ಶ್ರೇಯಾಂಕಾ ಪಾಟೀಲ್ + ವಿರಾಟ್ ಕೊಹ್ಲಿ = RCB ಕಪ್ ಗೆಲ್ಲೋದು ಪಕ್ಕಾ!
ಆರ್‌ಸಿಬಿ ನಿನ್ನೆ ಭರ್ಜರಿ ಗೆಲುವು ಸಾಧಿಸಿದ್ದು ಹೈದರಾಬಾದ್ ತಂಡದ ಹೆಡೆಮುರಿ ಕಟ್ಟಿದೆ. ಭರ್ಜರಿ ಆಟ ಪ್ರದರ್ಶನ ಮಾಡಿದ ವಿರಾಟ್ ಕೊಹ್ಲಿ & ರಜತ್ ಪಾಟೀದಾರ್ ಹೈದರಾಬಾದ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ಇದೇ ಸಮಯದಲ್ಲಿ ಶ್ರೇಯಾಂಕಾ ಪಾಟೀಲ್ + ವಿರಾಟ್ ಕೊಹ್ಲಿ = RCB ಕಪ್ ಗೆಲ್ಲೋದು ಪಕ್ಕಾ! ಅಂತಿದ್ದಾರೆ ಅಭಿಮಾನಿಗಳು. ಹಾಗಾದ್ರೆ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಮಹಿಳೆಯರ ತಂಡ ಬಿಟ್ಟು ಪುರುಷರ ತಂಡಕ್ಕೆ ಬರ್ತಾರಾ? ಹೀಗೆ ಹುಡುಗಿಯರು ಹುಡುಗರ ಟೀಂಗೆ ಆಟ ಆಡಲು ಅವಕಾಶ ಇದೆಯಾ? ಬನ್ನಿ ತಿಳಿಯೋಣ.
ಶ್ರೇಯಾಂಕಾ ಪಾಟೀಲ್ ಅವರಿಗೆ ವಿರಾಟ್ ಕೊಹ್ಲಿ ಬಗ್ಗೆ ಅದೆಷ್ಟು ಗೌರವ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಯಾಕಂದ್ರೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಆರ್‌ಸಿಬಿ ಮಹಿಳೆಯರ ತಂಡಕ್ಕೆ ಬೆಂಬಲವಾಗಿ ನಿಂತು, ಆರ್‌ಸಿಬಿ ಮಹಿಳೆಯರ ತಂಡ 2024ರ ಡಬ್ಲ್ಯೂಪಿಎಲ್ (WPL) ಕಪ್ ಗೆಲ್ಲಲು ಆತ್ಮಸ್ಥೈರ್ಯ ನೀಡಿದ್ದರು ಕೊಹ್ಲಿ. ಜೊತೆಗೆ ಮೊದಲಿನಿಂದ ಕೂಡ ಶ್ರೇಯಾಂಕಾ ಪಾಟೀಲ್ ಅವರಿಗೆ ವಿರಾಟ್ ಕೊಹ್ಲಿ ಅವರೇ ಮಾದರಿ ಆಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇದೀಗ ಶ್ರೇಯಾಂಕಾ ಪಾಟೀಲ್ ಅವರು ಆರ್‌ಸಿಬಿ ಪುರುಷರ ತಂಡಕ್ಕೆ ಬಂದು, ವಿರಾಟ್‌ಗೆ ಬೆಂಬಲವಾಗಿ ನಿಲ್ಲಲಿ. ಯಾಕಂದ್ರೆ ಆರ್‌ಸಿಬಿ ಬಳಿ ಸ್ಪಿನ್ ಬೌಲರ್ಸ್ ಇಲ್ಲ ಅಂತಿದ್ದಾರೆ ಫ್ಯಾನ್ಸ್.

ಶ್ರೇಯಾಂಕಾ ಇಟರ್ವ್ಯೂವ್ ವೈರಲ್!
'ಟಗರು ಪುಟ್ಟಿ' ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶ್ರೇಯಾಂಕಾ ಪಾಟೀಲ್ ಅವ್ರು ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದು. ಇತ್ತೀಚೆಗೆ ಅವರು ನೀಡಿದ್ದ ಹೊಸ ಇಂಟರ್ವ್ಯೂವ್ ಒಂದರಲ್ಲಿ ವಿರಾಟ್ ಕೊಹ್ಲಿ ಅವರ ಬಗ್ಗೆ ಮತ್ತೊಮ್ಮೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಈ ಸಮಯದಲ್ಲೇ ವಿರಾಟ್ ಕೊಹ್ಲಿ ಅವರು ಶ್ರೇಯಾಂಕಾ ಪಾಟೀಲ್ ಅವರ ಬೌಲಿಂಗ್ ಕುರಿತು ಹೊಗಳಿದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ನಿನ್ನೆ ಬೇರೆ ಹೈದರಾಬಾದ್ ತಂಡದ ವಿರುದ್ದ ನಮ್ಮ ಆರ್‌ಸಿಬಿ ಗೆದ್ದಿದ್ದು, ಇದೇ ವೇಳೆ ನೀವು ಆರ್‌ಸಿಬಿ ಮೆನ್ಸ್ ಟೀಂಗೆ ಬನ್ನಿ ಶ್ರೇಯಾಂಕಾ ಅಂತಿದ್ದಾರೆ ಕನ್ನಡಿಗರು.
ಕಲಬುರಗಿ ಮೂಲದ ಕನ್ನಡತಿ ಶ್ರೇಯಾಂಕಾ
ಆರ್‌ಸಿಬಿ ಬೆಂಗಳೂರು ಮಹಿಳಾ ತಂಡದ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು, 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಲು ಕನ್ನಡತಿ ಶ್ರೇಯಾಂಕ ಪಾಟೀಲ್ ಶ್ರಮ ತುಂಬಾ ದೊಡ್ಡದಾಗಿದೆ. ಶ್ರೇಯಾಂಕಾ ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯವರು ಅವರ ತಂದೆ ಕಲಬುರಗಿ ಮೂಲದ ರಾಜೇಶ್ ಪಾಟೀಲ್ ಬೆಂಗಳೂರಲ್ಲೇ ನೆಲೆಸಿದ ಕಾರಣ, RCB ಸ್ಟಾರ್ ಶ್ರೇಯಾಂಕಾ ಬೆಂಗಳೂರಲ್ಲೇ ಓದಿ ಬೆಳೆದಿದ್ದಾರೆ. ಇದೀಗ ಆರ್‌ಸಿಬಿ ಮಹಿಳಾ ತಂಡದಲ್ಲಿ ಪ್ರಮುಖ ಆಟಗಾರ್ತಿ ಆಗಿರುವ ಶ್ರೇಯಾಂಕಾ, ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.












Click it and Unblock the Notifications