RCB: ಚಿನ್ನಸ್ವಾಮಿಯಲ್ಲಿ ಆಡುವುದು ಕಷ್ಟ! ನಾಯಕ ಫಾಫ್‌ ಡುಪ್ಲೆಸಿಸ್ ಹೇಳಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2024ರ ಆವೃತ್ತಿಯಲ್ಲಿ ಬರೋಬ್ಬರಿ ಒಂದು ತಿಂಗಳ ಬಳಿಕ ಎರಡನೇ ಗೆಲುವು ಕಂಡಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 35 ರನ್‌ಗಳ ಗೆಲುವು ಸಾಧಿಸಿತು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ನಾಯಕ ಫಾಫ್ ಡುಪ್ಲೆಸಿಸ್, ಕಳೆದ ಕೆಲವು ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದರೂ, ಗೆಲುವು ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಅದು ನಮಗೆ ಗೆಲ್ಲುವ ವಿಶ್ವಾಸವನ್ನು ನೀಡಿತ್ತು ಎಂದು ಹೇಳಿದ್ದಾರೆ.

SRH vs RCB Faf du Plessis Calls Chinnaswamy Big Frustration After SRH Win

"ಕಳೆದ ಕೆಲವು ಪಂದ್ಯಗಳಲ್ಲಿ ನಾವು ಹೋರಾಟವನ್ನು ನೀಡಿದ್ದೇನೆ. ಬೆಂಗಳೂರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು 277 ರನ್ ಗಳಿಸಿದರೂ, ನಾವು 262 ರನ್ ಗಳಿಸಿದೆವು. ಕೆಕೆಆರ್ ವಿರುದ್ಧ ಕೂಡ ಕೇವಲ 1 ರನ್‌ಗಳಿಂದ ಸೋತೆವು. ಆದರೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪಂದ್ಯಗಳನ್ನು ಗೆಲ್ಲಬೇಕು, ತಂಡವಾಗಿ ಆಡಿದರೆ ಗೆಲುವು ಸಿಗುತ್ತದೆ. ಇಂದು ನಾವು ನೆಮ್ಮದಿಯಾಗಿ ಮಲಗಬಹುದು. ಗೆಲುವು ಮಾತ್ರವೇ ನಿಜವಾದ ಆತ್ಮವಿಶ್ವಾಸ ನೀಡುತ್ತದೆ" ಎಂದು ಹೇಳಿದರು.

ಚಿನ್ನಸ್ವಾಮಿಯಲ್ಲಿ ಆಡುವುದೇ ಸವಾಲು

ಇನ್ನು ತವರಿನಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನಾಡಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕನಿಷ್ಠ ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೂ ಇಂದು ಆರ್ ಸಿಬಿ ಪ್ಲೇ ಆಪ್ ರೇಸ್‌ನಲ್ಲಿ ಇರುತ್ತಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲುತ್ತಿರುವುದೇ ತಂಡಕ್ಕೆ ದೊಡ್ಡ ತಲೆನೋವಾಗಿದೆ.

ಫಾಫ್ ಡುಪ್ಲೆಸಿಸ್ ಈ ಬಗ್ಗೆ ಮಾತನಾಡಿ, ಐಪಿಎಲ್ 2024 ರ ಮೊದಲಾರ್ಧದಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಉತ್ತಮ ಪ್ರದರ್ಶನ ನೀಡಿದರು. ಈಗ ಉಳಿದ ಬ್ಯಾಟರ್ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು. ಆದರೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬೌಲರ್ ಗಳಿಗೆ ಸಾಕಷ್ಟು ತೊಂದರೆ ಕೊಡುತ್ತಿದೆ ಎಂದರು.

"ಸ್ಪರ್ಧೆಯು ತುಂಬಾ ಪ್ರಬಲವಾಗಿದೆ, ತಂಡಗಳು ಎಷ್ಟು ಪ್ರಬಲವಾಗಿವೆ ಎಂದರೆ ನೀವು ಶೇಕಡಾ 100 ರಷ್ಟು ಇರದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಹೆಚ್ಚು ಆಟಗಾರರು ಈಗ ರನ್ ಗಳಿಸುತ್ತಿದ್ದಾರೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ವಿರಾಟ್ ಮಾತ್ರ ರನ್ ಗಳಿಸಿದರು. ಗ್ರೀನ್ ಈಗ ರನ್ ಗಳಿಸುತ್ತಾರೆ. ಚಿನ್ನಸ್ವಾಮಿಯಲ್ಲಿ ಆಡುವುದು ನಮಗೆ ದೊಡ್ಡ ತಲೆನೋವಾಗಿದೆ, ನಾವು ಉತ್ತಮವಾಗಿ ಬೌಲಿಂಗ್ ಮಾಡಲು ಪ್ರಯತ್ನಿಸಿದ್ದೇವೆ." ಎಂದು ಹೇಳಿದರು.

ತವರಿನಲ್ಲಿ ಗೆಲುವಿಗಿಂತ ಸೋಲು ಜಾಸ್ತಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಡಿರುವ 86 ಪಂದ್ಯಗಳಲ್ಲಿ ಕೇವಲ 40 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 42 ಪಂದ್ಯಗಳಲ್ಲಿ ಸೋತಿದೆ. ಉಳಿದ 4 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಯಾಗಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಆರ್‌ಸಿಬಿ ತವರಿನಲ್ಲಿ ಗೆಲುವಿನ ಫಾರ್ಮುಲಾವನ್ನು ಸರಿಯಾಗಿ ಕಂಡುಕೊಂಡಿಲ್ಲ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಬೌಲರ್ ಗಳನ್ನು ಆಯ್ಕೆ ಮಾಡುವಲ್ಲಿ ಫ್ರಾಂಚೈಸಿ ವಿಫಲವಾಗಿರುವುದು ತಂಡದ ಈ ಪರಿಸ್ಥಿತಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+