Shreyanka Patil: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಬೆಂಗಳೂರು ಹುಡುಗಿ: ಭಾರತಕ್ಕೆ ಗೆಲುವು

ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿ ವೈಟ್‌ವಾಶ್ ತಪ್ಪಿಸಿಕೊಂಡಿದೆ.

ಮೊದಲ ಎರಡೂ ಟಿ20 ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ಮಹಿಳಾ ತಂಡ ಕೊನೆಯ ಪಂದ್ಯದಲ್ಲಿ ಸೋತರೂ ಸರಣಿ ಗೆಲುವು ಸಾಧಿಸಿ ಮಿಂಚಿದರು. ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಹುಡುಗಿ ಶ್ರೇಯಾಂಕ ಪಾಟೀಲ್ ಗಮನ ಸೆಳೆದರು.

Shreyanka Patil

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 126 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ರೇಣುಕಾ ಸಿಂಗ್ ಮತ್ತು ಅಮನ್‌ಜೋತ್ ಕೌರ್ ತಲಾ 2 ವಿಕೆಟ್ ಪಡೆದರೆ, ಶ್ರೇಯಾಂಕ ಪಾಟೀಲ್ ಮತ್ತು ಸೈಕಾ ಇಶಾಕ್ ತಲಾ 3 ವಿಕೆಟ್ ಪಡೆದರು.

ಶ್ರೇಯಾಂಕ ಪಾಟೀಲ್‌ ಅತ್ಯುತ್ತಮ ಬೌಲಿಂಗ್

ಬೆಂಗಳೂರು ಹುಡುಗಿ, ಆರ್ ಸಿಬಿ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ತಮ್ಮ ಮೊದಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ. ಕೊನೆಯ ಪಂದ್ಯದಲ್ಲಿ 4 ಓವರ್ ನಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಈ ಮೂಲಕ ತಮ್ಮ ಮೇಲೆ ಆಯ್ಕೆದಾರರು ಇಟ್ಟ ನಂಬಿಕೆ ಉಳಿಸಿಕೊಂಡಿದ್ದಾರೆ. ಅವರ ಈ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಕೂಡ ಪಡೆದರು.

ಮಂದಾನ ಉತ್ತಮ ಬ್ಯಾಟಿಂಗ್

127 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಶಫಾಲಿ ವರ್ಮಾ 6 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಸ್ಮೃತಿ ಮಂದಾನ ಮತ್ತು ಜೆಮಿಮಾ ರೋಡ್ರಿಗಸ್ ಮೂರನೇ ವಿಕೆಟ್‌ಗೆ 57 ರನ್ ಕಲೆ ಹಾಕಿದರು. ಜೆಮಿಮಾ 29 ರನ್ ಗಳಿಸಿ ಔಟಾದರೆ, ನಂತರ ಬಂದ ದೀಪ್ತಿ ಶರ್ಮಾ 12 ರನ್ ಗಳಿಸಿದರು, ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 6 ರನ್ ಗಳಿಸಿದರೆ, ರಿಷಾ ಘೋಷ್ 2 ರನ್ ಗಳಿಸಿದರು. ಅಮನ್‌ಜೋತ್ ಕೌರ್ 4 ಎಸೆತಗಳಲ್ಲಿ 10 ರನ್ ಗಳಿಸಿದರು. ಸ್ಮೃತಿ ಮಂದಾನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 48 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ 48 ರನ್ ಗಳಿಸಿದ ಅವರು ಕೊನೆಯಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಅರ್ಧಶತಕ ತಪ್ಪಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+