‘ಆರ್‌ಸಿಬಿ ಬಿಟ್ಟು ತೊಲಗು...’ ಸ್ಟಾರ್ ಆಟಗಾರನ ವಿರುದ್ಧ ರೊಚ್ಚಿಗೆದ್ದ... Royal Challengers
ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರಿಗೆ ಕ್ರಿಕೆಟ್ ಆಡುವುದಕ್ಕೆ ಬರೋದೆ ಇಲ್ವಾ? ಈ ರೀತಿಯ ಪ್ರಶ್ನೆಯನ್ನ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ ಬಳಗ ಕೇಳುತ್ತಿದೆ, ಆರ್‌ಸಿಬಿ ಆಟಗಾರರ ವಿರುದ್ಧ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ಈ ರೀತಿ ನಿನ್ನೆ ಪಂಜಾಬ್ ವಿರುದ್ಧ ಭೀಕರ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯರ್ಸ್ ವಿರುದ್ಧವೇ ಅಭಿಮಾನಿಗಳು ತೀವ್ರ ಆಕ್ರೋಶ ಹೊರಗೆ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 'ಆರ್‌ಸಿಬಿ ಬಿಟ್ಟು ತೊಲಗು...' ಸ್ಟಾರ್ ಆಟಗಾರನ ವಿರುದ್ಧ ರೊಚ್ಚಿಗೆದ್ದ...
ಬೆಂಗಳೂರು ತಂಡವನ್ನು ಐಪಿಎಲ್ ಅಖಾಡದಲ್ಲಿ ಪ್ರತಿನಿಧಿಸುವ ಆರ್‌ಸಿಬಿ ತಂಡಕ್ಕೆ ಇಡೀ ಜಗತ್ತಿನಲ್ಲೇ ಇಲ್ಲದಷ್ಟು ನೀಯತ್ತಿನ ಅಭಿಮಾನಿಗಳು ಇದ್ದಾರೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಒಂದು ಬಾರಿಯೂ ಕಪ್ ಗೆದ್ದಿಲ್ಲ, ಆದರೆ ಆರ್‌ಸಿಬಿ ತಂಡ ಕಪ್ ಗೆದ್ದಿಲ್ಲ ಅನ್ನೋ ಬೇಜಾರು ಅಭಿಮಾನಿಗಳಿಗೆ ಇಲ್ಲವೇ ಇಲ್ಲ ಬಿಡಿ. ಯಾಕಂದ್ರೆ ಗೆದ್ದರೂ, ಸೋತರೂ ಆರ್‌ಸಿಬಿ ನಮ್ಮ ತಂಡ ಅಂತಾನೇ ಹೆಮ್ಮೆಯಿಂದ ಎದೆಯನ್ನ ತಟ್ಟಿಕೊಂಡು ಅಭಿಮಾನಿಗಳು ಓಡಾಡ್ತಾರೆ. ಹೀಗಿದ್ದಾಗಲೇ, 'ಆರ್‌ಸಿಬಿ ಬಿಟ್ಟು ತೊಲಗು...' ಸ್ಟಾರ್ ಆಟಗಾರನ ವಿರುದ್ಧ ರೊಚ್ಚಿಗೆದ್ದ...

'ಆರ್‌ಸಿಬಿ ಬಿಟ್ಟು ತೊಲಗು...'
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಂಡರೆ ದೊಡ್ಡ, ದೊಡ್ಡ ಆಟಗಾರರೇ ಹೆದರಿ ಮೂಲೆ ಸೇರಿಕೊಳ್ಳುತ್ತಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದ್ರೆ ನಮ್ಮ ಆರ್‌ಸಿಬಿ ತಂಡದ ಆಟಗಾರರನ್ನು ಯಾರೂ ಕೆಣಕುವುದಿಲ್ಲ. ಅಕಸ್ಮಾತ್ ಕೆಣಕಿಬಿಟ್ಟರೆ ಅವರ ಕ್ರಿಕೆಟ್ ಜೀವನವೇ ಮುಗಿದು ಹೋಯಿತು ಅಂತಾನೇ ಅರ್ಥ. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಐಪಿಎಲ್ ಮ್ಯಾಚ್ ನಡೀತಾ ಇದೆ ಅಂದ್ರೆ ಅಲ್ಲಿ ತಂಡ ಯಾವುದೇ ಇರಲಿ ಬಿಡಿ ಆದರೆ ಹವಾ ಮಾತ್ರ ನಮ್ಮ ಆರ್‌ಸಿಬಿ ಅಭಿಮಾನಿಗಳದ್ದೇ ಆಗಿರುತ್ತೆ. ಹೀಗಿದ್ದಾಗಲೇ, 'ಆರ್‌ಸಿಬಿ ಬಿಟ್ಟು ತೊಲಗು...' ಸ್ಟಾರ್ ಆಟಗಾರನ ವಿರುದ್ಧ ರೊಚ್ಚಿಗೆದ್ದ...
ಬೆಂಗಳೂರು ಬಿಟ್ಟು ತೊಲಗಲು ಆಗ್ರಹ!
ಅಂದಹಾಗೆ ನಿನ್ನೆ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಎದುರು ಸೋಲು ಕಂಡಿತ್ತು. ನಮ್ಮ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬರುತ್ತಿದ್ದ ಕಾರಣ ಮ್ಯಾಚ್ ನಿಂತು, ಕೇವಲ 14 ಓವರ್‌ಗೆ ಮ್ಯಾಚ್ ಕಟ್ ಮಾಡಿ ಆಡಿಸಲಾಯಿತು. ಆರ್‌ಸಿಬಿ ತಂಡ 14 ಓವರ್‌ಗೆ 95 ರನ್ ಗಳಿಸಿ, ಪಂಜಾಬ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು. ಆದರೆ ಪಂಜಾಬ್ ತಂಡ ಕೇವಲ 12.1 ಓವರ್‌ಗೆ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಗೆದ್ದಿತು. ಹೀಗಿದ್ದಾಗ, ಲಿಯಾಮ್ ಲಿವಿಂಗ್‌ಸ್ಟೋನ್ ಹೀನಾಯ ಪ್ರದರ್ಶನ ಮುಂದುವರಿಸಿರುವ ಕಾರಣ ಆರ್‌ಸಿಬಿಗೆ ಸೋಲು ಎದುರಾಗುತ್ತಿದೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಆರ್‌ಸಿಬಿ ತಂಡದ ವಿದೇಶಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಪಂಜಾಬ್ ಎದುರು ಕೇವಲ 4 ರನ್ ಗಳಿಸಿದ್ದು, ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಗುಜರಾತ್ ಮೇಲೆ ಬಿಟ್ಟರೆ ಎಲ್ಲಾ ಪಂದ್ಯದಲ್ಲೂ ಲಿಯಾಮ್ ಲಿವಿಂಗ್‌ಸ್ಟೋನ್ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ 15 ರನ್ ಗಳಿಸಿದ್ದ ಲಿವಿಂಗ್‌ಸ್ಟೋನ್, ಚೆನ್ನೈ ವಿರುದ್ಧ 10 ರನ್, ಆ ನಂತರ ಗುಜರಾತ್ ವಿರುದ್ಧ 54 ರನ್ ಸಿಡಿಸಿದ್ದು ಬಿಟ್ಟರೆ ಸಾಲು ಸಾಲು ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ವಿರುದ್ಧ 0 ಸುತ್ತಿ ಡಕ್ ಔಟ್ ಆಗಿದ್ದರು ಲಿವಿಂಗ್‌ಸ್ಟೋನ್, ಆ ನಂತರ ಡೆಲ್ಲಿ ವಿರುದ್ಧ 4 ರನ್ & ಪಂಜಾಬ್ ವಿರುದ್ಧ ಕೂಡ ಕೇವಲ 4 ರನ್ ಗಳಿಸಿದ್ದು ಸಿಕ್ಕಾಪಟ್ಟೆ ಕೋಪ ತರಿಸಿದೆ. ಹೀಗಾಗಿಯೇ ಇದೀಗ, 'ಆರ್‌ಸಿಬಿ ಬಿಟ್ಟು ತೊಲಗು ಲಿಯಾಮ್ ಲಿವಿಂಗ್‌ಸ್ಟೋನ್...' ಅಂತಾ ಆಗ್ರಹಿಸುತ್ತಿದ್ದಾರೆ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿ ಬಳಗ.
ಮ್ಯಾಕ್ಸ್‌ವೆಲ್ ವಿರುದ್ಧವೂ ಆಕ್ರೋಶ!
ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಅನ್ನೋದೇ ಒಂದು ಹಬ್ಬವಾಗಿದೆ, ಪ್ರತಿ ವರ್ಷ ಐಪಿಎಲ್ ಹಬ್ಬ ಸಂಭ್ರಮದಿಂದ ನಡೆದುಕೊಂಡು ಹೋಗುತ್ತಿದೆ. ಆದ್ರೆ ಐಪಿಎಲ್ ಅಖಾಡದಲ್ಲಿ ಕೆಲ ಆಟಗಾರರು ತುಂಬ ಕೆಟ್ಟ ಹೆಸರು ಪಡೆದು ಟ್ರೋಲ್ ಆಗುತ್ತಿದ್ದು, ಐಪಿಎಲ್-2025 ಆಡಲು ಬಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಕೂಡ ಅದೇ ರೀತಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೇ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಇಷ್ಟೆಲ್ಲದರ ನಡುವೆ ಪಂಜಾಬ್ ತಂಡ ಕೂಡ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೈಕೊಟ್ಟು, ಆಟವನ್ನೇ ಆಡಿಸದೆ ಕಾಯಿಸುತ್ತಿರುವುದು ಕುತೂಹಲ ಕೆರಳಿಸಿದೆ.












Click it and Unblock the Notifications