Shreyanka Patil: ಬಾಲಿವುಡ್ ಹಾಡಿಗೆ ಆರ್‌ಸಿಬಿ ಟಗರು ಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಭರ್ಜರಿ ಡ್ಯಾನ್ಸ್
Shreyanka Patil: ಟೀಮ್ ಇಂಡಿಯಾ ಸ್ಟಾರ್ ಆಟಗಾರ್ತಿ, ಆರ್‌ಸಿಬಿ ಟಗರುಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಹಾಗೆಯೇ ಇದೀಗ ಅವರು ಬಾಲಿವುಡ್ ಹಾಡಿಗೆ ಸಖತ್ ಸ್ಟೆಪ್ ಹಾಕಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮೈದಾನದಲ್ಲಿ ತಮ್ಮ ಆಫ್ ಸ್ಪಿನ್ ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕವೇ ಹೆಚ್ಚು ಸದ್ದು ಮಾಡುವವರು. ಆದರೆ ಇದೀಗ ಅವರು ಸುದ್ದಿಯಲ್ಲಿರುವುದು ತಮ್ಮ ಕ್ರಿಕೆಟ್ ಸಾಧನೆಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೃತ್ಯದ ವಿಡಿಯೋದಿಂದ.

'ಬಬ್ಲಿ ಬದ್ಮಾಶ್' ಹಾಡಿಗೆ ಹೆಜ್ಜೆ ಹಾಕಿದ ಶ್ರೇಯಾಂಕಾ
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಶ್ರೇಯಾಂಕಾ ಪಾಟೀಲ್ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಡ್ಯಾನ್ಸ್ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಬಾಲಿವುಡ್‌ನ ಪ್ರಸಿದ್ದ 'ಬಬ್ಲಿ ಬದ್ಮಾಶ್' ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದು, ಅಭಿಮಾನಿಗಳನ್ನು ರಂಜಿಸಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುವ ಶ್ರೇಯಾಂಕಾ ಈ ವಿಡಿಯೋದಲ್ಲಿ ತಮ್ಮ ವಿಭಿನ್ನ ಹಾಗೂ ತಮಾಷೆಯ ನೃತ್ಯ ಮಾಡಿದ್ದಾರೆ.
ಇದೀಗ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಅವರು ಈ ರೀಲ್ಸ್ ಚಿತ್ರೀಕರಿಸಿ ಶೇರ್ ಮಾಡಿದ್ದಾರೆ. ಮೈದಾನದಿಂದ ದೂರವಿದ್ದರೂ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಹಾಗೂ ಮನರಂಜನೆ ನೀಡಲು ಈ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ
ಶ್ರೇಯಾಂಕಾ ಅವರ ಈ ಹೊಸ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋಗೆ ನೆಟ್ಟಿಗರು ಮತ್ತು ಆರ್‌ಸಿಬಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಆರ್‌ಸಿಬಿ ಅಭಿಮಾನಿಗಳು ಶ್ರೇಯಾಂಕಾ ಅವರ ಎನರ್ಜಿ ಹಾಗೂ ಡ್ಯಾನ್ಸ್ ಕಂಡು ಫಿದಾ ಆಗಿದ್ದಾರೆ. 'ಮೈದಾನದಲ್ಲಷ್ಟೇ ಅಲ್ಲ, ಡ್ಯಾನ್ಸ್‌ನಲ್ಲೂ ನೀವು ಆಲ್ ರೌಂಡರ್, ಮಲ್ಟಿ-ಟ್ಯಾಲೆಂಟೆಡ್,' ಎಂದು ಕಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಯ ವ್ಯಕ್ಯಪಡಿಸಿದ್ದಾರೆ.
ಫಿಟ್‌ನೆಸ್ ಕಡೆಗೆ ಗಮನ ಕೊಡುವಂತೆ ಮನವಿ
ಮತ್ತೊಂದೆಡೆ ಇನ್ನೂ ಕೆಲವು ನೆಟ್ಟಿಗರು ಈ ವಿಡಿಯೋಗೆ ಟ್ರೋಲ್ ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. 'ನಿಮಗೆ ಗಾಯವಾಗಿದೆ, ವಿಶ್ರಾಂತಿ ಪಡೆದು ಕ್ರಿಕೆಟ್ ಹಾಗೂ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ಕೊಡಿ. ಮುಂದಿನ ಪಂದ್ಯಾವಳಿಗಳಿಗೆ ಸಿದ್ಧರಾಗಿ,' ಎಂದು ಸಲಹೆಗಳನ್ನು ನೀಡಿದ್ದಾರೆ.
ಮೈದಾನದ ಹೊರಗೂ ಟಗರುಪುಟ್ಟಿ ಸದ್ದು
ಕರ್ನಾಟಕ ಮೂಲದ ಶ್ರೇಯಾಂಕಾ ಪಾಟೀಲ್ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಹಾಗೂ ಭಾರತ ಮಹಿಳಾ ರಾಷ್ಟ್ರೀಯ ತಂಡದ ಪರವಾಗಿ ನೀಡಿರುವ ಅದ್ಭುತ ಪ್ರದರ್ಶನದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೇವಲ ಮೈದಾನದ ಪ್ರದರ್ಶನವಲ್ಲದೆ, ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಸೋಶಿಯಲ್ ಮೀಡಿಯಾ ಕಂಟೆಂಟ್ ಮೂಲಕ ಯುವ ಪೀಳಿಗೆಗೆ ನೆಚ್ಚಿನ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಕ್ರಿಕೆಟ್ ಅಂಗಳದಿಂದ ದೂರವಿದ್ದರೂ ಶ್ರೇಯಾಂಕಾ ತಮ್ಮ ವಿಭಿನ್ನ ಶೈಲಿಯ ಡ್ಯಾನ್ಸ್ ರೀಲ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಲ್ಲಿದ್ದಾರೆ. ಇನ್ನೂ ಇದೀಗ ಶೇರ್ ಮಾಡಿಕೊಂಡಿರುವ ಇವರ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಬೇಗ ಚೇತರಿಸಿಕೊಂಡು ಟೀಮ್ ಇಂಡಿಯಾ ಸೇರಲಿ ಎಂಬುದೇ ನಮ್ಮ ಆಸೆ ಅಂತಲೂ ಹಾರೈಸಿದ್ದಾರೆ.


Click it and Unblock the Notifications
