RCB ಗಾಗಿ 8 ಪಂದ್ಯಗಳನ್ನು ಕಾಯಬೇಕಾಯಿತು. ಸ್ವಪ್ನಿಲ್ ಈ ಪಂದ್ಯದಲ್ಲಿ ಕೇವಲ 2 ವಿಕೆಟ್‌ಗಳನ್ನು ಕಬಳಿಸಿದ್ದು ಮಾತ್ರವಲ್ಲದೆ, 6 ಎಸೆತಗಳಲ್ಲಿ 12 ರನ್‌ಗಳನ್ನು ಬ್ಯಾಟ್‌ನೊಂದಿಗೆ ಇನ್ನಿಂಗ್ಸ್‌ನಲ್ಲಿ ಆಡಿದರು.












Click it and Unblock the Notifications