Vaibhav Suryavanshi: ನನ್ನ ಕನಸು ಕೊನೆಗೂ ನನಸಾಯಿತು; ವಿರಾಟ್ ಕೊಹ್ಲಿಗೆ ವಿಶೇಷ ಧನ್ಯವಾದ ಹೇಳಿದ ವೈಭವ್ ಸೂರ್ಯವಂಶಿ
Virat Kohli: ಗುವಾಹಟಿಯಲ್ಲಿ ಶುಕ್ರವಾರ (ಏಪ್ರಿಲ್ 10) ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಆರ್‌ಆರ್ ಗೆಲುವಿಗೆ ಪ್ರಮುಖ ಕಾರಣನಾದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ ಅವರು ತಮ್ಮ ಟೋಪಿ ಮೆಲೆ ಸಹಿ ಹಾಕಿದ ಬಗ್ಗೆ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡರೂ ಸಹ ಬೇಸರ ಮಾಡಿಕೊಳ್ಳದೆ, ಪಂದ್ಯದ ನಂತರ ವಿರಾಟ್ ಕೊಹ್ಲಿ ತಮ್ಮದೇ ತಂಡದ ಬೌಲರ್‌ಗಳ ವಿರುದ್ಧ ದಂಡಯಾತ್ರೆ ನಡೆಸಿದ ವೈಭವ್ ಸೂರ್ಯವಂಶಿ ಅವರಿಗೆ ಸ್ಫೂರ್ತಿದಾಯಕ ಸಂದೇಶ ನೀಡಿ ಗಮನ ಸೆಳೆದರು. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವೈಭವ್ ಸೂರ್ಯವಂಶಿಗೆ ಕೊಹ್ಲಿ ವಿಶೇಷ ಸಂದೇಶ
ನಿನ್ನೆ ಪಂದ್ಯದ ಅತ್ಯಂತ ಸ್ಮರಣೀಯ ಕ್ಷಣವೆಂದರೆ, ಕೊಹ್ಲಿ ಅವರು ಸಮಷ್ಟಿಪುರ ಮೂಲದ ಬ್ಯಾಟರ್ ವೈಭವ್ ಸೂರ್ಯವಂಶಿ ಅವರೊಂದಿಗೆ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ. ಸಂಭಾಷಣೆಯ ಕೊನೆಯಲ್ಲಿ ಆರ್‌ಬಿಯ ಸ್ಟಾರ್ ಕೊಹ್ಲಿ ಅವರು ವೈಭವ್ ಅವರ ರಾಜಸ್ಥಾನ್ ರಾಯಲ್ಸ್ ಟೋಪಿ ಮೇಲೆ ನಾಲ್ಕು ಪದಗಳಲ್ಲಿ ಸ್ಫೂರ್ತಿದಾಯಕ ಹಸ್ತಾಕ್ಷರ ಹಾಕಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಆರ್‌ಸಿಬಿ ಬೌಲರ್‌ಗಳ ಮೇಲೆ ವೈಭವ್ ದಂಡಯಾತ್ರೆ
15 ವರ್ಷದ ಈ ಯುವ ಆಟಗಾರ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಆರ್‌ಸಿಬಿ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಎದುರಾಳಿ ಸ್ಟಾರ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಆರೆಂಜ್ ಕ್ಯಾಪ್ ಪಡೆದ ವೈಭವ್
ಈ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸಿದ ವೈಭವ್ 300ರ ಸ್ಫೋಟಕ ಸ್ಟ್ರೈಕ್ ರೇಟ್ ಹೊಂದಿದ್ದರು. ಒಟ್ಟು ನಾಲ್ಕು ಪಂದ್ಯಗಳಲ್ಲಿ 200 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಐಪಿಎಲ್ ಇತಿಹಾಸದಲ್ಲಿ 'ಆರೆಂಜ್ ಕ್ಯಾಪ್' ಧರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕುತೂಹಲಕಾರಿ ವಿಷಯವೆಂದರೆ, ಯುವ ಆಟಗಾರನ ರನ್ ಬೇಟೆಗೆ ಅಂತಿಮವಾಗಿ ವಿರಾಟ್ ಕೊಹ್ಲಿ ಅವರೇ ಬ್ರೇಕ್ ಹಾಕಿದರು. ಕೃನಾಲ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿ ಲಾಂಗ್-ಆನ್‌ನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿ ಅವರು ವೈಭವ್ ಅವರನ್ನು ಔಟ್ ಮಾಡಿದರು. ಇನ್ನೂ ಯಾವಾಗಲೂ ವಿರಾಟ್ ಕೊಹ್ಲಿ ಅವರನ್ನೇ ತಮ್ಮ ಆರಾಧ್ಯ ದೈವ ಎಂದು ಹೇಳಿಕೊಳ್ಳುವ ವೈಭವ್ ಸೂರ್ಯವಂಶಿ ಅವರಿಗೆ, ಕೊಹ್ಲಿ ಅವರಿಂದ ಹಸ್ತಾಕ್ಷರ ಸಿಕ್ಕಿದೆ. ಇದು ವೈಭವ್‌ಗೆ ಮರೆಯಲಾರದ ಕ್ಷಣವಾಗಿದ್ದು, ಈ ಸಂತಸ ಅವರ ಮುಖದಲ್ಲಿ ಕಂಡುಬಂದಿತು.
ವಿರಾಟ್ ಕೊಹ್ಲಿ ಅವರು ತನ್ನ ಟೋಪಿ ಮೇಲೆ ಹಸ್ತಾಕ್ಷರ ಹಾಕಿದ ಬಗ್ಗೆ ಮಾತನಾಡಿದ ವೈಭವರ್, "ವಿರಾಟ್ ಭಯ್ಯಾ ಅವರು ನನ್ನ ಟೋಪಿಯ ಮೇಲೆ ಸಹಿ ಹಾಕಿ ನನ್ನನ್ನು ಪ್ರೋತ್ಸಾಹಿಸಿದ್ದು ನನ್ನ ಕನಸು ನನಸಾದ ಕ್ಷಣವಾಗಿದೆ ಎಂದು ಹೇಳಿದರು. ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದರು ಹೇಳಿದರು. ವಿರಾಟ್ ಕೊಹ್ಲಿಯವರ ಈ ನಡೆಯು ಕ್ರೀಡಾ ಮನೋಭಾವವವನ್ನು ಎತ್ತಿತೋರಿಸಿದೆ.












Click it and Unblock the Notifications