ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್‌ಶೇಕ್ ವಿಡಿಯೋ
RCB IPL 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ರೋಚಕ ಪಂದ್ಯಕ್ಕೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅವರ ಉಪಸ್ಥಿತಿ ವಿಶೇಷ ಮೆರುಗು ನೀಡಿತು. ಮತ್ತೊಂದೆಡೆ ಅನನ್ಯಾ ಬಿರ್ಲಾ ಅವರು ಅನುಷ್ಕಾ ಅವರ ಸಂಭ್ರದಲ್ಲಿ ಭಾಗಿಯಾಗಿ ಗಮನ ಸೆಳೆದರು.
ಪಂದ್ಯದ ವೇಳೆ ಅನುಷ್ಕಾ ಶರ್ಮಾ ಅವರು ಅತ್ಯಂತ ಸರಳ ಹಾಗೂ ಆಕರ್ಷಕ ಉಡುಪಿನಲ್ಲಿ ಕಾಣಿಸಿಕೊಂಡರು. ಅವರು ಕಪ್ಪು ಬಣ್ಣದ ಟಿ-ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಅವರ ಈ ಕ್ಲಾಸಿಕ್ ಲುಕ್‌ಗೆ ಪೂರಕವಾಗಿ ಕೈಯಲ್ಲೊಂದು ಐಷಾರಾಮಿ ಕೈಗಡಿಯಾರ ಗಮನ ಸೆಳೆಯಿತು. ಆರ್‌ಸಿಬಿಯನ್ನು ಬೆಂಬಲಿಸಲು ಬಂದಿದ್ದ ಅನುಷ್ಕಾ ಅವರ ಈ ವಿಶಿಷ್ಟ ಶೈಲಿ ಅಭಿಮಾನಿಗಳ ಮನ ಗೆದ್ದಿದೆ.

ಕೊಹ್ಲಿಗೆ ಪತ್ನಿ ಅನುಷ್ಕಾ ಸಾಥ್
ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ ತಕ್ಷಣವೇ ಅನುಷ್ಕಾ ಅವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು. ಇನ್ನೂ ಪತಿಯ ಸ್ಫೋಟಕ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡುತ್ತಿದ್ದ ಅನುಷ್ಕಾ ಅವರ ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಸಂಭ್ರಮಿಸಿದ ಅನುಷ್ಕಾ-ಅನನ್ಯಾ ಬಿರ್ಲಾ
ಮೈದಾನದಲ್ಲಿ ಅನುಷ್ಕಾ ಶರ್ಮಾ ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಮಾಲೀಕತ್ವದ ಪ್ರಮುಖ ಸದಸ್ಯೆಯಾದ ಅನನ್ಯಾ ಬಿರ್ಲಾ ಮತ್ತು ಅನುಷ್ಕಾ ಶರ್ಮಾ ನಡುವಿನ ಆತ್ಮೀಯ ಕ್ಷಣಗಳು ಭಾರಿ ಸದ್ದು ಮಾಡುತ್ತಿವೆ. ಇನ್ನೂ ಅನನ್ಯಾ ಬಿರ್ಲಾ ಅವರು ಅನುಷ್ಕಾ ಬಳಿ ಬಂದು ಹ್ಯಾಂಡ್‌ಶೇಖ್ ಮಾಡಿ ಅಭಿನಂದಿಸಿದ್ದು, ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳಿಂದ ರೋಚಕ ಜಯ ಸಾಧಿಸಿತು. ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಮೈದಾನದಲ್ಲಿ ಕೊಹ್ಲಿ ಅವರ ಆಟ ಮತ್ತು ಗ್ಯಾಲರಿಯಲ್ಲಿ ಅನುಷ್ಕಾ ಅವರ ಸಂಭ್ರಮ ಪಂದ್ಯದ ಹೈಲೈಟ್ ಆಗಿ ಮೂಡಿಬಂದವು.
Anushka Sharma meeting Ananya Birla. pic.twitter.com/3dtDQoptY7
— Mufaddal Vohra (@mufaddal_vohra) April 12, 2026
ಗಮನ ಸೆಳೆದ ಕೊಹ್ಲಿ ದುಬಾರಿ ವಾಚ್
ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ವಾಚ್ ಪ್ರಿಯರ ಕಣ್ಣು ಬಿದ್ದಿದ್ದು ಕೊಹ್ಲಿ ಧರಿಸಿದ್ದ ಅತ್ಯಂತ ಅಪರೂಪದ ಕೈಗಡಿಯಾರದ ಮೇಲೆ. ವಿರಾಟ್ ಕೊಹ್ಲಿ ತಮ್ಮ ಕೈಗೆ 'ಪಾಟೆಕ್ ಫಿಲಿಪ್ಪೆ ಅಕ್ವಾನಾಟ್ 5164ಜಿ' (Patek Philippe Aquanaut 5164G) ಮಾಡೆಲ್‌ನ ವಾಚ್ ಕಟ್ಟಿದ್ದರು. ಈ ಐಷಾರಾಮಿ ವಾಚ್‌ನ ಅಧಿಕೃತ ಬೆಲೆ ಅಂದಾಜು 1.4 ಕೋಟಿ ರೂಪಾಯಿ. ಕ್ರಿಕೆಟ್ ಮೈದಾನದ ಹೊರಗೂ ಕೊಹ್ಲಿ ಅವರ ಈ 'ರಾಯಲ್' ಸ್ಟೈಲ್ ಈಗ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications