Shikhar Mohan: ವೈಭವ್ ಸೂರ್ಯವಂಶಿಯಂತೆ ಅಬ್ಬರಿಸಿದ ಯುವ ಬ್ಯಾಟರ್ ಶಿಖರ್ ಮೋಹನ್ ಯಾರು?
Shikhar Mohan: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಹೆಸರಾಗಿದ್ದಾರೆ. ಇದೀಗ ಅವರಂತೆಯೇ ಅಬ್ಬರಿಸುವ ಮೊತ್ತೊಬ್ಬ ಆಟಗಾರನ ಹೆಸರು ದುಲೀಪ್ ಟ್ರೋಫಿ ವೇಳೆ ಮುನ್ನಲೆಗೆ ಬಂದಿದೆ. ಅವರೇ ಶಿಖರ್ ಮೋಹನ್. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಂದು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಷ್ಟೇ ಅಲ್ಲದೆ, ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಜಾರ್ಖಂಡ್‌ನ ಓಪನರ್ ಶಿಖರ್ ಮೋಹನ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ.

ಅದ್ಭುತ ಇನ್ನಿಂಗ್ಸ್ ಆಡಿದ ಶಿಖರ್ ಮೋಹನ್
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಂದು ಎಲ್ಲರ ಕಣ್ಣುಗಳು 15 ವರ್ಷದ ಯುವ ತಾರೆ ವೈಭವ್ ಸೂರ್ಯವಂಶಿ ಅವರ ಮೇಲಿದ್ದವು. ಆದರೆ ಪಂದ್ಯ ಮುಂದುವರೆದಂತೆ ಪೂರ್ವ ವಲಯ ತಂಡದ ಪರವಾಗಿ ಮತ್ತೊಬ್ಬ 21 ವರ್ಷದ ಎಡಗೈ ಬ್ಯಾಟರ್ ಶಿಖರ್ ಮೋಹನ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಅಬ್ಬರದ ಆಟ
ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮತ್ತು ಅಭಿಮನ್ಯು ಈಶ್ವರನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಳಿಸಿ ತಂಡಕ್ಕೆ ಉತ್ತಮ ನೀಡಿದರು. ಸೆಮಿಫೈನಲ್ ಪಂದ್ಯದ ವೇಳೆ ಅರ್ಧಶತಕ ಸಿಡಿಸಿದ್ದ ಸೂರ್ಯವಂಶಿ, ದಕ್ಷಿಣ ವಲಯದ ಪ್ರಮುಖ ವೇಗಿ ಮಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 88 ಎಸೆತಗಳಲ್ಲಿ ತಂಡದ ಮೊತ್ತವನ್ನು 100 ರನ್‌ಗೆ ತಲುಪಿಸಿದರು.
ತಂಡಕ್ಕೆ ಆಸರೆಯಾದ ಶಿಖರ್ ಮೋಹನ್
ವೈಭವ್ ಸೂರ್ಯವಂಶಿ ಅವರು 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ, ಸಿ.ವಿ.ಮಿಲಿಂದ್ ಅವರ ಶಾರ್ಟ್ ಬಾಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಇನ್ನೂ ಪೂರ್ವ ವಲಯದ ತಂಡವನ್ನು ಪ್ರಕಟಿಸಿದಾಗ 21 ವರ್ಷದ ಶಿಖರ್ ಮೋಹನ್ ಅವರನ್ನು ಮೀಸಲು ಆಟಗಾರ ಆಗಿ ಆಯ್ಕೆ ಮಾಡಲಾಗಿತ್ತು.
ಫೈನಲ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದ ಮೋಹನ್ ಅವರು, ಸಿಕ್ಕ ಮೊದಲ ಅವಕಾಶದಲ್ಲೇ ತಮ್ಮ ಸಾಮರ್ಥ್ಯ ನಿರೂಪಿಸಿದರು. ಈ ಹಿಂದೆ ಸಿ.ಕೆ. ನಾಯುಡು ಟ್ರೋಫಿಯ U-23 ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು, ಫೈನಲ್‌ನಲ್ಲಿ ಒತ್ತಡದ ಸಮಯದಲ್ಲಿ ಬ್ಯಾಟಿಂಗ್‌ಗೆ ಇಳಿದರು.
ಅನುಭವಿ ಬ್ಯಾಟರ್ ಅಭಿಮನ್ಯು ಈಶ್ವರನ್ 72 ರನ್ ಗಳಿಸಿದರೆ ವಿಕೆಟ್ ಒಪ್ಪಿಸಿದರೆ, ಬಳಿಕ ಸುದೀಪ್ ಘರಾಮಿ ಶೀಘ್ರ ಅವರು ಹೆಚ್ಚು ಸಮಯ ಮೈದಾನದಲ್ಲಿ ನಿಲ್ಲಿದೆ ಔಟ್ ಆದರು. ಈ ವೇಳೆ ಪೂರ್ವ ವಲಯ 147 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದೇ ವೇಳೆ ನಾಯಕ ಇಶಾನ್ ಕಿಶನ್ ಜೊತೆಗೂಡಿ ಶಿಖರ್ ಮೋಹನ್ ಅವರು 4ನೇ ವಿಕೆಟ್‌ಗೆ 94 ರನ್‌ಗಳ ಪ್ರಮುಖ ಪಾಲುದಾರಿಕೆ ಹಂಚಿಕೊಂಡರು. ದಕ್ಷಿಣ ವಲಯದ ಸ್ಪಿನ್ನರ್‌ಗಳಾದ ತ್ರಿಪುರಾನ ವಿಜಯ್ ಮತ್ತು ಶ್ರೇಯಸ್ ಗೋಪಾಲ್ ಅವರ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿದ ಮೋಹನ್ ವಿಕೆಟ್ ಕಾಯ್ದುಕೊಂಡರು. ತಮ್ಮ ಇನ್ನಿಂಗ್ಸ್‌ನಲ್ಲಿ ಎದುರಿಸಿದ 120 ಎಸೆತಗಳಲ್ಲಿ 81 ಡಾಟ್ ಬಾಲ್‌ಗಳನ್ನಾಡಿದರು. ಆದರೂ ಸಿಕ್ಕ ಸಣ್ಣ ಅವಕಾಶದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು.
ಶಿಖರ್ ಮೋಹನ್ ಶತಕ ಜಸ್ಟ್ ಮಿಸ್..
ಚೊಚ್ಚಲ ದುಲೀಪ್ ಟ್ರೋಫಿ ಪಂದ್ಯದಲ್ಲೇ ಶತಕದತ್ತ ಸಾಗುತ್ತಿದ್ದ ಶಿಖರ್ ಮೋಹನ್ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 85 ರನ್ ಗಳಿಸಿ, ಸಿ.ವಿ. ಮಿಲಿಂದ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಹೊರನಡೆದರು. ಶತಕ ಕೈತಪ್ಪಿದರೂ ಮೊದಲ ದಿನವೇ ತಂಡಕ್ಕೆ ತಡಿಗೋಡೆಯಾಗಿ ನಿಂತ ಮೋಹನ್ ಅವರ ಆಟವು ಪೂರ್ವ ವಲಯಕ್ಕೆ ದೊಡ್ಡ ಮೊತ್ತ ಕಲೆಹಾಕಲು ದಾರಿ ಮಾಡಿಕೊಟ್ಟಿತು ಎಂದು ಹೇಳಿದರೆ ತಪ್ಪಾಗಲಾರದು.


Click it and Unblock the Notifications
