ಟೂತ್ ಪೇಸ್ಟ್‌ನಲ್ಲಿ ಉಪ್ಪು... ಆರ್‌ಸಿಬಿ ಗೆಲ್ಲುತ್ತೆ ಕಪ್ಪು... Royal Challengers

ಬೆಂಗಳೂರಲ್ಲಿ ನಿನ್ನೆ ಆರ್‌ಸಿಬಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಪಂಜಾಬ್ ತಂಡದ ಎದುರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರಿ ದೊಡ್ಡ ಸೋಲು ಕಂಡಿದೆ. ಆರ್‌ಸಿಬಿ ಅಭಿಮಾನಿಗಳು ಇದನ್ನು ನೋಡಿ ಕಣ್ಣೀರು ಹಾಕಿದ್ರೂ, ನಮ್ಮ ಬೆಂಗಳೂರು ತಂಡವನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಹೀಗಿದ್ದಾಗಲೇ, 'ಟೂತ್ ಪೇಸ್ಟ್‌ನಲ್ಲಿ ಉಪ್ಪು... ಆರ್‌ಸಿಬಿ ಗೆಲ್ಲುತ್ತೆ ಕಪ್ಪು...'...

ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ತಮ್ಮ ಜೀವ ಬೇಕಾದರೂ ಬಿಟ್ಟು ಕೊಡ್ತಾರೆ, ಬಿಟ್ಟು ಹೋದ ಲವರ್‌ಗೂ ಗುಡ್‌ಬೈ ಹೇಳುತ್ತಾರೆ ಆದರೆ ಆರ್‌ಸಿಬಿ ತಂಡವನ್ನ ಮಾತ್ರ ಬಿಟ್ಟು ಕೊಡುವುದಿಲ್ಲ. ಎಷ್ಟೇ ಮ್ಯಾಚ್ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ನೀಯತ್ತಾಗಿ ಇರುತ್ತಾರೆ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳು. ಹೀಗಿದ್ದಾಗ ನಿನ್ನೆ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಎದುರು ಸೋಲು ಕಂಡಿತ್ತು. ನಮ್ಮ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬರುತ್ತಿದ್ದ ಕಾರಣ ಮ್ಯಾಚ್ ನಿಂತು, ಕೇವಲ 14 ಓವರ್‌ಗೆ ಮ್ಯಾಚ್ ಕಟ್ ಮಾಡಿ ಆಡಿಸಲಾಯಿತು....

Royal Challengers Bengaluru Team Fan Poster At Chinnaswamy Stadium Is Attracting The People

'ಟೂತ್ ಪೇಸ್ಟ್‌ನಲ್ಲಿ ಉಪ್ಪು... ಆರ್‌ಸಿಬಿ...'

ಆರ್‌ಸಿಬಿ ತಂಡ 14 ಓವರ್‌ಗೆ 95 ರನ್ ಗಳಿಸಿ, ಪಂಜಾಬ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು. ಆದರೆ ಪಂಜಾಬ್ ತಂಡ ಕೇವಲ 12.1 ಓವರ್‌ಗೆ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಗೆದ್ದಿತು. ಇದನ್ನು ಕಂಡು ನಮ್ಮ ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಕಣ್ಣೀರು ಹಾಕಿದರು. ಹೀಗಿದ್ದಾಗಲೇ, 'ಟೂತ್ ಪೇಸ್ಟ್‌ನಲ್ಲಿ ಉಪ್ಪು... ಆರ್‌ಸಿಬಿ ಗೆಲ್ಲುತ್ತೆ ಕಪ್ಪು...'...

ಐಪಿಎಲ್ ಟೂರ್ನಿಗೆ ಉಳಿದ 9 ತಂಡಗಳದ್ದು ಒಂದು ಲೆಕ್ಕ, ಆರ್‌ಸಿಬಿ ತಂಡದ್ದೇ ವಿಶೇಷ ಲೆಕ್ಕ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಂಡರೆ ದೊಡ್ಡ, ದೊಡ್ಡ ಆಟಗಾರರೇ ಹೆದರಿ ಮೂಲೆ ಸೇರಿಕೊಳ್ಳುತ್ತಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದ್ರೆ ನಮ್ಮ ಆರ್‌ಸಿಬಿ ತಂಡದ ಆಟಗಾರರನ್ನು ಯಾರೂ ಕೆಣಕುವುದಿಲ್ಲ. ಅಕಸ್ಮಾತ್ ಕೆಣಕಿಬಿಟ್ಟರೆ ಅವರ ಕ್ರಿಕೆಟ್ ಜೀವನವೇ ಮುಗಿದು ಹೋಯಿತು ಅಂತಾನೇ ಅರ್ಥ. ಇಂತಹ ಸಮಯದಲ್ಲೇ, ಆರ್‌ಸಿಬಿ ತಂಡದ ಪುಟಾಣಿ ಅಭಿಮಾನಿ ಒಬ್ಬ 'ಟೂತ್ ಪೇಸ್ಟ್‌ನಲ್ಲಿ ಉಪ್ಪು, ಆರ್‌ಸಿಬಿ ಕಪ್ಪು' ಅನ್ನೋ ಪೋಸ್ಟರ್ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಣಿದಾಡಿರುವುದು ಈಗ ಫುಲ್ ವೈರಲ್ ಆಗುತ್ತಿದೆ.

ರಕ್ತದ ಕಣ ಕಣದಲ್ಲೂ ಆರ್‌ಸಿಬಿ!

ಒಟ್ನಲ್ಲಿ ಆರ್‌ಸಿಬಿ ತಂಡದ ಕುರಿತು ಅಭಿಮಾನಿಗಳಿಗೆ ಇರುವ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ, ಯಾಕಂದ್ರೆ ಆರ್‌ಸಿಬಿ ತಂಡದ ಅಭಿಮಾನಿಗಳು ತಮ್ಮ ರಕ್ತದ ಕಣ ಕಣದಲ್ಲೂ ಈ ತಂಡವನ್ನು ಬರೆದುಕೊಂಡಿದ್ದಾರೆ ಅಂತಾ ಕಾಣುತ್ತದೆ. ಈ ಅಭಿಮಾನ ಇನ್ನೂ ಹಲವಾರು ವರ್ಷಗಳ ಕಾಲ ಇದೇ ರೀತಿ ಮುಂದುವರಿಯುತ್ತದೆ. ಆರ್‌ಸಿಬಿ ಕಪ್ ಗೆದ್ದರೂ, ಆರ್‌ಸಿಬಿ ಕಪ್ ಗೆಲ್ಲದೇ ಹೋದರೂ ಅಭಿಮಾನಿಗಳು ಮಾತ್ರ ಸಾವಿರಾರು ವರ್ಷ ಕಾಯಲು ಸಿದ್ಧ ಅಂತಾರೆ ಫ್ಯಾನ್ಸ್. ಹೀಗಾಗಿ ಆರ್‌ಸಿಬಿ ತಂಡಕ್ಕೆ ದಿನದಿಂದ ದಿನಕ್ಕೆ ಬೆಂಬಲ ಕೂಡ ಜಾಸ್ತಿ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+