Amruthadhare Serial: ಜೈದೇವ್ ಅಟ್ಟಹಾಸಕ್ಕೆ ಬ್ರೇಕ್ ಬೇಕು: ಗೌತಮ್ ದಿವಾನ್‌ಗೆ ಆಕ್ಷನ್ ಕೊಡಿ ಎಂದ ವೀಕ್ಷಕರು
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಕೇಡಿ ಜೈದೇವ್ ಅಟ್ಟಹಾಸ ಹಾಗೂ ದುರಾಸೆ ಮುಂದುವರಿದಿದೆ. ಇದೀಗ ಕೇಡಿ ಜೈದೇವ್ ದುರಾಸೆ ನೋಡಿ ಶಕುಂತಲಾ ಕಂಗಾಲಾಗಿದ್ದಾರೆ. ಆದರೆ ಸೀರಿಯಲ್‌ನ ವೀಕ್ಷಕರು ಗೌತಮ್ ದಿವಾನ್ ಪಾತ್ರಕ್ಕೆ ಪ್ರಾಮುಖ್ಯತೆ ಕೊಡದೆ ಇರುವ ಬಗ್ಗೆ ಹಾಗೂ ಬರೀ ಡೈಲಾಗ್‌ಗೆ ಸೀಮಿತ ಮಾಡಬೇಡಿ, ಸ್ವಲ್ಪ ಆಕ್ಸನ್ ಸಹ ಕೊಡಿ ಅಂತ ಒತ್ತಾಯಿಸುತ್ತಿದ್ದಾರೆ. ಅಮೃತಧಾರೆ ಸೀರಿಯಲ್‌ನ ಇತ್ತೀಚಿನ ಹೈಲೆಟ್ಸ್ ಇಲ್ಲಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಅಜ್ಜಿ ಸರ್ವಮಂಗಳಾ ಅವರು ಎಸ್ಟೇಟ್‌ನಿಂದ ಎಲ್ಲರೂ ವಾಪಸ್ ಹೋಗುವ ವಿಚಾರಕ್ಕೆ ಬೇಸರಗೊಂಡಿದ್ದಾರೆ. ಆದರೆ ಅಜ್ಜಿ ಒಬ್ಬರೇ ಇರುವುದಿಲ್ಲ ಅಂತ ಆನಂದ್ ಅವರು ಹೇಳಿದ್ದಾರೆ. ನಾಳೆ ನೀವೆಲ್ಲರೂ ಹಿಂದಿರುಗುತ್ತೀರಿ ಮನೆಯಲ್ಲೆ ಬಣ ಬಣ ಅನ್ನುತ್ತದೆ ಎನ್ನುವಾಗ ಆನಂದ್, ಅಜ್ಜಿ ಯಾಕೆ ಬೇಜಾರ್ ಮಾಡಿಕೊಳ್ತಿದ್ದೀರ, ನಿಮಗೆ ಬೇಸರವಾಗಬಾರದು ಅಂತಲೇ ನಿಮ್ಮ ಮುದ್ದಿನ ಮೊಮ್ಮಗ ಸುಧಾ ಹಾಗೂ ಸೃಜನ್ ಅವರನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಆಗ ಬಣ ಬಣ ಅಂತ ಇರೋದಿಲ್ಲ.. ಗಿಲ ಗಿಲ ಅಂತ ಇರುತ್ತೆ ಅಂತ ಕಾಮಿಡಿ ಮಾಡಿದ್ದಾರೆ.

Amruthadhare Serial: ಲೋಗೋ ಚರ್ಚೆ
ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ಹಾಗೂ ಜೈದೇವ್ ದಿವಾನ್‌ನ ನಡುವೆ ಕಂಪನಿಯ ಲೋಗೋ ವಿಚಾರಕ್ಕೆ ಜಿದ್ದಾಜಿದ್ದಿ ಪ್ರಾರಂಭವಾಗಿದೆ. ಜೈದೇವ್ ದಿವಾನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಜೈದೇವ್‌ಗೆ, ಗೌತಮ್ ದಿವಾನ್ ಅವರು ಇದೇ ಲೋಗೋವನ್ನು ಇಟ್ಟುಕೊಂಡು ಹೊಸ ಕಂಪನಿಯನ್ನು ಶುರು ಮಾಡಿರುವುದರಿಂದ ಈ ಲೋಗೋ ನಿಮಗೆ ಸೇರಬೇಕು ಅಂತ ಹೇಳುತ್ತಿರುವುದಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದಿವಾನ್ ಫ್ಯಾಮಿಲಿಯಲ್ಲಿ ಗೌತಮ್ ದಿವಾನ್ ಒಬ್ಬನೇನಾ ಇರೋದು ಅಂತ ಪ್ರಶ್ನೆ ಮಾಡಿದ್ದಾನೆ. ಈ ಒಂದು ಫ್ಯಾಮಿಲಿಯಲ್ಲಿ ಅವರು ಒಂದು ಭಾಗ ಮಾತ್ರ ಎಲ್ಲವೂ ಅಲ್ಲ ಅಂತ ಹೇಳಿದ್ದಾನೆ.
ಇಡೀ ಕುಟುಂಬವೇ ಅವರ ಮೇಲೆ ಎಂದಿಗೂ ಅವಲಂಬನೆ ಆಗಿಲ್ಲ. ನಮ್ಮ ತಂದೆ ಅವರು ಕಾಲವಾದ ನಂತರ ಗೌತಮ್ ಅವರು ಪ್ರಾಪರ್ಟಿ ಹಾಗೂ ಬ್ಯುಸಿನೆಸ್ ಅನ್ನು ಒಬ್ಬ ಕೇರ್ ಟೇಕರ್ ಆಗಿದ್ದರು ಅಷ್ಟೇ. ಯಾವುದಕ್ಕೂ ಅವರು ಮಾಲೀಕ ಅಲ್ಲ ಅಂತ ಗೌತಮ್ ರಿಪ್ಲೈ ಕೊಟ್ಟಿದ್ದಾನೆ. ಇಷ್ಟೆಲ್ಲ ಮಾಡಿದರೂ ಅವನಿಗೆ ಸಮಾಧಾನ ಇಲ್ಲ ನೋಡು ಅಂತ ಅಜ್ಜಿ ಹೇಳಿದ್ದಾರೆ. ಆ ಲೋಗೋ ನನಗೆ ಸೇರಿದ್ದು ಅಂತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾನೆ.
ಲೋಗೋ ವಿಚಾರಕ್ಕೆ ಶುರುವಾಯ್ತು ಜಗಳ
ಇನ್ನು ಲೋಗೋ ವಿಚಾರಕ್ಕೆ ಗೌತಮ್ ದಿವಾನ್ ಹಾಗೂ ಜೈದೇವ್ ನಡುವೆ ಕಿರಿಕ್ ಶುರುವಾಗಿದೆ. ಗೌತಮ್ ದಿವಾನ್ ಹೊಸ ಕಂಪನಿಯ ಮುಂದೆ, ಪ್ರತಿಭಟನೆ ಶುರುವಾಗಿದೆ. ಇದರ ಹಿಂದೆ ಇರುವುದು ಜೈದೇವ್ ಅಂತ ತೋರಿಸಲಾಗಿದೆ. ಪ್ರತಿಭಟನೆಯಲ್ಲಿ ಗೌತಮ್ ಗೆಳೆಯ ಆನಂದ್ ಮೇಲೆ ಪ್ರತಿಭಟನಾಕಾರನೊಬ್ಬ ಹಲ್ಲೆ ಮಾಡಿರುವುದು ಇದೆ. ಗೌತಮ್ ದಿವಾನ್ ಆಫೀಸ್‌ಗೆ ಭೇಟಿ ನೀಡಿದ್ದು, ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುತ್ತಿದ್ದವನ್ನು ಹಿಡಿದು, ಏನೋ ಬೇಕಂತಲೇ ಗಲಾಟೆ ಮಾಡೋಕೆ ಬಂದಿದ್ಯಾ ಅಂತ ಪ್ರಶ್ನೆ ಮಾಡಿದ್ದಾರೆ. ಪೊಲೀಸರಿಗೆ ಹಿಡಿದುಕೊಡುವುದಾಗಿ ಎಚ್ಚರಿಸಿದ್ದಾರೆ.
ಗೌತಮ್‌ಗೆ ಆಕ್ಸನ್ ಕೊಡಿ
ಅಮೃತಧಾರೆ ಸೀರಿಯಲ್‌ನಲ್ಲಿ ಮುಖ್ಯಪಾತ್ರಧಾರಿ ಗೌತಮ್ ದಿವಾನ್ ಅವರದ್ದು ಕೇವಲ ಡೈಲಾಗ್ ಮಾತ್ರ ಇದೆ. ಸ್ವಲ್ಪ ಆಕ್ಸನ್ ಸಹ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.












Click it and Unblock the Notifications