Smriti Mandhana: ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ, ಬೌಂಡರಿ, ಸಿಕ್ಸರ್‌ಗಳ ಬೋರ್ಗರೆತ- ಸ್ಮೃತಿ ಮಂಧಾನ ಹೊಸ ದಾಖಲೆ
Smriti Mandhana: ರಾಜಕೋಟ್‌ನ ನಿರಂಜನ್ ಶಾ ಮೈದಾನದಲ್ಲಿ ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅವರು ಅತೀ ವೇಗದ ಶತಕ ಗಳಿಸಿರುವ ಮಹಿಳಾ ಕ್ರಿಕೆಟರ್ ಆಗಿ ದಾಖಲೆ ಬರೆದಿದ್ದಾರೆ. ಕೇವಲ 70 ಎಸೆತಗಳಲ್ಲಿ ಶತಕ ಸಿಡಿಸಿದ ಹೆಮ್ಮೆ ಅವರದ್ದಾಗಿದೆ. ಇದು ಏಕದಿನ ಪಂದ್ಯಗಳಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯೊಬ್ಬರ ಅತೀ ವೇಗದ ಶತಕವಾಗಿದೆ.
ಈ ಹಿಂದೆ ಹರ್ಮನ್‌ಪ್ರೀತ್ ಕೌರ್ ಅವರು 87 ಎಸೆತಗಳಲ್ಲಿ ಶತಕ ಭಾರಿಸುವ ಮೂಲಕ ದಾಖಲೆ ಬರೆದಿದ್ದರು. ಈಗ ಸ್ಮೃತಿ ಮಂಧಾನ ಅವರು ಕೇವಲ 70 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಅದ್ಭುತ ಇನ್ನಿಂಗ್ಸ್ ಮೂಲಕ ಮಂಧಾನ ಅವರ ಪ್ರತಿಭೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಭಾರತ ಮಹಿಳಾ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳುತ್ತಿದ್ದಾರೆ. ಈ ಶತಕದೊಂದಿಗೆ ಮಂಧಾನ ಅವರು 10 ನೇ ಏಕದಿನ ಶತಕಗಳ ಸಾಧನೆ ಮಾಡಿದ್ದಾರೆ.

ಗುಜರಾತಿನ ರಾಜ್‌ಕೋಟ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಕಳೆದ ವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್‌ಗೆ 370 ರನ್ ಗಳಿಸಿತ್ತು. ಇದೀಗ ಐದು ವಿಕೆಟ್ ನಷ್ಟದೊಂದಿಗೆ 435 ರನ್ ಗಳಿಸುವ ಮೂಲಕ ಭಾರತ ಮಹಿಳಾ ತಂಡವು ಹೊಸ ದಾಖಲೆಯನ್ನು ನಿರ್ಮಿಸಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಆರಂಭಿಕ ಪ್ರಾಬಲ್ಯ ಸಾಧಿಸಿತು. ಮೊದಲ ವಿಕೆಟ್ ಕಳೆದುಕೊಂಡಾಗ ಭಾರತ ತಂಡವು 233 ರನ್‌ಗಳನ್ನು ಕಲೆಹಾಕಿತು. ಮಂಧಾನ ಅವರು 80 ಎಸೆತಗಳಲ್ಲಿ 135 ರನ್ ಗಳಿಸಿದರು. ಇದೇ ಇನ್ನಿಂಗ್ಸ್‌ನಲ್ಲಿ ಮಂಧಾನ ಅವರು ಅತಿ ಹೆಚ್ಚು ಸಿಕ್ಸರ್ ಭಾರಿಸಿದ ಭಾರತದ ಎರಡನೇ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಈ ಹಿಂದೆ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಸ್ಪೋಟಕ ಮಹಿಳಾ ಕ್ರಿಕೆಟರ್ ಹರ್ಮನ್‌ಪ್ರೀತ್ ಕೌರ್ ಅವರು 171 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅವರು ಆ ಪಂದ್ಯದಲ್ಲಿ ಏಳು ಸಿಕ್ಸರ್‌ಗಳನ್ನು ಹೊಡೆದಿದ್ದರು. ಈ ಪಂದ್ಯದಲ್ಲಿ ಮಂಧಾನ ಅವರು ಏಳು ಸಿಕ್ಸರ್ ಭಾರಿಸುವ ಮೂಲಕ ಕೌರ್ ಸಾಧನೆಯನ್ನು ಸರಿಗಟ್ಟಿದ್ದಾರೆ.
ಮಂಧಾನಾ ಅವರು ಸ್ಫೋಟಕ ಆಟಕ್ಕೆ ಮೊರೆ ಹೋದಾಗ, ಅವರಿಗೆ ಜೊತೆಯಾದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ನಿಧಾನ ಗತಿಯ ಆಟಕ್ಕೆ ಮೊರೆ ಹೋದರು. ಅವರು 129 ಎಸೆತಗಳಲ್ಲಿ 154 ರನ್ ಗಳಿಸಿದರು. ಇದು ಪ್ರತೀಕಾ ರಾವಲ್ ಅವರು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಗಳಿಸಿರುವ ಅತ್ಯಧಿಕ ಮೊತ್ತವಾಗಿದೆ.












Click it and Unblock the Notifications