Shreyanka Patil: ಆರ್‌ಸಿಬಿ ಆಟಗಾರ್ತಿ & ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ...
ಕನ್ನಡತಿ ಶ್ರೇಯಾಂಕಾ ಪಾಟೀಲ್ ಕಂಡರೆ 7 ಕೋಟಿ ಕನ್ನಡಿಗರಿಗೆ ವಿಶೇಷ ಗೌರವ ಮತ್ತು ಪ್ರೀತಿ. ಈ ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಸಾಧನೆ ಮಾಡಿ, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದು ಬೀಗುವಲ್ಲಿ ಶ್ರೇಯಾಂಕಾ ಪಾಟೀಲ್ ಅವರ ಪಾಲು ಕೂಡ ದೊಡ್ಡದಾಗಿದೆ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರಿಗೆ ದೊಡ್ಡ ಫ್ಯಾನ್ಸ್ ಬಳಗ ಇದೆ. ಇಂತಹ ಸಮಯದಲ್ಲೇ, ಆರ್‌ಸಿಬಿ ಆಟಗಾರ್ತಿ & ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ...
ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಬರೀ ಆರ್‌ಸಿಬಿ, ಆರ್‌ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ರೀತಿ ಆರ್‌ಸಿಬಿ ಬೆಂಗಳೂರು ತಂಡ ಮೊದಲ ಬಾರಿಗೆ ಕಪ್ ಗೆದ್ದಿದ್ದು 2024ರಲ್ಲಿ. ಮಹಿಳೆಯರ ತಂಡ ಕಪ್ ಗೆದ್ದ ನಂತರ ಹುಡುಗರ ತಂಡ ವಿರಾಟ್ ಕೊಹ್ಲಿ ಜೊತೆಗೂಡಿ ಭರ್ಜರಿಯಾಗಿ ಕಪ್ ಗೆದ್ದು ಬೀಗಿದ್ದರು. ಆದರೆ ಹೀಗೆ 2024 WPL ಕಪ್ ಗೆದ್ದು ಇತಿಹಾಸ ನಿರ್ಮಿಸೋದಕ್ಕೆ ಒಬ್ಬ ಕನ್ನಡತಿ ಪ್ರಮುಖ ಕಾರಣ ಆಗಿದ್ದರು. ಅವರೇ ಶ್ರೇಯಾಂಕಾ ಪಾಟೀಲ್, ಆದರೆ ಇಂತಹ ಆಟಗಾರ್ತಿಗೆ ಈಗ...

ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ...
ಹೌದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶ್ರೇಯಾಂಕಾ ಪಾಟೀಲ್ ಕ್ರಿಕೆಟ್ ಲೋಕದಲ್ಲಿ ದೊಡ್ಡದಾದ ಹೆಸರು ಮಾಡಿದ್ದರು. ಅಲ್ಲದೇ ಶ್ರೇಯಾಂಕಾ ಪಾಟೀಲ್ ಅವರು ಭಾರತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಹೀಗಾಗಿಯೇ ಶ್ರೇಯಾಂಕಾ ಪಾಟೀಲ್ ಅವರು ಮಹಿಳಾ ಕ್ರಿಕೆಟ್ ಲೋಕದಲ್ಲಿ ದೊಡ್ಡ ದೊಡ್ಡ ದಾಖಲೆ ನಿರ್ಮಾಣ ಮಾಡಿ, ಆ ಮೂಲಕ ಇತಿಹಾಸ ನಿರ್ಮಿಸುವುದು ಗ್ಯಾರಂಟಿ ಅಂತಾನೇ ಅಭಿಮಾನಿಗಳು ಕಾಯುತ್ತಾ ಇದ್ದರು. ಇಂತಯ ಸಮಯದಲ್ಲೇ, ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ...
ಶ್ರೇಯಾಂಕಾ ಪಾಟೀಲ್‌ಗೆ ಅಭಿಮಾನಿಗಳಿಂದ...
ಅಂದಹಾಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಇದೀಗ ಮತ್ತಷ್ಟು ತಡವಾಗುತ್ತಿದ್ದು, ಭಾರತ ತಂಡಕ್ಕೆ ಆಡಿ ಮಿಂಚಿದ್ದ ಆಟಗಾರ್ತಿ ಈಗ ಟೀಂ ಇಂಡಿಯಾಗೆ ಆಯ್ಕೆ ಕೂಡ ಆಗಿಲ್ಲ. ಭಾರತ ಎ ತಂಡದ ಆಸ್ಟ್ರೇಲಿಯಾ ಪ್ರವಾಸದಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಹೊರಗೆ ಉಳಿದಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳಿಂದ ಶ್ರೇಯಾಂಕಾ ಪಾಟೀಲ್ ಮತ್ತೆ ತಂಡಕ್ಕೆ ಮರಳಲು ಆಗದೆ ಚಿಂತೆ ಮಾಡುವಂತೆ ಆಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಅಭಿಮಾನಿಗಳು ಮಾತ್ರ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಧೈರ್ಯ ತುಂಬುತ್ತಿದ್ದು, ನೀವು ಗೆದ್ದೇ ಗೆಲ್ಲುತ್ತೀರಿ... ಅಂತಾ ಶುಭ ಹಾರೈಸಿದ್ದಾರೆ.
ವಿಶ್ವಕಪ್ ಆಡಲಿಲ್ಲ ಶ್ರೇಯಾಂಕಾ ಪಾಟೀಲ್ ಅವರು...
ಶ್ರೇಯಾಂಕಾ ಪಾಟೀಲ್ ಅವರು ಭಾರತ ತಂಡದ ಪರವಾಗಿ ವಿಶ್ವಕಪ್ ಆಡುವ ಅವಕಾಶ ಪಡೆಯಲು ಆಗಲಿಲ್ಲ ಎಂಬ ಬೇಸರ ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಈಗ ತೀವ್ರವಾಗಿ ಕಾಡುತ್ತಿದೆ. ಹೌದು, ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಇದೀಗ ಭಾರತದ ಮಹಿಳಾ ಕ್ರಿಕೆಟ್ ತಂಡ ನಿರ್ಮಾಣ ಮಾಡಿದೆ. ಮೊದಲ ಬಾರಿಗೆ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯು ಶುರುವಾಗಿದ್ದು 1973ರ ಸಮಯದಲ್ಲಿ. ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿ ಶುರುವಾಗಿ ಈಗಾಗಲೇ ಸುಮಾರು 50 ವರ್ಷ ಕಳೆದಿದೆ. ಈ 50 ವರ್ಷಗಳಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಒಂದೇ ಒಂದು ವರ್ಲ್ಡ್ ಕಪ್ ಕೂಡ ಗೆದ್ದಿರಲಿಲ್ಲ. ಆದರೆ ಈ ಬಾರಿ ಭರ್ಜರಿಯಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಈ ಮೂಲಕ 50 ವರ್ಷಗಳ ನಂತರ ಇತಿಹಾಸ ನಿರ್ಮಿಸಿದೆ. ಆದರೆ ಶ್ರೇಯಾಂಕಾ ಪಾಟೀಲ್ ಅವರು ವಿಶ್ವಕಪ್ ಆಡದೇ ಇರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ...












Click it and Unblock the Notifications