ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ನಿವೃತ್ತಿ ಸುಳಿವು ನೀಡಿದ ಸೌರವ್ ಗಂಗೂಲಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈಗ ಅಮೆರಿಕ ತಲುಪಿದ್ದು, ಅಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ಇತ್ತ ಟೀಮ್ ಇಂಡಿಯಾದ ಪರ ಆಡಿ ಮಿಂಚಿದ ಆಟಗಾರನಿಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಕೊನೆಯ ಪಂದ್ಯವನ್ನು ಆಡುವಂತೆ ಸಲಹೆ ನೀಡಿದ್ದಾರೆ.
ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ಅವಿಭಾಜ್ಯ ಅಂಗವೆಂದೆ ಕರೆಸಿಕೊಳ್ಳುತ್ತಿದ್ದ, ಈ ಸ್ಟಾರ್ ಆಟಗಾರ ಈಗ ತಂಡದಿಂದ ಹೊರ ನಡೆದಿದ್ದಾರೆ. ಇನ್ನು ಅವರು ಟೀಮ್ ಇಂಡಿಯಾದಲ್ಲಿ ಕಮ್ ಬ್ಯಾಕ್ ಮಾಡುವುದು ತುಸು ಕಷ್ಟ. ಟೀಮ್ ಇಂಡಿಯಾದಲ್ಲಿ ಯುವ ಆಟಗಾರರ ದಂಡೇ ಅವಕಾಶಗಳನ್ನು ಪಡೆದು ಮಿಂಚಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನುಭವಿ ವಿಕೆಟ್ ಕೀಪರ್‌ಗೆ ಸ್ಥಾನ ಲಭಿಸುವುದು ದುಸ್ತರ. ಭಾರತದ ಟೆಸ್ಟ್ ಸ್ಪೆಷಲಿಸ್ಟ್ ವೃದ್ಧಿಮಾನ್ ಸಹಾ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.

ಗಂಗೂಲಿ ಹೇಳಿದ್ದೇನು?
ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಯಂತ್ ಡೇ ನೀಡಿರುವ ಹೇಳಿಕೆಯ ಪ್ರಕಾರ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಸಹಾ ಅವರ ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ತಮ್ಮ ಕೊನೆಯ ಪಂದ್ಯವನ್ನು ಆಡಲು ವಿನಂತಿಸಿದ್ದಾರೆ ಎಂದು ಹೇಳಿದ್ದಾರೆ. ಸಾಹಾ ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಸಹಾ 9 ಪಂದ್ಯಗಳಲ್ಲಿ 15.11 ಸರಾಸರಿ ಮತ್ತು 118.26 ಸ್ಟ್ರೈಕ್ ರೇಟ್‌ನಲ್ಲಿ 136 ರನ್ ಗಳಿಸಿದ್ದಾರೆ.
ಪಿಟಿಐ ಸುದ್ದಿ ಪ್ರಕಾರ, ಕೋಲ್ಕತ್ತಾದಲ್ಲಿ ಸಹಾ ಮತ್ತು ಗಂಗೂಲಿ ನಡುವೆ ಸಭೆ ನಡೆದಿದೆ. ಸಹಾ ಬಂಗಾಳದ ಪರವಾಗಿ ಕನಿಷ್ಠ ಒಂದು ಕೊನೆಯ ಪಂದ್ಯವನ್ನಾದರೂ ಆಡಬೇಕು ಮತ್ತು ನಂತರ ನಿವೃತ್ತಿಯಾಗಬೇಕೆಂದು ಗಂಗೂಲಿ ಬಯಸುತ್ತಾರೆ. ಆದರೆ, ಅವರು ಇನ್ನೂ ತ್ರಿಪುರಾದಿಂದ ಎನ್‌ಒಸಿ ಪಡೆದಿಲ್ಲ.

ಈ ಮೊದಲೇ ಕೇಳಲಾಗಿತ್ತು ನಿವೃತ್ತಿ?
ದಕ್ಷಿಣ ಆಫ್ರಿಕಾ ಸರಣಿಯ ನಂತರ ರಾಹುಲ್ ದ್ರಾವಿಡ್ ನನ್ನನ್ನು ಕೋಣೆಗೆ ಕರೆದು ನಿವೃತ್ತಿಯಾಗುವ ಸುಳಿವು ನೀಡಿದ್ದರು ಎಂದು ಸಹಾ ಈ ಹಿಂದೆ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ಪರೋಕ್ಷವಾಗಿ ನಿವೃತ್ತಿಯಾಗುವಂತೆ ಕೇಳಿಕೊಂಡಿದ್ದರು. ನೀವು ನಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ ಎಂದೂ ಅವರು ಹೇಳಿದ್ದರು. ಈಗ ನಾವು ಯುವ ವಿಕೆಟ್ ಕೀಪರ್ ಅನ್ನು ಸಿದ್ಧಪಡಿಸಲು ಬಯಸುತ್ತೇವೆ ಎಂದು ತಿಳಿಸಿದ್ದರು.
ವೃತ್ತಿ ಜೀವನ
ವೃದ್ಧಿಮನ್ ಸಹಾ ಒಬ್ಬ ನುರಿತ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್. ತಂಡಕ್ಕೆ ಅಗತ್ಯ ವಿದ್ದಾಗಲೆಲ್ಲಾ ರನ್ ಕಲೆ ಹಾಕಿ ನೆರವಾಗುವ ಪ್ಲೇಯರ್. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಹಾ, 56 ಇನಿಂಗ್ಸ್‌ಗಳಲ್ಲಿ 1353 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇನ್ನು 9 ಏಕದಿನ ಪಂದ್ಯಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಬಳಿಕ ಇವರನ್ನು ತಂಡದಿಂದ ಕೈ ಬಿಡುತ್ತಲೇ ಬರಲಾಗುತ್ತಿದೆ.
ಸಹಾ ಈ ಹಿಂದೆ ಬಂಗಾಳ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ 2022 ರಲ್ಲಿ ತ್ರಿಪುರಾ ತಂಡದ ಆಟಗಾರ ಕಮ್ ಮೆಂಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಾಹಾಗೆ ಸದ್ಯ 39 ವರ್ಷ. ಸಹಾ ಬಂಗಾಳ ಪರ ಕೊನೆಯ ರಣಜಿ ಪಂದ್ಯವನ್ನು ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications