ಆಂಗ್ಲರ ಕ್ರಿಕೆಟ್ ಪಡೆಗೆ ಗುನ್ನಾ ಇಟ್ಟ ಶುಭಮನ್ ಗಿಲ್ & ವಿರಾಟ್ ಕೊಹ್ಲಿ! Shubman Gill

ಇಂಗ್ಲೆಂಡ್ ಕ್ರಿಕೆಟ್ ಪಡೆಗೆ ಭಾರಿ ದೊಡ್ಡ ಆಘಾತ ಸಿಕ್ಕಿದ್ದು, ಭಾರತದ ಅಬ್ಬರದ ಎದುರು ಆಂಗ್ಲರ ಕನಸು ನುಚ್ಚುನೂರಾಗಿ ಹೋಗಿದೆ. ಸತತ ಸೋಲುಗಳಿಂದ ಕಂಗೆಟ್ಟು ಹೋಗಿರುವ ಇಂಗ್ಲೆಂಡ್ ಕ್ರಿಕೆಟ್ ಟೀಂ, ಕಟ್ಟಕಡೆಯ ಪಂದ್ಯ 3ನೇ ಏಕದಿನ ಮ್ಯಾಚ್ ಗೆದ್ದು ಒಂದಷ್ಟು ಖುಷಿಪಡುವ ಸ್ಕೆಚ್ ಹಾಕಿತ್ತು. ಆದರೆ ಭಾರತದ ಬ್ಯಾಟಿಂಗ್ ಪಡೆ ಇಂಗ್ಲೆಂಡ್‌ಗೆ ಮತ್ತೆ ಮತ್ತೆ ಆಘಾತ ನೀಡುತ್ತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅನಿವಾರ್ಯತೆಗೆ ಸಿಲುಕಿದ್ದ ಭಾರತ ಕ್ರಿಕೆಟ್ ತಂಡ, ಇಂಗ್ಲೆಂಡ್ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡುತ್ತಿದೆ. ಆರಂಭದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದು ಕುಣಿದಾಡಿದ್ದ ಇಂಗ್ಲೆಂಡ್ ಬೌಲರ್ಸ್, ಆ ನಂತರ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ಆರ್ಭಟ ನೋಡಿ ಬೆಚ್ಚಿಬಿದ್ದರು. ಅದರಲ್ಲೂ ಶುಭಮನ್ ಗಿಲ್ ಅದ್ಭುತವಾಗಿ ಒಂದು ಶತಕ ಕೂಡ ಬಾರಿಸಿದ್ದು, ಇಂಗ್ಲೆಂಡ್ ಸೋಲು ಸಮೀಪಿಸಿದೆ.

Shubman Gill Achieves Fastest 2500 Runs in ODI History With 7th ODI Century

ಶುಭಮನ್ ಗಿಲ್ ಅದ್ಭುತ ಶತಕ!

ರೋಹಿತ್ ಶರ್ಮಾ ಜೊತೆಗೆ ಬಂದು ಇನ್ನಿಂಗ್ಸ್ ಆರಂಭಿಸಿದ್ದ ಶುಭಮನ್ ಗಿಲ್ ಮತ್ತೆ ತಮ್ಮ ಬ್ಯಾಟ್ ಝಳಪಿಸಿದ್ದಾರೆ. ಒಟ್ಟು 102 ಬಾಲ್ ಆಡಿದ ಶುಭಮನ್ ಗಿಲ್ 112 ರನ್ ಗಳಿಸಿ ಔಟ್ ಆದರು. ಒಟ್ಟು 14 ಬೌಂಡರಿ & 3 ಸಿಕ್ಸರ್ ಚಚ್ಚುವ ಮೂಲಕ 109.80 ಸ್ಟ್ರೈಕ್‌ರೇಟ್ ಮೂಲಕ ಭಾರತ ತಂಡದ ಒಟ್ಟು ಸ್ಕೋರ್‌ಗೆ ನೆರವಾಗಿದ್ದಾರೆ ಶುಭಮನ್ ಗಿಲ್. ವಿರಾಟ್ ಕೊಹ್ಲಿ ಕೂಡ ಗಿಲ್ ಜೊತೆಗೆ ಸೇರಿ ಅದ್ಭುತ ಆಟ ಪ್ರದರ್ಶಿಸಿದರು. ಈ ಮೂಲಕ ಭಾರತ ತಂಡ ಇನ್ನೇನು ಗೆಲುವಿನ ದಡ ತಲುಪಿದ್ದು, ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ.


ವಿರಾಟ್ ಕೊಹ್ಲಿ 52 ರನ್ ಅಬ್ಬರ

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅದಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲು ಭಾರತಕ್ಕೆ ಇಂಗ್ಲೆಂಡ್ ವಿರುದ್ಧದ ಸರಣಿ ಸಿಕ್ಕಿತ್ತು. ಹೀಗೆ, ತನಗೆ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡ ಭಾರತ ತಂಡ ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ತಕ್ಕಪಾಠ ಕಲಿಸಿದೆ. 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟ್ ಆದ ನಂತರದಲ್ಲಿ ಬಂದ ವಿರಾಟ್ ಕೊಹ್ಲಿ, 55 ಬಾಲ್ ಆಡಿ 52 ರನ್ ಗಳಿಸಿದ್ದಾರೆ.

ತಮ್ಮ ಆಟದಲ್ಲಿ 7 ಬೌಂಡರಿ & 1 ಸಿಕ್ಸ್ ಕೂಡ ಗಿಫ್ಟ್ ಕೊಟ್ಟಿದ್ದಾರೆ ವಿರಾಟ್ ಕೊಹ್ಲಿ. ಮತ್ತೊಂದು ಕಡೆಯಲ್ಲಿ ಶ್ರೇಯಸ್ ಅಯ್ಯರ್ 78 ರನ್ ಗಳಿಸಿ ಮಿಂಚಿದರು. ಕೆಎಲ್ ರಾಹುಲ್ ಕೂಡ 40 ರನ್ ಗಿಫ್ಟ್ ಕೊಟ್ಟರು. ಈ ಮೂಲಕ ಭಾರತ ತಂಡ ಉತ್ತಮ ಸ್ಕೋರ್‌ ತಲುಪಿದೆ. ಇನ್ನುಳಿದ ಆಟಗಾರರು ಅಷ್ಟಾಗಿ ಮಿಂಚಲಿಲ್ಲ, ಆದರೂ ಭಾರತ ತಂಡ ಅತ್ಯುತ್ತಮ ಸ್ಕೋರ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಭಯ ಹುಟ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+