Get Updates
Get notified of breaking news, exclusive insights, and must-see stories!

ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್ ಮಾರಕ ಬೌಲಿಂಗ್ ದಾಳಿಗೆ ಮಣಿದ ಆರ್‌ಆರ್‌

SRH VS RR IPL 2026: ಹೈದರಾಬಾದ್‌ನಲ್ಲಿ ಸೋಮವಾರ (ಏಪ್ರಿಲ್‌ 13) ನಡೆದ ಐಪಿಎಲ್‌ 2026ರ 21ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 57 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ರೋಚಕ ಹಣಾಹಣಿಯಲ್ಲಿ ವೇಗಿಗಳಾದ ಸಾಕಿಬ್ ಹುಸೇನ್ ಮತ್ತು ಪ್ರಫುಲ್ ಹಿಂಗೆ ತಲಾ 4 ವಿಕೆಟ್ ಪಡೆಯುವ ಮೂಲಕ ಎಸ್‌ಆರ್‌ಎಚ್‌ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಸನ್‌ ರೈಸರ್ಸ್‌ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 216 ರನ್‌ಗಳನ್ನು ಕಲೆಹಾಕಿತು. ಎಸ್‌ಆರ್‌ಎಚ್‌ ನೀಡಿದ 217 ರನ್‌ಗಳನ್ನು ಗುರಿ ತಲುಪುವಲ್ಲಿ ವಿಫಲವಾಗುವ ಮೂಲಕ ಆರ್‌ಆರ್ ಹೀನಾಯ ಸೋಲು ಕಂಡಿತು.

SRH Beat Rajasthan Royals by 57 Runs in IPL 2026 Ishan Kishan 91 Saqib amp amp Hinge Take 4 Wickets Each

ಪಾದಾರ್ಪಣೆ ಪಂದ್ಯದಲ್ಲೇ ವೇಗಿಗಳ ಅಬ್ಬರ

ಪ್ರಫುಲ್ ಹಿಂಗೆ ಕೇವಲ 11 ಎಸೆತಗಳ ಅಂತರದಲ್ಲಿ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಸೇರಿದಂತೆ ನಾಲ್ಕು ಪ್ರಮುಖ ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನದ ಅಗ್ರ ಕ್ರಮಾಂಕವನ್ನು ಧೂಳೀಪಟ ಮಾಡಿದರು. ನಂತರ ಸಾಕಿಬ್ ಹುಸೇನ್ ರಾಜಸ್ಥಾನದ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಆರ್‌ಆರ್ ತಂಡಕ್ಕೆ ಈ ಸೀಸನ್‌ನ ಮೊದಲ ಸೋಲಿನ ರುಚಿ ತೋರಿಸಿದರು.

ರಾಜಸ್ಥಾನ್‌ ರಾಯಲ್ಸ್‌ ಹೋರಾಟ ವ್ಯರ್ಥ

217 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 159 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಡೊನೊವನ್ ಫೆರೇರಾ ಏಕಾಂಗಿ ಹೋರಾಟ ನಡೆಸಿ 44 ಎಸೆತಗಳಲ್ಲಿ 69 ರನ್ ರನ್‌ ಗಳಿಸಿದರು. ಆದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜಾ ಅವರು 45 ರನ್‌ಗಳನ್ನು ಗಳಿಸಿದರು. ಉಳಿದವರು ಬೇಗನೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ನಾಯಕ ಇಶಾನ್ ಕಿಶನ್ ಅವರ ಸ್ಫೋಟಕ 91 ರನ್‌ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಭರ್ಜರಿ ಗೆಲುವಿನೊಂದಿಗೆ ಹೈದರಾಬಾದ್ ತಂಡ ಟೂರ್ನಿಯಲ್ಲಿ ಭರ್ಜರಿ ಪುನರಾಗಮನ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+