ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಒಲಿದ ಮೂರು ಮರೆಯಲಾಗದ ಗೌರವಗಳು; ಕಿಂಗ್ ಕೊಹ್ಲಿ ಸಂದೇಶ ಭಾರೀ ವೈರಲ್
Vaibhav Suryavanshi: ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ 15 ವರ್ಷದ ವೈಭವ್ ಅವರು ಐಪಿಎಲ್ 2026ರ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಇದೇ ವೇಳೆ ಅವರು ಮೂರು ದೊಡ್ಡ ಗೌರವಗಳಿಗೆ ಪಾತ್ರರಾಗಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ ಯುವ ಪ್ರತಿಭೆಗಳ ಅಬ್ಬರ ಮುಂದುವರಿದಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ವೈಭವ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಈ ಅಮೋಘ ಪ್ರದರ್ಶನದ ಮೂಲಕ ಅವರು ಒಂದೇ ದಿನ ಮೂರು ದೊಡ್ಡ ಗೌರವಗಳಿಗೆ ಪಾತ್ರರಾಗಿದ್ದು, ಇದನ್ನು ಅಭಿಮಾನಿಗಳು 'ತ್ರಿವೇಣಿ ಸಂಗಮ' ಎಂದು ಬಣ್ಣಿಸುತ್ತಿದ್ದಾರೆ.

78 ರನ್ ಸಿಡಿಸಿದ ವೈಭವ್ ಸೂರ್ಯವಂಶಿ
ಗುವಾಹಟಿಯಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್, ಕೇವಲ 26 ಎಸೆತಗಳಲ್ಲಿ ಬರೊಬ್ಬರಿ 78 ರನ್ ಚಚ್ಚಿದರು. ಈ ಬಿರುಗಾಳಿಯ ಇನ್ನಿಂಗ್ಸ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಬೆಂಗಳೂರು ವಿರುದ್ಧ ಭರ್ಜರಿ ಜಯ ದಾಖಲಿಸಿತು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೈಭವ್ ಅವರಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿ ಒಲಿಯಿತು.
ವೈಭವ್ ಒಲಿದ ಮೂರು ದೊಡ್ಡ ಗೌರವಗಳು
* ಪಂದ್ಯಶ್ರೇಷ್ಠ ಪ್ರಶಸ್ತಿ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಈ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
* ಆರೆಂಜ್ ಕ್ಯಾಪ್: ಈ ಭರ್ಜರಿ ಇನ್ನಿಂಗ್ಸ್ ನೆರವಿನಿಂದ ವೈಭವ್ ಅವರು ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಅವರು ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
* ಕೊಹ್ಲಿ ಅವರಿಂದ ವಿಶೇಷ ಸಂದೇಶ: ಎಲ್ಲದಕ್ಕಿಂತ ಮುಖ್ಯವಾಗಿ, ಪಂದ್ಯದ ನಂತರ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಖುದ್ದಾಗಿ ಬಂದು ವೈಭವ್ ಅವರ ಟೋಪಿ ಮೇಲೆ "Dear Vaibhav, Well Done" ಎಂದು ಬರೆದು ಆಟೋಗ್ರಾಫ್ ನೀಡುವ ಮೂಲಕ ಯುವ ಆಟಗಾರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಂದೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ, ಆರೆಂಜ್ ಕ್ಯಾಪ್ ಮತ್ತು ವಿರಾಟ್ ಕೊಹ್ಲಿಯವರಿಂದ ಮೆಚ್ಚುಗೆ ಪಡೆದ ವೈಭವ್ ಪಾಲಿಗೆ ಈ ದಿನ ನಿಜಕ್ಕೂ 'ತ್ರಿವೇಣಿ ಸಂಗಮ'ದಂತೆ ಸ್ಮರಣೀಯವಾಯಿತು. ಇನ್ನೂ ಈ ಉದಯೋನ್ಮುಖ ಪ್ರತಿಭೆಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ವೈಭವ್‌ಗೆ ಮತ್ತಷ್ಟು ಸ್ಪೂರ್ತಿ ತುಂಬಿದ ಕೊಹ್ಲಿ ಸಹಿ
ಪಂದ್ಯ ಮುಗಿದ ನಂತರ ಮೈದಾನದಲ್ಲಿ ಒಂದು ಅಪರೂಪದ ಮತ್ತು ಮನಮುಟ್ಟುವ ದೃಶ್ಯ ಕಂಡುಬಂತು. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಮತ್ತು ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರು ಯುವ ಆಟಗಾರನ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಖುದ್ದಾಗಿ ವೈಭವ್ ಬಳಿ ಬಂದ ಕೊಹ್ಲಿ, ಅವರ ರಾಜಸ್ಥಾನ್ ರಾಯಲ್ಸ್ ಟೋಪಿ ಮೇಲೆ "Dear Vaibhav, Well Done" ಎಂದು ಬರೆದು ತಮ್ಮ ಸಹಿ ಹಾಕುವ ಮೂಲಕ ಅಚ್ಚರಿ ನೀಡಿದರು. ಒಬ್ಬ ದಿಗ್ಗಜ ಆಟಗಾರನಿಂದ ಸಿಕ್ಕ ಈ ಮೆಚ್ಚುಗೆಯ ಮಾತುಗಳು ವೈಭವ್ ಪಾಲಿಗೆ ಎಲ್ಲಾ ಪ್ರಶಸ್ತಿಗಳಿಂದ ಮಿಗಿಲಾದ ಗೌರವವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ಪಂದ್ಯವು ವೈಭವ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ, ಆರೆಂಜ್ ಕ್ಯಾಪ್ ಮತ್ತು ವಿರಾಟ್ ಕೊಹ್ಲಿಯವರಿಂದ ಸಿಕ್ಕ ಪ್ರಶಂಸೆ ಈ ಮೂರೂ ಅಂಶಗಳು ಯುವ ಆಟಗಾರನಿಗೆ ಮುಂದಿನ ಪಂದ್ಯಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿಯಾಗಲಿವೆ ಎನ್ನುವ ಮಾತಗಳು ಕೇಳಿಬರುತ್ತುವೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈಭವ್‌ಗೆ ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.












Click it and Unblock the Notifications