IPL 2024: ಕೆಣಕಿದ ಬೌಲರ್‌ಗೆ ಕಣ್ಣಲ್ಲೇ ವಾರ್ನಿಂಗ್ ಕೊಟ್ಟ ಕನ್ನಡಿಗ

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ, ಕೆಕೆಆರ್ ಬೌಲರ್ ಅನುಚಿತ ವರ್ತನೆ ತೋರಿದ್ದಾರೆ.

ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್, ಕನ್ನಡಿಗ ಮಯಾಂಕ್ ಅಗರ್ವಾಲ್‌ರನ್ನು ಔಟ್ ಮಾಡಿದ ಬಳಿಕ ನಡೆದುಕೊಂಡ ರೀತಿ ಈಗ ಟೀಕೆಗೆ ಕಾರಣವಾಗಿದೆ. ಎಸ್‌ಆರ್ ಹೆಚ್ ಅಭಿಮಾನಿಗಳು ಹರ್ಷಿತ್ ರಾಣಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

SRH Vs KKR Mayank Agarwal Shoots Harshit Rana a Stern Glance After Flying Kiss Send-Off

ಕೆಕೆಆರ್ ವೇಗಿ ಹರ್ಷಿತ್ ರಾಣಾ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದ ನಂತರ ಫ್ಲೈಯಿಂಗ್ ಕಿಸ್ ಕಳುಹಿಸಿದ್ದಾರೆ, ಅಲ್ಲದೆ ಹತ್ತಿರ ಬಂದು ಮುಖವನ್ನೇ ದಿಟ್ಟಿಸಿ ನೋಡಿದ್ದಾರೆ, ಆದರೆ ಇದಕ್ಕೆಲ್ಲಾ ಜಗ್ಗದ ಮಯಾಂಕ್ ಅಗರ್ವಾಲ್ ಹರ್ಷಿತ್ ರಾಣಾರನ್ನೇ ದಿಟ್ಟಿಸಿ ನೋಡಿದ್ದಾರೆ.

ಕಣ್ಣಲ್ಲೇ ಎಚ್ಚರಿಕೆ ಕೊಟ್ಟ ಮಯಾಂಕ್

ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಮಯಾಂಕ್ ಅಗರ್ವಾಲ್ ಔಟಾಗಿದ್ದು ಆದರೆ ಬ್ಯಾಟರ್ ಆನ್-ಫೀಲ್ಡ್ ನಿರ್ಧಾರವನ್ನು ಪರಿಶೀಲಿಸಿದ ನಂತರ ಅದು ನಾಟೌಟ್ ಆಗಿ ಹೊರಹೊಮ್ಮಿತು. ಆದರೆ ಅಂತಿಮಾಗಿ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದ ನಂತರ, ಹರ್ಷಿತ್ ರಾಣಾ ನಡೆದುಕೊಂಡ ರೀತಿ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿದೆ. ಮಯಾಂಕ್ ಅಗರ್ವಾಲ್ ಕೂಡ ಇದರಿಂದ ಕೋಪಗೊಂಡಿದ್ದನ್ನು ಅವರ ಕಣ್ಣುಗಳಲ್ಲಿ ನೋಡಬಹುದಾಗಿತ್ತು.

ಅಬ್ಬರಿಸಿದ ಆಂಡ್ರೆ ರಸೆಲ್

ಐಪಿಎಲ್ 2024ರ ತನ್ನ ಮೊದಲ ಪಂದ್ಯದಲ್ಲೇ ಕೆಕೆಆರ್ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕುವ ಮೂಲಕ ಈ ಆವೃತ್ತಿಯಲ್ಲಿ 200+ ರನ್ ಗಳಿಸಿದ ಮೊದಲ ತಂಡ ಎನಿಸಿಕೊಂಡಿದೆ.

ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 40 ಎಸೆತಗಳಲ್ಲಿ 54 ರನ್ ಗಳಿಸಿದರೆ, ಕೊನೆಯ ಓವರ್ ಗಳಲ್ಲಿ ರಮಣ್ ದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್ ಅಬ್ಬರಿಸಿದರು. ರಮಣದೀಪ್ ಸಿಂಗ್ 17 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ 35 ರನ್ ಗಳಿಸಿದರು.

ಆಂಡ್ರೆ ರಸೆಲ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 25 ಎಸೆತಗಳಲ್ಲಿ 3 ಬೌಂಡರಿ 7 ಭರ್ಜರಿ ಸಿಕ್ಸರ್ ಸಹಿತ ಅಜೇಯ 64 ರನ್ ಗಳಿಸಿದರು. ರಿಂಕು ಸಿಂಗ್ 15 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+