Hardik Pandya: ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು? ಪಾಂಡ್ಯ ಹೆಸರು ತೆಗೆದ ನತಾಶಾ

ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಹಾರ್ದಿಕ್ ಪಾಂಡ್ಯ ಅವರ ಅದೃಷ್ಟವೇ ಕೈಕೊಟ್ಟಂತಿದೆ. ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಂದಲೇ ವಿರೋಧ ವ್ಯಕ್ತವಾಗಿದ್ದಲ್ಲದೆ, ಮೈದಾನದಲ್ಲೇ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು.

ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ಕಂಡಿದೆ. ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಅಭಿಯಾನ ಅಂತ್ಯಗೊಳಿಸಿದೆ. ಐಪಿಎಲ್‌ನಲ್ಲಿ ಅವರ ಪ್ರದರ್ಶನ ಕೂಡ ಕಳಪೆಯಾಗಿತ್ತು. ವಿರೋಧದ ನಡುವೆಯೂ ಅವರು ಭಾರತ ಟಿ20 ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

Rumors of Hardik Pandya and Natasa Stankovic s Separation Circulate on Social Media

ಒಂದರ ಮೇಲೊಂದು ಆಘಾತ ಎದುರಿಸುತ್ತಿರುವ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಅವರ ದಾಂಪತ್ಯದಲ್ಲಿ ಬಿರುಕ ಮೂಡಿದೆ ಎನ್ನುವ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಒಂದು ಈ ಊಹಾಪೋಹಗಳಿಗೆ ಕಾರಣವಾಗಿದೆ.

ಪಾಂಡ್ಯ ಹೆಸರು ತೆಗೆದ ನತಾಶಾ

ಮಾಜಿ ನಟಿ, ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಪಾಂಡ್ಯ' ಹೆಸರನ್ನು ತೆಗೆದುಹಾಕಿ, ಇಬ್ಬರೂ ಒಟ್ಟಿಗೆ ಇರುವ ಕೆಲವು ಚಿತ್ರಗಳನ್ನು ಅಳಿಸಿಹಾಕಿದ್ದಾರೆ. ಈ ಬೆಳವಣಿಗೆ ಪಾಂಡ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವ ಬಗ್ಗೆ ಅನುಮಾನ ಹೆಚ್ಚಾಗಲು ಕಾರಣವಾಗಿದೆ.

"ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟರೆ?" ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್ ನಂತರ ಈ ಊಹಾಪೋಹಕ್ಕೆ ರೆಕ್ಕೆ ಪುಕ್ಕ ಬಂದಿದೆ. ಸರ್ಬಿಯಾದ ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಅವರು ಮೇ 31, 2020 ರಂದು ಹಾರ್ದಿಕ್ ಪಾಂಡ್ಯರನ್ನು ವಿವಾಹವಾಗಿದ್ದರು.

ಈ ದಂಪತಿಗೆ ಅದೇ ವರ್ಷ ಜುಲೈ 30 ರಂದು ಗಂಡು ಮಗು ಜನಿಸಿತು. ದಂಪತಿ ತಮ್ಮ ಮಗುವಿಗೆ 'ಅಗಸ್ತ್ಯ' ಎಂದು ಹೆಸರಿಟ್ಟಿದ್ದಾರೆ. 2024 ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡಿದ್ದಕ್ಕೆ, ನತಾಶಾ ಅವರೂ ಕೂಡ ನಿಂದನೆಗೆ ಒಳಗಾಗಿದ್ದರು. ಕಮೆಂಟ್ ವಿಭಾಗದಲ್ಲಿ ಆಕೆಯನ್ನು ನಿಂದಿಸುವ, ಬೆದರಿಕೆ ಹಾಕುವ ಪೋಸ್ಟ್‌ಗಳನ್ನು ಹಾಕಲಾಯಿತು.

ರೆಡ್ಡಿಟ್‌ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದು, "ಇದು ಕೇವಲ ಊಹಾಪೋಹ. ಆದರೆ ಇಬ್ಬರೂ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪರಸ್ಪರ ಪೋಸ್ಟ್ ಮಾಡುತ್ತಿಲ್ಲ. ಈ ಹಿಂದೆ, ನತಾಶಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹಾಕಿಕೊಂಡಿದ್ದರು, ಆದರೆ ಈಗ ಅವರು ಪಾಂಡ್ಯ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ." ಎಂದು ಹೇಳಿದ್ದಾರೆ.

"ಮಾರ್ಚ್ 4 ರಂದು ನತಾಶಾ ಅವರ ಜನ್ಮದಿನವಾಗಿತ್ತು, ಆ ದಿನ ಹಾರ್ದಿಕ್ ಅವರಿಂದ ಯಾವುದೇ ಪೋಸ್ಟ್ ಇರಲಿಲ್ಲ; ಅವರು ಅಗಸ್ತ್ಯ ಅವರೊಂದಿಗೆ ಇದ್ದ ಪೋಸ್ಟ್ ಅನ್ನು ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಅವರ ಎಲ್ಲಾ ಇತ್ತೀಚಿನ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ." ಎಂದು ಹೇಳಿದ್ದಾರೆ.

ಟ್ರೋಲ್‌ಗಳಿಂದ ಬೇಸತ್ತು ನತಾಶಾ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದಾರಾ ಅಥವಾ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ಯಾ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ವದಂತಿಗಳ ಬಗ್ಗೆ ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಸ್ಟಾಂಕೋವಿಕ್ ಅವರ ಸಂಬಂಧದ ಸ್ಥಿತಿಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+