RCB vs RR: ಆರ್‌ಸಿಬಿ ಹೊಸ ಅಧ್ಯಾಯ ಮುಗಿಯಿತಾ? ಅಭಿಮಾನಿಗಳ ಮನದ ಮಾತು ಕೇಳಿ!

ಆರ್‌ಸಿಬಿ ತಂಡ ನಿನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಂಡ ನಂತರ ಭಾರಿ ನೋವು ಆವರಿಸಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ 6 ಮ್ಯಾಚ್ ಗೆದ್ದ ನಂತರ, ಈ ಸಲ ಕಪ್ ನಮ್ದೇ ಅಂತಾ ಅಭಿಮಾನಿಗಳು ಎದೆಯುಬ್ಬಿಸಿದ್ದರು. ಹೀಗಿದ್ರೂ ಆರ್‌ಸಿಬಿ ತಂಡ ಎಲಿಮಿನೇಷನ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋತು, ಟೂರ್ನಿಯಿಂದ ಹೊರಬಿದ್ದಿದೆ. ಹೀಗಿದ್ದಾಗ ಬೆಂಗಳೂರು ತಂಡದ ಫ್ಯಾನ್ಸ್ ಏನ್ ಹೇಳ್ತಿದ್ದಾರೆ ಗೊತ್ತಾ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

ವಿರಾಟ್ ಕೊಹ್ಲಿ ಈ ಬಾರಿ ಆರ್‌ಸಿಬಿ ತಂಡದ ಗೆಲುವಿಗೆ ಪಣತೊಟ್ಟು ನಿಂತಿದ್ದರು. ಹೀಗಾಗಿ ಅಭಿಮಾನಿಗಳು ಕೂಡ ಆರ್‌ಸಿಬಿ ಪುರುಷರ ತಂಡ ಕಪ್ ಗೆಲ್ಲುತ್ತೆ, 16 ವರ್ಷಗಳ ಆಸೆ ಈ ವರ್ಷ ಈಡೇರುತ್ತೆ ಅಂತಾ ಕಾಯುತ್ತಿದ್ರು. ಯಾಕಂದ್ರೆ ಆರ್‌ಸಿಬಿ ಬೆಂಗಳೂರು ತಂಡ ಐಪಿಎಲ್ ಟೂರ್ನಿ ಮಾತ್ರವಲ್ಲ ಕನ್ನಡಿಗರ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಈ ತಂಡವನ್ನ ತಮ್ಮ ರಕ್ತದ ಕಣ ಕಣದಲ್ಲೂ ಬೆರೆಸಿಕೊಂಡಿದ್ದು ಇದೇ ವರ್ಷ ಆರ್‌ಸಿಬಿ ತಂಡದ ಮಹಿಳಾ ಆಟಗಾರ್ತಿಯರು ಕಪ್ ಗೆದ್ದು ಬೀಗಿದ್ದಾರೆ.

Royal Challengers Bengaluru Fans Are Saying This About RCB Hosa Adhyaya

ಹೀಗಾಗಿ ವಿರಾಟ್ ಕೊಹ್ಲಿ ಈ ಸಾಲಿನ IPL ಟೂರ್ನಿ ಆರಂಭದ ವೇಳೆ 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದಿದ್ದರು. ಹೀಗಿದ್ದರೂ ಆರ್‌ಸಿಬಿ ತಂಡ ಈಗ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದೆ. ಅಲ್ಲದೆ ನಿನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿದೆ. ಈ ಕುರಿತು ಫ್ಯಾನ್ಸ್ ಏನ್ ಹೇಳ್ತಿದ್ದಾರೆ ಗೊತ್ತಾ? ಆರ್‌ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾರೆ ಮುಂದೆ ಓದಿ.

ಗೆದ್ದರೂ.. ಸೋತರೂ.. ಆರ್‌ಸಿಬಿ!

'ಆರ್‌ಸಿಬಿ' ಅಭಿಮಾನಿಗಳು ನಮ್ಮ ಬೆಂಗಳೂರು ತಂಡಕ್ಕೆ ಅದೆಷ್ಟು ಸಪೋರ್ಟ್ ಮಾಡುತ್ತಾರೆ, ಹೇಗೆಲ್ಲಾ ಬೆಂಬಲ ನೀಡುತ್ತಾರೆ ಅಂತಾ ಜಗತ್ತಿಗೆ ಗೊತ್ತು. ಆರ್‌ಸಿಬಿ ಫ್ಯಾನ್ಸ್ ಜೋಶ್ ನೋಡಿದ ಹಿರಿಯ ಕ್ರಿಕೆಟ್ ಆಟಗಾರರು ಕೂಡ ಹೆಮ್ಮೆಯ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ನಮ್ಮ ಆರ್‌ಸಿಬಿ ಮಾತ್ರ ಗೆಲುವು ಸಾಧಿಸುತ್ತಿಲ್ಲ. ಅದರಲ್ಲೂ ಈ ಬಾರಿ ಐಪಿಎಲ್ ಟೂರ್ನಿಯ ಆರಂಭದಲ್ಲಿ ಭಾರಿ ಹೀನಾಯ ಪ್ರದರ್ಶನ ನೀಡಿತ್ತು. ಆ ನಂತರ ಸತತ 6 ಗೆಲುವು ಕಂಡು ಆರ್‌ಸಿಬಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿತ್ತು.

3 ಮ್ಯಾಚ್ ಗೆದ್ದಿದ್ದರೆ ಕಪ್ ಸಿಗುತ್ತಿತ್ತು!

ಸತತ ಗೆಲುವಿನ ಖುಷಿ ನಡುವೆ ಆರ್‌ಸಿಬಿ ತಂಡ ಎಲಿಮಿನೇಷನ್ ಮ್ಯಾಚ್ ಆಡಿ ಸೋತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದ್ದರೂ, ರಾಜಸ್ಥಾನ ವಿರುದ್ಧ ಸೋತ ಆರ್‌ಸಿಬಿ ತಂಡಕ್ಕೆ ಬೆನ್ನು ತಟ್ಟಿದ್ದಾರೆ. ಅಲ್ಲದೆ ಸೋಲು & ಗೆಲುವು ಮಾಮೂಲು, ನಾವು ಎಂದೆಂದಿಗೂ ಆರ್‌ಸಿಬಿ ಪರ ಅಂತಿದ್ದಾರೆ ಫ್ಯಾನ್ಸ್. ಅಭಿಮಾನಿಗಳ ಈ ಮಾತು ಇದೀಗ ಸೋಷಿಯಲ್ ಮೀಡಿಯಾ ಸೇರಿದಂತೆ ವಾಟ್ಸಾಪ್ ಸ್ಟೇಟಸ್ ಮೇಲೆ ರಾರಾಜಿಸುತ್ತಿದೆ. ಹಾಗೇ, ಆರ್‌ಸಿಬಿ ತಂಡ ಮುಂದಿನ ಸಲ ಕಪ್ ಗೆಲ್ಲುತ್ತೆ ಅಂತಾ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+