ಕನ್ನಡತಿ ‘ಟಗರು ಪುಟ್ಟಿ’ ಶ್ರೇಯಾಂಕಾ ಪಾಟೀಲ್ ಆಸ್ತಿ ಎಷ್ಟು ಕೋಟಿ?

ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದು, ಕೋಟ್ಯಂತರ ಅಭಿಮಾನಿ ಬಳಗ ಅವರ ಆಟವನ್ನು ಮೆಚ್ಚಿಕೊಂಡಿದೆ. ಅದ್ರಲ್ಲೂ 2024ರ ಡಬ್ಲ್ಯೂಪಿಎಲ್ (WPL Cup) ಕಪ್‌ನ ಗೆದ್ದು, ಆರ್‌ಸಿಬಿ ಕಪ್ ಗೆಲ್ಲುವಂತೆ ಮಾಡುವಲ್ಲಿ ಶ್ರೇಯಾಂಕಾ ಪಾಟೀಲ್ ಅವರದ್ದು ಪ್ರಮುಖ ಪಾತ್ರವಾಗಿತ್ತು. ಹೀಗೆ ಶ್ರೇಯಾಂಕಾ ಪಾಟೀಲ್ ಆಟಕ್ಕೆ ಮೆಚ್ಚಿ ಕನ್ನಡಿಗರು ಇದೀಗ 'ಟಗರು ಪುಟ್ಟಿ' ಎಂಬ ಬಿರುದನ್ನು ನೀಡಿದ್ದಾರೆ. ಹಾಗಾದ್ರೆ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ? ಆರ್‌ಸಿಬಿ ಕಪ್ ಗೆದ್ದ ನಂತರ ಎಷ್ಟು ದುಡ್ಡು ಬಂತು?

ಕನ್ನಡತಿ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರ ಸಾಧನೆ ಬಗ್ಗೆ ಇದೀಗ, ಜಗತ್ತಿಗೆ ಜಗತ್ತೇ ಮಾತನಾಡುತ್ತಿದೆ. ಶ್ರೇಯಾಂಕಾ ಪಾಟೀಲ್ ಅವರು ಆರ್‌ಸಿಬಿಯ ಕೋಟಿ, ಕೋಟಿ ಅಭಿಮಾನಿಗಳ ಕನಸು ನನಸು ಮಾಡಿದ್ದಾರೆ. ಹೀಗಾಗಿ ಶ್ರೇಯಾಂಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ. ಆರ್‌ಸಿಬಿ ಡಬ್ಲ್ಯೂಪಿಎಲ್ (WPL Cup) ಕಪ್‌ನ ಗೆದ್ದ ನಂತರ ಒಟ್ಟು 6 ಕೋಟಿ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಶ್ರೇಯಾಂಕಾ ಅವರಿಗೆ ಕೂಡ ದೊಡ್ಡ ಪಾಲು ಸಿಕ್ಕಿದೆ. ಇನ್ನು ಇದೇ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಗೆದ್ದು 5 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದರು. ಹಾಗಾದ್ರೆ ಒಟ್ಟಾರೆ ಶ್ರೇಯಾಂಕಾ ಪಾಟೀಲ್ ಅವರ ಆಸ್ತಿ ಎಷ್ಟು?

Shreyanka Patil Net Worth After Winning The WPL Tourney

ಶ್ರೇಯಾಂಕಾ ಕೋಟಿ.. ಕೋಟಿ..

ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಆದ್ರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ ಅವರು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳ ಗಳಿಸಿದ್ದಾರೆ, ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್. ಹಾಗಾದ್ರೆ ಇದೀಗ ಶ್ರೇಯಾಂಕಾ ಪಾಟೀಲ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ ಆಗಿರಬಹುದು? ಮಾಹಿತಿ ಇಲ್ಲಿದೆ ಮುಂದೆ ಓದಿ.

ಈಗಿರುವ ಮಾಹಿತಿಗಳ ಪ್ರಕಾರ, ಆರ್‌ಸಿಬಿ ಡಬ್ಲ್ಯೂಪಿಎಲ್ (WPL Cup) ಗೆಲ್ಲುವ ಮೊದಲು ಶ್ರೇಯಾಂಕಾ ಪಾಟೀಲ್ ಅವರ ಒಟ್ಟು ಆಸ್ತಿ 35 ಲಕ್ಷ ರೂಪಾಯಿಗೂ ಹೆಚ್ಚಾಗಿತ್ತು ಎಂಬ ಮಾಹಿತಿ ಇದೆ. ಆದರೆ ಇದೀಗ ಆರ್‌ಸಿಬಿ ಡಬ್ಲ್ಯೂಪಿಎಲ್ (WPL Cup) ಗೆದ್ದ ನಂತರದಲ್ಲಿ, ಒಟ್ಟು 6 ಕೋಟಿ ರೂಪಾಯಿ ಬಹುಮಾನದ ಮೊತ್ತದಲ್ಲಿ ಶ್ರೇಯಾಂಕಾ ಪಾಟೀಲ್‌ಗೆ ಕೂಡ ದೊಡ್ಡ ಶೇರ್ ಸಿಕ್ಕಿದೆ. ಈ ಮೂಲಕ ಶ್ರೇಯಾಂಕಾ ಪಾಟೀಲ್ ಅವರ ಸ್ವಂತ ಆಸ್ತಿಯೇ ಈಗ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ತಮ್ಮ ಆಸ್ತಿಯ ಬಗ್ಗೆ ಶ್ರೇಯಾಂಕಾ ಪಾಟೀಲ್ ಅಧಿಕೃತ ಹೇಳಿಕೆ ನೀಡಿಲ್ಲ.

ಉತ್ತರ ಕರ್ನಾಟಕದ ಊಟ ಇಷ್ಟವಂತೆ!

ಆಹಾರ ಸಂಸ್ಕೃತಿ ವಿಚಾರದಲ್ಲಿ ಉತ್ತರ ಕರ್ನಾಟಕ ಸಾಕಷ್ಟು ಶ್ರೀಮಂತಿಕೆ ಹೊಂದಿದೆ. ಈ ಕಾರಣಕ್ಕೆ ದೇಶಾದ್ಯಂತ ಉತ್ತರ ಕರ್ನಾಟಕದ ಆಹಾರ ಶೈಲಿಗೆ ದೊಡ್ಡ ಹೆಸರು ಕೂಡ ಇದೆ. ಅದ್ರಲ್ಲೂ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ದೊರೆಯುವ ಊಟಕ್ಕೆ, ನಮ್ಮ ರಾಜ್ಯದ ಉತ್ತರ ಕರ್ನಾಟಕ ಫೇಮಸ್. ಜೋಳದ ರೊಟ್ಟಿ, ಬಗೆಬಗೆಯ ಕಾಳುಗಳು, ಶೇಂಗಾ ಚಟ್ನಿ, ಮೊಸರು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಜನ ತಿಂತಾರೆ. ಅದ್ರಲ್ಲೂ ಕ್ರಿಕೆಟ್ ಸ್ಟಾರ್ ಶ್ರೇಯಾಂಕಾ ಅವರಿಗೂ ತಮ್ಮ ಊರಿನ ಊಟ & ಜೋಳದ ರೊಟ್ಟಿ ಅಂದ್ರೆ ಪ್ರಾಣವಂತೆ. ಈ ಬಗ್ಗೆ ಅವರೇ ಫೋಟೋಸ್ ಶೇರ್ ಮಾಡಿ ತಮ್ಮ ಆಸೆ ಹಂಚಿಕೊಂಡಿದ್ದರು.

ಕೊಹ್ಲಿ ಮೀರಿಸುತ್ತಾರಾ ಶ್ರೇಯಾಂಕಾ?

ಅಭಿಮಾನಿಗಳು ಶ್ರೇಯಾಂಕಾ ಪಾಟೀಲ್ ಅವರನ್ನು ಲೇಡಿ ಕೊಹ್ಲಿ ಅಂತಾನೆ ಕರೆಯುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ಗೆ ಬಂದಾಗ ಹೇಗೆ ಆಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚಿದ್ದರೋ, ಅದೇ ರೀತಿ ಶ್ರೇಯಾಂಕಾ ಪಾಟೀಲ್ ಕೂಡ ಮಿಂಚುತ್ತಿದ್ದಾರೆ. ಮೈದಾನದ ಅಖಾಡದಲ್ಲಿ ಕ್ರಿಕೆಟ್ ಜೊತೆಗೆ ಎದುರಾಳಿ ಪಡೆಗಳ ಮೈಂಡ್ ಗೇಮ್ ಎದುರಿಸುವಲ್ಲಿ ಕೂಡ ಶ್ರೇಯಾಂಕಾ ಪಾಟೀಲ್ ಎಕ್ಸ್‌ಪರ್ಟ್ ಆಗುತ್ತಿದ್ದಾರೆ. ಈ ಚಿಕ್ಕ ಹುಡುಗಿ ಮಾಡುತ್ತಿರುವ ಪ್ರತಿ ಸಾಧನೆ ಕೂಡ ಗಮನ ಸೆಳೆಯುತ್ತಿದೆ. ಮತ್ತೊಂದು ಕಡೆ, ಶ್ರೇಯಾಂಕಾ ಪಾಟೀಲ್ ಭವಿಷ್ಯದ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಆಗುವುದರಲ್ಲಿ ಯಾವುದೇ ಅನುಮಾನ ಕೂಡ ಇಲ್ಲ ಅಂತಿದ್ದಾರೆ ಅಭಿಮಾನಿಗಳು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+