RCB Vs CSK: ಆರ್‌ಸಿಬಿ ತಂಡಕ್ಕೆ ಸ್ಫೋಟಕ ಬ್ಯಾಟರ್, ಬೌಲರ್‌ ಎಂಟ್ರಿ: ಪಂದ್ಯಕ್ಕೂ ಮುನ್ನ ಸಿಎಸ್‌ಕೆಗೆ ನಡುಕ ಶುರು

RCB Vs CSK: ಈಗಾಗಲೇ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಕೆಕೆಆರ್ ವಿರುದ್ಧ ಗೆದ್ದು ಬೀಗಿದೆ. ಇದೀಗ ಮಾರ್ಚ್‌ 28ರಂದು ಸಿಎಸ್‌ಕೆ ವಿರುದ್ಧ ಆಡಿ ಗೆಲುವು ಸಾಧಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸ್ಫೋಟಕ ಬ್ಯಾಟರ್ ಹಾಗೂ ಬೌಲರ್‌ ಕಣಕ್ಕಿಳಿಸಲು ಮುಂದಾಗಿದೆ. ಹಾಗಾದ್ರೆ ಆ ಬ್ಯಾಟರ್ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕೊಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ, ಚೆನ್ನೈ ಕೂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮೊದಲ ಈ ಆವೃತ್ತಿಯ ಮೊದಲ ಪಂದ್ಯವನ್ನು ಗೆದ್ದಿದೆ. ಈ ಮೂಲಕ ಎರಡು ತಂಡಗಳು ಈ ಆವೃತ್ತಿಯಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿವೆ.

Royal Challengers Bengaluru Vs CSK Jacob Bethell Likely to Entry for RCB team

ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಎಂ.ಎ.ಚಿದಂಬರಂ ಮೈದಾನದಲ್ಲಿ ಈ ಆವೃತ್ತಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಲಿವೆ. ಈಗಾಗಲೇ ಎರಡೂ ತಂಡಗಳು ಈ ಆವೃತ್ತಿಯಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿವೆ. ಇನ್ನು ನಾಳೆಯ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲು ಎರಡು ತಂಡಗಳು ಸಹ ತಯಾರಿ ನಡೆಸುತ್ತಿವೆ. ಆದರೆ, ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡಕ್ಕೆ ಭಯವೊಂದು ಶುರುವಾಗಿಬಿಟ್ಟಿದೆಯಂತೆ.

ಆರ್ಸಿಬಿಯು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಸ್ಫೋಟಕ ಹಿಟ್ಟರ್ ಜೇಕಬ್ ಬೆಥೆಲ್ ಅವರನ್ನು ಕಣಕ್ಕಿಳಿಸಲು ಮುಂದಾಗಿರುವ ಆರ್‌ಸಿಬಿ ಪ್ಲಾನ್‌ಗೆ ಸಿಎಸ್‌ಕೆ ತಂಡ ದಂಗಾಗಿಬಿಟ್ಟಿದೆಯಂತೆ. ಮೊದಲ ಪಂದ್ಯದಿಂದ ಹೊರಗಿದ್ದ ಬೆಥೆಲ್ ಈ ಪಂದ್ಯದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Royal Challengers Bengaluru Vs CSK Jacob Bethell Likely to Entry for RCB team

ಮೊದಲ ಪಂದ್ಯದಂತೆಯೇ ಚೈನ್ನೇ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲೂ ಮೊದಲ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಹಾಗೂ ಪಿಲಿಫ್‌ ಸಾಲ್ಟ್​ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. 3ನೇ ಕ್ರಮಾಂಕದಲ್ಲಿ ನಾಯಕ ರಜತ್​ ಪಾಟಿದಾರ್​ ಇರಲಿದ್ದಾರೆ. 4 ಮತ್ತು 5ರಲ್ಲಿ ಲಿವಿಂಗ್ ​ಸ್ಟೋನ್​ ಮತ್ತು ಜೇಕಬ್​ ಬೆಥೆಲ್​ ಕಣಕ್ಕಿಳಿಸುವ ಸಾಧ್ಯತೆಯಿದೆ. ಇನ್ನು ಪ್ರಮುಖವಾಗಿ ಫಿನಿಶಿಂಗ್​ ಜವಾಬ್ದಾರಿಯನ್ನು ಕೃನಾಲ್​ ಪಾಂಡ್ಯಗೆ ನೀಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಬೌಲಿಂಗ್​ ವಿಭಾಗಕ್ಕೆ ಬಂದರೆ ಕಳೆದ ಮೊದಲ ಪಂದ್ಯದಲ್ಲಿ ಹೊರಡೆ ಉಳಿದಿದ್ದ ವೇಗಿ ಭುವನೇಶ್ವರ್​ ಕುಮಾರ್ ಈ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ​ಇವರಿಗೆ ಜೋಶ್​ ಹೆಜಲ್​ವುಡ್​, ಯಶ್​ ದಯಾಳ್​ ವೇಗದ ಬೌಲರ್‌ಗಳು ಸಾಥ್​ ನೀಡಲಿದ್ದಾರೆ. ಇನ್ನು ಸುಯೇಶ್​ ಶರ್ಮಾ ಪ್ರಮುಖ ಸ್ಪಿನ್ನರ್​ ಆಗಿದ್ದರೆ, ಆಲ್​ರೌಂಡರ್​ಗಳಾದ ಕೃನಾಲ್​ ಪಾಂಡ್ಯ, ಲಿವಿಂಗ್​ಸ್ಟೋನ್ ಮತ್ತು ಜೇಕಬ್​ ಬೆಥೆಲ್​ ಇವರಿಗೆ ಸಾಥ್‌ಗೆ ಇರಲಿದೆ ಎನ್ನಲಾಗುತ್ತಿದೆ.

ಆರ್‌ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್/ಜೇಕಬ್​ ಬೆಥೆಲ್​, ಕೃನಾಲ್ ಪಾಂಡ್ಯ, ಭುವನೇಶ್ವರ್​ ಕುಮಾರ್​, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ಸಿಎಸ್‌ಕೆ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂ.ಎಸ್.ಧೋನಿ (ವಿ.ಕೀ.), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+