ವಿರಾಟ್ ಕೊಹ್ಲಿ ಬಗ್ಗೆ ಪಾಕಿಸ್ತಾನಿ ಬೌಲರ್ ಹಿಂಗಾ ಹೇಳೋದು?
ವಿರಾಟ್ ಕೊಹ್ಲಿ ಅಂದ್ರೆ ಆರ್‌ಸಿಬಿ ಫ್ಯಾನ್ಸ್‌ಗೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಅಚ್ಚುಮೆಚ್ಚು. ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಅಂತಾನೆ ವಿರಾಟ್ ಕೊಹ್ಲಿ ಅವರನ್ನ ಕರೆಯುತ್ತಾರೆ ಅಭಿಮಾನಿಗಳು. ಹೀಗಿದ್ದರೂ ವಿರಾಟ್ ಕೊಹ್ಲಿ ಅವರ ಬಗ್ಗೆ ಟೀಕೆ ಮಾಡುವವರಿಗೆ ಕಡಿಮೆ ಏನೂ ಇಲ್ಲ. ಆದರೆ ನಂದ್ ಎಲ್ಲಿ ಇಡ್ಲಿ ಅಂತಾ ಪಾಕಿಸ್ತಾನಿ ಆಟಗಾರ, ವಿರಾಟ್ ಕೊಹ್ಲಿ ವಿಚಾರದಲ್ಲಿ ಕಿತಾಪತಿ ಮಾಡಲು ಬಂದು ಹಿಗ್ಗಾಮುಗ್ಗಾ ಬೈಯಿಸಿಕೊಂಡು ಹೋಗಿದ್ದಾನೆ.
ವಿರಾಟ್ ಕೊಹ್ಲಿ ಆಟಕ್ಕೆ ನಿಂತರೆ ಯಾರಿಗೂ ಕೇರ್ ಮಾಡದೆ ಬ್ಯಾಟ್ ಬೀಸುತ್ತಾರೆ. ಹಾಗೇ, ತಮ್ಮ ಬ್ಯಾಟ್‌ನಿಂದ ಹರಿಯುವ ಪ್ರತಿ ರನ್ ಮೂಲಕ ಇತಿಹಾಸ ಸೃಷ್ಟಿ ಮಾಡುತ್ತಾರೆ ನಮ್ಮ ಕಿಂಗ್ ಕೊಹ್ಲಿ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಅವರನ್ನ ಕಂಡರೆ ಎಲ್ಲರಿಗೂ ತುಂಬಾನೆ ಜಾಸ್ತಿ ಲವ್. ಈಗಾಗಲೇ ಸಚಿನ್ ತೆಂಡುಲ್ಕರ್ ಅವರ ದಾಖಲೆಗಳನ್ನು ಸಹ ವಿರಾಟ್ ಕೊಹ್ಲಿ ಅವರು ಹಿಂದಿಕ್ಕಿದ್ದಾರೆ. ಹೀಗಿದ್ದರೂ ಕೊಹ್ಲಿ ಅವರ ವಿರುದ್ಧ ಟೀಕೆಗಳು ಪದೇ ಪದೇ ಕೇಳಿ ಬರುತ್ತವೆ. ಈಗಲೂ ಅಷ್ಟೇ ಐಪಿಎಲ್ ಮ್ಯಾಚ್‌ನಲ್ಲಿ ಶತಕ ಬಾರಿಸಿದ್ದರೂ ಕೊಹ್ಲಿ ವಿರುದ್ಧ ಟೀಕೆ ಕೇಳಿ ಬಂದಿದೆ. ಇದೇ ವೇಳೆ ಪಾಕಿಸ್ತಾನಿ ಆಟಗಾರ ಮೂಗು ತೂರಿಸಲು ಬಂದು ಸಖತ್ ಏಟು ತಿಂದು ಹೋಗಿದ್ದಾನೆ!

ಪಾಕಿಸ್ತಾನಿ ಆಟಗಾರ VS ಕಿಂಗ್ ಕೊಹ್ಲಿ!
17ನೇ ಸೀಸನ್‌ನ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಅವರದ್ದೇ ಹವಾ, ಹೀಗಾಗಿ ವಿರಾಟ್‌ಗೂ ಸಿಕ್ಕಾಪಟ್ಟೆ ಪ್ರೆಷರ್ ಇದೆ. ಪ್ರತಿ ಪಂದ್ಯದಲ್ಲಿಯೂ ಆರ್‌ಸಿಬಿ ಬೆನ್ನೆಲುಬಾಗಿ ನಿಂತು ವಿರಾಟ್ ಕೊಹ್ಲಿ ಹೋರಾಟ ನಡೆಸುತ್ತಿದ್ದಾರೆ. ಮೊನ್ನೆ ವಿರಾಟ್ ಕೊಹ್ಲಿ ಅವರು ರಾಜಸ್ಥಾನ ವಿರುದ್ಧ ಭರ್ಜರಿ ಶತಕ ಬಾರಿಸಿ, 113 ರನ್ ಗಳಿಸಿ ಔಟಾಗದೆ ಉಳಿದರು. ಆದರೆ ಈ ಪಂದ್ಯದಲ್ಲಿಯೂ ಆರ್‌ಸಿಬಿ ಸೋತು ಹೋಗಿದೆ. ಈ ಬಗ್ಗೆ ಕೆಲವರು ಟೀಕೆ ಮಾಡುವ ಹೊತ್ತಲ್ಲೇ ಪಾಕಿಸ್ತಾನದ ಬೌಲರ್ ಒಬ್ಬ ಬಾಯಿಗೆ ಬಂದಂತೆ ಹೇಳಿಕೆ ನೀಡಿ, ಭಾರತೀಯರಿಂದ ಸರಿಯಾಗಿ ಮಾತಿನ ಪೆಟ್ಟು ತಿಂದಿದ್ದಾನೆ.
ಪಾಕಿಸ್ತಾನಿ ಆಟಗಾರನಿಗೆ ಸರಿಯಾಗಿ ತಿರುಗೇಟು!
ರಾಜಸ್ಥಾನ ವಿರುದ್ಧ ವಿರಾಟ್ ಕೊಹ್ಲಿ 4 ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿ 72 ಎಸೆತಗಳಲ್ಲಿ 113 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ವಿರಾಟ್ ಶತಕವು ಐಪಿಎಲ್ ಟೂರ್ನಿಯಲ್ಲಿ ನಿಧಾನ ಶತಕ ಎಂಬ ಕುಖ್ಯಾತಿ ಕೂಡ ಪಡೆದಿದೆ. ಇದರ ಬಗ್ಗೆ ಹಲವರು ಟೀಕೆ ಮಾಡುವಾಗ ಪಾಕಿಸ್ತಾನಿ ಆಟಗಾರ ಜುನೈದ್ ಖಾನ್, ತಮ್ಮ ಎಕ್ಸ್ ಅಕೌಂಟ್‌ನಲ್ಲಿ 'ಐಪಿಎಲ್ ಇತಿಹಾಸದಲ್ಲಿ ನಿಧಾನಗತಿ 100 ರನ್ ಗಳಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆ' ಅಂತಾ, ಒಂದು ಪೋಸ್ಟ್‌ನ ಹಾಕಿ ಬರೆದುಕೊಂಡಿದ್ದ. ಇದಕ್ಕೆ ಭಾರತೀಯರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
Congratulations Virat kholi on the slowest 💯 in the history of IPL#RRvRCB #IPL2024
— Junaid khan (@JunaidkhanREAL) April 6, 2024
ಒಟ್ನಲ್ಲಿ ಪಾಕಿಸ್ತಾನದ ಕ್ರಿಕೆಟ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಪಾಕಿಸ್ತಾನದ ಈ ಕೆಟ್ಟ ಕ್ರಿಕೆಟ್ ವ್ಯವಸ್ಥೆ ಬಗ್ಗೆ ಮಾತನಾಡದ ಪಾಕ್ ಆಟಗಾರ, ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿ ಇದೀಗ ಸಿಕ್ಕಾಪಟ್ಟೆ ಮಾತಿನ ಏಟು ತಿಂದು ಹೋಗಿದ್ದಾನೆ. ಈಗ ಆತ ಸುಮ್ಮನೆ ಇದ್ದರೆ ಎಲ್ಲಾ ಸರಿಯಾಗುತ್ತೆ, ಇಲ್ಲದೆ ಹೋದ್ರೆ ಮತ್ತೆ ಎಲ್ಲಾ ಕೆಟ್ಟು ಹೋಗುತ್ತೆ!












Click it and Unblock the Notifications