Shreyanka Patil: ಆಸ್ಟ್ರೇಲಿಯಾದಲ್ಲೂ ಕನ್ನಡತಿ ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್ ಅದ್ಭುತ ಸಾಧನೆ: ಭಾರೀ ಮೆಚ್ಚುಗೆ
Shreyanka Patil: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದಿದೆ. ನಾಯಕಿ ಹರ್ಮನ್‌ಪ್ರೀತ್ ಅವರ ಪಡೆ ನಿರ್ಣಾಯಕ ಮೂರನೇ ಪಂದ್ಯದಲ್ಲಿ 17 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿತು. ಈ ಗೆಲುವಿನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪ್ರಮುಖ ಪಾತ್ರವಹಿಸಿದರು.
ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 176 ರನ್‌ಗಳನ್ನು ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಶೆಫಲಾಲಿ ವರ್ಮಾ ಅವರು ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ತೆರಳಿದರು. ಈ ಮೂಲಕ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಜೆಮಿಯಾ ರೊಡ್ರಿಗಸ್ ಉತ್ತಮವಾಗಿ ಜೊತೆಯಾಟ ಆಡಿ ಮಿಂಚಿದರು. ಮಂಧಾನಾ 55 ಎಸೆತಗಳಲ್ಲಿ 82 ರನ್ ಸಿಡಿಸಿದರೆ, ಜೆಮಿಮಾ ಅರ್ಧಶತಕದ ನೆರವಿನಿಂದ ಗರಿಷ್ಠ ರನ್‌ಗಳನ್ನು ಕಲೆಹಾಕಿತು.

ಇನ್ನೂ ಟೀಂ ಇಂಡಿಯಾ ನೀಡಿದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಬ್ಯಾಟರ್ ಉತ್ತಮ ಆರಂಭ ನಿಡಿದರು. ಆದರೆ, ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಮಿನ್ ಮೋಡಿ ಮಾಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಜಾರ್ಜಿಯಾ ವಾಲ್ ಮೊದಲ ಓವರ್‌ನಲ್ಲೆ 18 ರನ್ ಬಾರಿಸಿದ್ದು, ಎರಡನೇ ಓವರ್‌ನಲ್ಲಿ ಶ್ರೇಯಾಂಕ ಪಾಟೀಲ್ ಅವರ ವಿಕೆಟ್ ಕಬಳಿಸಿದರು. ಬಳಿಕ ತಂಡ ಸರದಿಯಲ್ಲಿ ವಿಕೆಟ್ ಕೆಳೆದುಕೊಡು ಸಂಕಷ್ಟಕ್ಕೆ ಸಿಲುಕಿತು.
ಕನ್ನಡತಿ ಶ್ರೇಯಾಂಕಾ ಸ್ಪಿನ್ ಮೋಡಿಗೆ ಆಸಿಸ್ ತತ್ತರ
ಶ್ರೇಯಾಂಕ ಪಾಟೀಲ್ ಮಧ್ಯದ ಓವರ್‌ಗಳಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಆಸ್ಟ್ರೇಲಿಯಾ ಬ್ಯಾಟರ್‌ಗಳ ವೇಗವನ್ನು ಕಡಿಮೆ ಮಾಡಿದರು. ಹೀಗೆ ಆಸಿಸ್ ರನ್‌ಗಳ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಶ್ರೇಯಾಂಕಾ ನಾಲ್ಕು ಓವರ್‌ಗಳಲ್ಲಿ ಕೇವಲ 22 ರನ್ ಬಿಟ್ಟುಕೊಂಡು 3 ವಿಕೆಟ್ ಪಡೆದು ಭಾರತದ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಇನ್ನೂ ಶ್ರೀ ಚರಣಿ ಮೂರು ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ 2, ರೇಣುಕಾ ಸಿಂಗ್ ಠಾಕೂರ್ 1 ವಿಕೆಟ್ ಪಡೆದು ಆಸ್ಟ್ರೇಲಿಯಾವನ್ನು 159 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಆಸಿಸಿ ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ಆಶ್ಲೀ ಗಾರ್ಡ್ನರ್ ಸಿಡಿಸಿದ ಅರ್ಧಶತಕ ವ್ಯರ್ಥವಾಯಿತು.
ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡವು 2016ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಜಯಿಸಿದೆ. ಬಹು-ಸ್ವರೂಪದ ಸರಣಿಯಲ್ಲಿ ಭಾರತ 4-2 ಮುನ್ನಡೆ ಸಾಧಿಸಿದ್ದು, ಮುಂದಿನ ಏಕದಿನ ಮತ್ತು ಟೆಸ್ಟ್ ಪಂದ್ಯಗಳತ್ತ ಕಣ್ಣು ಹಾಯಿಸಿದೆ. ಒಟ್ಟಾರೆ, ಈ ಸರಣಿಯಲ್ಲಿ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಮ್ಯಾಜಿಕ್ ಹಾಗೂ ಒತ್ತಡದ ಸಂದರ್ಭದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ. ಕನ್ನಡತಿಯ ಈ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೇಯಾಂಕಾ ಪಾಟೀಲ್ ಬಗ್ಗೆ ವಿವರ
ಶ್ರೇಯಾಂಕಾ ಪಾಟೀಲ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ ಮೂಲದ ಶ್ರೇಯಾಂಕಾ ಬಲಗೈ ಬ್ಯಾಟರ್ ಹಾಗೂ ಆಫ್ ಸ್ಪಿನ್ ಬೌಲರ್ ಆಗಿ ಗಮನ ಸೆಳೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು. ಮಧ್ಯದ ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಉತ್ತಮವಾಗಿ ಬೌಲಿಂಗ್ ದಾಳಿ ಮಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಶ್ರೇಯಾಂಕಾ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications